ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಗಳ ಹುಡುಕಾಟದಲ್ಲಿ ಬಿಜೆಪಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜುಲೈ 14: ವಿಪಕ್ಷಗಳು ಮಹಾತ್ಮಾ ಗಾಂಧಿ ಮೊಮ್ಮಗನನ್ನು ಉಪರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ ಬೆನ್ನಿಗೆ ಬಿಜೆಪಿ ಮೇಲೆ ಒತ್ತಡ ಬಿದ್ದಿದೆ. ಇದೀಗ ತನ್ನ ಅಭ್ಯರ್ಥಿಯ ಆಯ್ಕೆ ಬಗ್ಗೆ ಕೇಸರಿ ಪಕ್ಷ ತಲೆಕೆಡಿಸಿಕೊಂಡಿದೆ.

ಈ ದೇಶದ 'ನಾಗರಿಕರ ಅಭ್ಯರ್ಥಿ' ನಾನು: ಗೋಪಾಲಕೃಷ್ಣ ಗಾಂಧಿಈ ದೇಶದ 'ನಾಗರಿಕರ ಅಭ್ಯರ್ಥಿ' ನಾನು: ಗೋಪಾಲಕೃಷ್ಣ ಗಾಂಧಿ

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಕ್ಷದ ಹಿರಿಯ ಮುಖಂಡರ ಜತೆ ನಿರಂತರ ಸಭೆಗಳನ್ನು ನಡೆಸುತ್ತಿದ್ದಾರೆ. ಇನ್ನು ಸಂಸದೀಯ ಮಂಡಳಿ ಸಭೆ ಸದ್ಯದಲ್ಲೇ ನಡೆಯಲಿದ್ದು ಈ ಸಭೆಯಲ್ಲಿ ಬಿಜೆಪಿ ತನ್ನ ಅಂತಿಮ ಆಯ್ಕೆಯನ್ನು ನಿರ್ಧರಿಸಲಿದೆ.

BJP looks for insider as candidate for next Vice President of India

ಮುಖ್ಯವಾಗಿ ಉಪರಾಷ್ಟ್ರಪತಿಗಳಾದವರು ರಾಜ್ಯಸಭಾ ಸ್ಪೀಕರ್ ಕೂಡಾ ಆಗಿರುವುದರಿಂದ ಮೇಲ್ಮನೆಯನ್ನು ಮುನ್ನಡೆಸುವ ಸಾಮರ್ಥ್ಯ ಇರುವವರಿಗಾಗಿ ಬಿಜೆಪಿ ಹುಡುಕಾಡುತ್ತಿದೆ. ಜತೆಗೆ ಬಿಜೆಪಿಯ ಮೂಲ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವವರು ಪಕ್ಷಕ್ಕೆ ಬೇಕಾಗಿದ್ದಾರೆ.

ಉಪರಾಷ್ಟ್ರಪತಿ ಚುನಾವಣೆ: ಗೋಪಾಲ ಕೃಷ್ಣ ಗಾಂಧಿ ವಿಪಕ್ಷಗಳ ಅಭ್ಯರ್ಥಿಉಪರಾಷ್ಟ್ರಪತಿ ಚುನಾವಣೆ: ಗೋಪಾಲ ಕೃಷ್ಣ ಗಾಂಧಿ ವಿಪಕ್ಷಗಳ ಅಭ್ಯರ್ಥಿ

ಬಿಜೆಪಿ ಮೂಲಗಳ ಪ್ರಕಾರ ಪಕ್ಷದ ಒಳಗಿನವರಿಗೆ ಮಣೆ ಹಾಕಲು ಬಿಜೆಪಿ ನಿರ್ಧರಿಸಿದೆ. ಪಕ್ಷದ ಹೊರಗಿನವರನ್ನು ಆಯ್ಕೆ ಮಾಡುವ ಸಾಧ್ಯತೆಗಳು ತುಂಬಾ ಕಡಿಮೆ. ಇನ್ನು ಆಗಸ್ಟ್ 5 ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಅಂದೇ ಮತ ಎಣಿಕೆಯೂ ನಡೆಯಲಿದೆ.

English summary
The BJP led by Prime Minister Narendra Modi and national president of the party, Amit Shah held discussions with senior leaders on the selection of a candidate for the next Vice President of India. The opposition has already declared Gopal Krishna Gandhi as its candidate for the VP elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X