ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಕುದುರೆ ಕಾಲು ಮುರಿದ್ರೆ ಸುಮ್ನೆ ಬಿಟ್ಟಾರೆಯೆ?

|
Google Oneindia Kannada News

ನವದೆಹಲಿ, ಮಾರ್ಚ್ 17: ಕುದುರೆ ಕಾಲು ಮುರಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರಾಖಂಡದ ಬಿಜೆಪಿ ಮುಖಂಡ ಪ್ರಮೋದ್ ಬೋರಾ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಪ್ರತಿಭಟನೆ ವೇಳೆ ಪೊಲೀಸ್ ಕುದುರೆ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಲಾಗಿದೆ. ಗಣೇಶ್ ಜೋಶಿ ಸೇರಿದಂತೆ ಉತ್ತರಾಖಂಡದ ಬಿಜೆಪಿ ನಾಯಕರ ವಿರುದ್ಧ ಅಮಾನವೀಯ ವರ್ತನೆ ಆಧಾರದಲ್ಲಿ ಎಫ್ ಐ ಆರ್ ದಾಖಲು ಮಾಡಿಕೊಳ್ಳಲಾಗಿತ್ತು.['ಕುದುರೆ ಕಾಲು ಮುರಿದಿದ್ರೆ, ನನ್ನ ಕಾಲು ಮುರಿಯಲಿ']

horse

ಡೆಹರಾಡೂನ್ ನಲ್ಲಿ ಮಾರ್ಚ್ 14 ರಂದು ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭನೆ ವೇಳೆ ಗಣೇಶ್ ಜೋಶಿ ಸೇರಿದಂತೆ ಅನೇಕರು ಪೊಲೀಸ್ ಕುದುರೆ ಮೇಲೆ ಅಮಾನವೀಯ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಘಟನೆಯಲ್ಲಿ ಕುದುರೆ ಗಂಭೀರಗಿ ಗಾಯಗೊಂಡಿತ್ತು, ಅಲ್ಲದೆ ಕುದುರೆಯ ಮುಂಗಾಲು ಮುರಿದುಹೋಗಿತ್ತು.[6 ಕೋಟಿ ರೂ.ಗೆ ಗಂಡು ಕುದುರೆ ಖರೀದಿಸಿದ ಮಲ್ಯ!]

ಎಲ್ಲರ ಕಣ್ಣಿಗೆ ಕಾಣುವಂತೆ ನಡುರಸ್ತೆಯಲ್ಲಿ ಕುದುರೆ ಕಾಲು ಮುರಿದ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, 'ನಾನು ಯಾವ ತಪ್ಪು ಮಾಡಿಲ್ಲ, ನಾನು ತಪ್ಪಿತಸ್ಥ ಎಂದು ಸಾಬೀತಾದರೆ ನನ್ನ ಕಾಲನ್ನು ಕಡಿದು ಹಾಕಿ' ಎಂದು ಜೋಶಿ ಅವರು ಬುಧವಾರ ಘೋಷಣೆ ಸಹ ಹಾಕಿದ್ದರು. ಆದರೆ ಪೊಲೀಸರು ಮತ್ತೊಬ್ಬ ಮುಖಂಡ ಪ್ರಮೋದ್ ಬೋರಾ ಅವರನ್ನು ಬಂಧಿಸಿದ್ದಾರೆ.

English summary
BJP worker Pramod Bora was arrested on Thursday, March 17 in connection with attack on police horse 'Shaktiman' from Haldwani, Uttarakhand. The arrest was made by police for breaking the horse legs during protest march in the state. 'Shaktiman', a police horse was allegedly beaten by BJP's Mussoorie MLA Ganesh Joshi during a protest march held in Dehradun on March 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X