ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?

By:
Subscribe to Oneindia Kannada

ನವದೆಹಲಿ, ಜೂನ್ 14: ಭಾರತದ ಮುಂದಿನ ರಾಷ್ಟ್ರಪತಿಯಾಗಿ ಡಾ. ಮುರಳಿ ಮನೋಹರ್ ಜೋಶಿ ಅವರು ಪೀಠವನ್ನು ಅಲಂಕರಿಸಬೇಕು ಎಂಬುದು ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಕನಸಾಗಿದೆ. ಹಿರಿಯ ನಾಯಕ ಡಾ. ಎಂಎಂ ಜೋಶಿ ಅವರ ಆಯ್ಕೆ ಬಹುತೇಕ ಖಚಿತ ಎನ್ನಬಹುದು. ಆದರೆ, ದೇಶದ ಪ್ರಥಮ ಪ್ರಜೆ ಸ್ಥಾನಕ್ಕೆ ಇನ್ನೂ ಕೆಲವು ಗಣ್ಯರ ಹೆಸರು ಕೇಳಿ ಬಂದಿದೆ.

ಇಂಡಿಯಾ.ಕಾಂ ವರದಿಯಂತೆ 82 ವರ್ಷ ವಯಸ್ಸಿನ ಮುರಳಿ ಮನೋಹರ್ ಜೋಶಿ ಅವರು ಈ ಹಿಂದೆ ತಮ್ಮ ಸಂಸದೀಯ ಕ್ಷೇತ್ರವನ್ನು ನರೇಂದ್ರ ಮೋದಿ ಅವರಿಗೆ ಬಿಟ್ಟುಕೊಟ್ಟಿದ್ದಕ್ಕೆ ಈಗ ಪ್ರತಿ ಉಪಕಾರ ಪಡೆಯುತ್ತಿದ್ದಾರೆ. ಕೇಸರಿ ಧ್ವಜ ಹಿಡಿದು ಆರೆಸ್ಸೆಸ್ ತತ್ವ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಬಂದಿರುವ ಜೋಶಿ ಅವರ ಬೆಂಬಲಕ್ಕೆ ಆರೆಸ್ಸೆಸ್ ಸಹಜವಾಗಿ ನಿಂತಿದೆ. [ರಾಷ್ಟ್ರಪತಿ ಸ್ಥಾನಕ್ಕೆ ಮುರಳಿ ಮನೋಹರ್ ಜೋಶಿ ಅಭ್ಯರ್ಥಿ?]

BJP wants MM Joshi to become next President of India who else in the race

ಎಲ್ ಕೆ ಅಡ್ವಾಣಿ, ಯಶವಂತ್ ಸಿನ್ಹಾರಂತೆ ಎಂಎಂ ಜೋಶಿ ಅವರು ಮೋದಿ ವಿರುದ್ಧ ಯಾವುದೇ ನಡೆ ಇಟ್ಟಿಲ್ಲ. ಅಲ್ಲದೆ, ಜೋಶಿ ಅವರ ಆಯ್ಕೆ ಮೂಲಕ ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆ 2017ರಲ್ಲಿ ಬ್ರಾಹ್ಮಣರ ಮತಗಳನ್ನು ಸೆಳೆಯುವುದು ಬಿಜೆಪಿಗೆ ಸುಲಭವಾಗಲಿದೆ.

ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?

ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ

ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?

ವಸತಿ ಸಚಿವ ವೆಂಕಯ್ಯ ನಾಯ್ಡು

ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?

ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್

ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?

ನಟ ಅಮಿತಾಬ್ ಬಚ್ಚನ್ ಅವರು ಪ್ರಧಾನಿ ಮೋದಿ ಜತೆಗಿನ ಚಿತ್ರ

ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?

ಮೋದಿ ಸಂಪುಟದ ದಲಿತ ಪ್ರತಿನಿಧಿ ತಾವರ್ ಚಂದ್ ಗೆಹ್ಲೋಟ್

ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?

ಬುಡಕಟ್ಟು ಜನಾಂಗದ ರಾಜ್ಯಪಾಲೆ ದ್ರೌಪತಿ ಮುರ್ಮು

ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?

ಎನ್ ಸಿಪಿ ವರಿಷ್ಠ ಶರದ್ ಪವಾರ್

ರಾಷ್ಟ್ರಪತಿ ಸ್ಥಾನಕ್ಕೆ ಜೋಶಿ ಅಲ್ಲದೆ ಬಿಗ್ ಬಿ, ವೆಂಕಯ್ಯ?

ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್

ರಾಷ್ಟ್ರಪತಿ ಸ್ಥಾನಕ್ಕೆ ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರ ಹೆಸರು ಕೇಳಿ ಬಂದಿತ್ತು. ಆದರೆ, ಈ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ. ಮಿಕ್ಕಂತೆ ಕೇಂದ್ರ ಸಚಿವ ಸಂಪುಟ ಸದಸ್ಯ, ವಸತಿ ಸಚಿವ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ತಾವರ್ ಚಂದ್ ಗೆಹ್ಲೋಟ್, ಬುಡಕಟ್ಟು ಜನಾಂಗದ ರಾಜ್ಯಪಾಲೆ ದ್ರೌಪತಿ ಮುರ್ಮು, ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯ್ಕ್ ಅಲ್ಲದೆ ನಟ ಅಮಿತಾಬ್ ಬಚ್ಚನ್, ಎನ್ ಸಿಪಿ ವರಿಷ್ಠ ಶರದ್ ಪವಾರ್ ಹೆಸರುಗಳು ಕೇಳಿ ಬಂದಿವೆ.

English summary
Bharatiya Janata Party (BJP), wants Murli Manohar Joshi to be the candidate for the Presidential election. Who else in the race check it out
Please Wait while comments are loading...