ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಲೋಪ: ಈ ಗ್ರಾಮದಲ್ಲಿ 1,000 ಜನರು ಹುಟ್ಟಿದ್ದು ಜನವರಿ 1ರಂದು!

ಉತ್ತರ ಪ್ರದೇಶದ ಪುಟ್ಟ ಗ್ರಾಮ ಕಂಜಾಸದಲ್ಲಿ ಒಂದು ಸಾವಿರ ಜನರು ಜನವರಿ ಒಂದರಂದೇ ಹುಟ್ಟಿದ್ದಾರೆ! ಹಾಗಂಥ ಇದೇನು ಪವಾಡ ನಡೆದಿದ್ದಲ್ಲ. ಬದಲಾಗಿ ಆಧಾರ ಕಾರ್ಡಿನಲ್ಲಾದ ತಪ್ಪಿನಿಂದಾಗಿ ಇವರೆಲ್ಲರ ಜನ್ಮ ದಿನಾಂಕ ಜನವರಿ 1 ಎಂದೇ ನಮೂದಾಗಿದೆ.

By Sachhidananda Acharya
|
Google Oneindia Kannada News

ಲಕ್ನೋ, ಮೇ 23: ಕೇವಲ 5,000 ಸಾವಿರ ಜನಸಂಖ್ಯೆ ಇರುವ ಉತ್ತರ ಪ್ರದೇಶದ ಪುಟ್ಟ ಗ್ರಾಮ ಕಂಜಾಸ. ಆದರೆ ಇಲ್ಲಿ ಒಂದು ಸಾವಿರ ಜನರು ಜನವರಿ ಒಂದರಂದೇ ಹುಟ್ಟಿದ್ದಾರೆ! ಹಾಗಂಥ ಇದೇನು ಪವಾಡ ನಡೆದಿದ್ದಲ್ಲ. ಬದಲಾಗಿ ಆಧಾರ ಕಾರ್ಡಿನಲ್ಲಾದ ತಪ್ಪಿನಿಂದಾಗಿ ಇವರೆಲ್ಲರ ಜನ್ಮ ದಿನಾಂಕ ಜನವರಿ 1 ಎಂದೇ ನಮೂದಾಗಿದೆ.

ಆದರೆ ಇವರೆಲ್ಲರ ಹುಟ್ಟಿದ ವರ್ಷ ಮಾತ್ರ ಬೇರೆ ಬೇರೆಯಾಗಿ ದಾಖಲಾಗಿದೆ. ದಿನ ಮಾತ್ರ ಒಂದೇ ಇದೆಯಂತೆ. ಇನ್ನು ಈ ಕುರಿತು ತನಿಖೆ ನಡೆಸಲು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಿ ಆದೇಶ ನೀಡಿದೆ.

Bizarre in Aadhaar: 1,000 Card Holders In UP Village With January 1 As Birth Date

"ತಾಂತ್ರಿಕ ದೋಷದಿಂದ ಈ ರೀತಿ ಒಂದೇ ರೀತಿಯ ದಿನಾಂಕ ನಮೂದಾಗಿರಬಹುದು. ತನಿಖೆಗೆ ಆದೇಶ ನೀಡಲಾಗಿದೆ. ಒಮ್ಮೆ ತನಿಖೆ ಪೂರ್ಣಗೊಂಡ ನಂತರ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುತ್ತದೆ," ಇಲ್ಲಿನ ಜಸ್ರಾ ಬ್ಲಾಕ್ ಅಭಿವೃದ್ಧಿ ಅಧಿಕಾರಿ ನೀರಜ್ ದುಬೆ ಹೇಳಿದ್ದಾರೆ.

ಇನ್ನು ಇವರಿಗೆಲ್ಲಾ ಹೊಸ ಆಧಾರ್ ಕಾರ್ಡನ್ನು ತಕ್ಷಣವೇ ನೀಡಲಾಗುವುದು ಎಂದೂ ಅವರು ಮಾಹಿತಿ ನೀಡಿದ್ದಾರೆ.

English summary
When their Aadhaar cards arrived, about 1,000 excited villagers date of birth to be January 1, for all of them. A technical goof up led ton 1,000 person in Kanjasa Village having January 1 as their official date of birth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X