ರಾಷ್ಟ್ರದ ಉದ್ದಗಲಕ್ಕೂ ಹರಡುತ್ತಿದೆ ಕೇಸರಿ ಹೊದಿಕೆ!

ಬಿಜೆಪಿಯ ಬಹುದಿನಗಳ ಕನಸಾದ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುವ ಕನಸು ಹಂತಹಂತವಾಗಿ ಈಡೇರುತ್ತಿರುವುದು ಸತ್ಯವಾಗುತ್ತಿದೆ. ತನ್ನ ಈ ಕನಸಿನಲ್ಲಿ ಶೇ. 41ರಷ್ಟನ್ನು ಈಗಾಗಲೇ ಸಾಧಿಸಿರುವ ಬಿಜೆಪಿಗೆ ಈಗ ಮತ್ತಷ್ಟು ಸಾಧನೆಯತ್ತ ಹೆಜ್ಜೆ ಇಡುವ ವಿಶ್ವ

Subscribe to Oneindia Kannada

ಶನಿವಾರ ಹೊರಬಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶವು ಭಾರತೀಯ ಜನತಾ ಪಾರ್ಟಿಯ ಕೈ ಚೀಲದೊಳಕ್ಕೆ ಮತ್ತೆ ಮೂರು ರಾಜ್ಯಗಳನ್ನು ತಂದು ಹಾಕಿದೆ.

ಇದರಿಂದಾಗಿ, ದೇಶದಲ್ಲಿ ಬಿಜೆಪಿ ಈಗ ಸರಿಯಾಗಿ 12 ರಾಜ್ಯಗಳಲ್ಲಿ ಅಧಿಕಾರ ಗದ್ದುಗೆಯನ್ನೇರಿದಂತಾಗಿದೆ. ಶನಿವಾರ ಹೊರಬಿದ್ದ ಚುನಾವಣಾ ಫಲಿತಾಂಶವು ಉತ್ತರ ಪ್ರದೇಶ, ಉತ್ತರಾಖಾಂಡ, ಮಣಿಪುರಗಳಲ್ಲಿ ಅಧಿಕಾರಕ್ಕೇರುವ ಅಥವಾ ಆ ಸಾಧ್ಯತೆಗಳನ್ನು ಹೆಚ್ಚಿಸಿರುವ ಪ್ರಮೇಯವನ್ನು ತಂದಿತ್ತಿವೆ.

Live :ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್

ಇದರಿಂದಾಗಿ, ಬಿಜೆಪಿಯ ಬಹುದಿನಗಳ ಕನಸಾದ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುವ ಕನಸು ಹಂತಹಂತವಾಗಿ ಈಡೇರುತ್ತಿರುವುದು ಸತ್ಯವಾಗುತ್ತಿದೆ. ತನ್ನ ಈ ಕನಸಿನಲ್ಲಿ ಶೇ. 41ರಷ್ಟನ್ನು ಈಗಾಗಲೇ ಸಾಧಿಸಿರುವ ಬಿಜೆಪಿಗೆ ಈಗ ಮತ್ತಷ್ಟು ಸಾಧನೆಯತ್ತ ಹೆಜ್ಜೆ ಇಡುವ ವಿಶ್ವಾಸ ಮೂಡಿದೆ.[ಚುನಾವಣೆ ಸೋಲು: ರಾಹುಲ್ ಗಾಂಧಿ ರಾಜಕೀಯ ಅವನತಿ]

ಅಧಿಕಾರವಂತೂ ಇದೆಯಲ್ವಾ?

ಜಮ್ಮು ಕಾಶ್ಮೀರ ಹಾಗೂ ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗಿರುವುದು ಬಿಟ್ಟರೆ, ಮಿಕ್ಕೆಲ್ಲಾ ರಾಜ್ಯಗಳಲ್ಲಿ ಬಿಜೆಪಿ ಬಹುಮತದ ಸರ್ಕಾರವನ್ನೇ ಹೊಂದಿದೆ.

ಬಿಜೆಪಿ ಕನಸಿಗೆ ಇಂಬು ಕೊಟ್ಟ ಪಂಚರಾಜ್ಯ ಫಲಿತಾಂಶ

ಶನಿವಾರ ಹೊರಬಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದ ಮೇಲೆ, ಭಾರತದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳೆಂದರೆ, ಜಮ್ಮು ಕಾಶ್ಮೀರ, ಉತ್ತರಾಖಾಂಡ, ಹರ್ಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್ ಗಢ, ಜಾರ್ಖಂಡ್, ಉತ್ತರ ಪ್ರದೇಶ, ಅಸ್ಸಾಂ, ಅರುಣಾಚಲ ಪ್ರದೇಶ ರಾಜ್ಯಗಳು ಬಿಜೆಪಿ ಹಿಡಿತದಲ್ಲಿವೆ.

ಇಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಮೇಲುಗೈ

ಇನ್ನು, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ತ್ರಿಪುರಾ ಹಾಗೂ ದೆಹಲಿಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ಸರ್ಕಾರಗಳಿವೆ.

ಕರ್ನಾಟಕದಲ್ಲೂ ಕಾಂಗ್ರೆಸ್

ಕರ್ನಾಟಕ, ಪಂಜಾಬ್, ಹಿಮಾಚಲ ಪ್ರದೇಶ, ಮೇಘಾಲಯ, ಮಣಿಪುರ, ಮಿಜೋರಂಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ.

ಕರ್ನಾಟಕದಲ್ಲಿ ಬಿಜೆಪಿಗೆ ಪೂರಕ ವಾತಾವರಣ

ಹೀಗೆ, ದೇಶದ ಬಹುತೇಕ ರಾಜ್ಯಗಳಲ್ಲಿ ಈಗಾಗಲೇ ಕಮಲ ಅರಳಿದೆ. ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿಕಾರ ಸ್ಥಾಪಿಸುವ ಸನ್ನಿವೇಶವೂ ಸದ್ಯಕ್ಕೆ ಸೃಷ್ಟಿಯಾಗಿದೆ. ಅದು ನಿಜವಾದಲ್ಲಿ ಕಾಂಗ್ರೆಸ್ ಮುಕ್ತ ಭಾರತದ ಕನಸು ಶೇ. 44ರಷ್ಟು ನನಸಾಗಲಿದೆ.

English summary
With the Five states election results declared on March 11th 2017, BJP has increased its Power number in States to 12. To achieve its 'Congress Mukth Bharat' dream still it needs 17 victories. But as far as now, it has succeeded to spread Saffron blanket on 41 % portion of India.
Please Wait while comments are loading...