ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಬೈರೆನ್ ಸಿಂಗ್

ಬಿಜೆಪಿಯ ಬೈರೆನ್ ಸಿಂಗ್ ಮಣಿಪುರದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಇಂದು ಸಂಜೆ ಇಂಫಾಲದಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಅವರನ್ನು ಶಾಸಾಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು ನೂತನ ಮುಖ್ಯಮಂತ್ರಿಯಾಗಲಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 3: ಬಿಜೆಪಿಯ ಬೈರೆನ್ ಸಿಂಗ್ ಮಣಿಪುರದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಇಂದು ಸಂಜೆ ಇಂಫಾಲದಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಅವರನ್ನು ಶಾಸಾಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು ನೂತನ ಮುಖ್ಯಮಂತ್ರಿಯಾಗಲಿದ್ದಾರೆ.

ಸದ್ಯದಲ್ಲೇ ಬೈರೇನ್ ಸಿಂಗ್ ರಾಜ್ಯಪಾಲರನ್ನು ಭೇಟಿಯಾಗಲಿದ್ದು ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಈ ಹಿಂದೆ ಟಿ ಬಿಸ್ವಜಿತ್ ಕೂಡಾ ಮುಖ್ಯಮಂತ್ರಿ ರೇಸಿನಲ್ಲಿದ್ದರು. ಆದರೆ ಈಗ ಬೈರೇನ್ ಸಿಂಗ್ ಪಕ್ಷದಿಂದ ಮುಖ್ಯಮಂತ್ರಿ ಹುದ್ದೆಯ ಕಟ್ಟಾಳುವಾಗಿ ಆಯ್ಕೆಯಾಗಿದ್ದಾರೆ.[ಈಶಾನ್ಯ ಭಾರತದ ಹೆಬ್ಬಾಗಿಲು ಮಣಿಪುರದ ಸಿಎಂ ಗದ್ದುಗೆ ಯಾರಿಗೆ?]

Biren Singh will be new Chief Minister of Manipur

ರಾಜ್ಯದಲ್ಲಿ ಬಿಜೆಪಿ ಮೊದಲ ಬಾರಿಗೆ ಸರಕಾರ ರಚಿಸುತ್ತಿದ್ದು ಬೈರೇನ್ ಸಿಂಗ್ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಲಿದ್ದಾರೆ. ಅಂದ ಹಾಗೆ ಈಶಾನ್ಯ ರಾಜ್ಯಗಳಲ್ಲೇ ಇದು ಬಿಜೆಪಿಯ ಮೊದಲ ಸರಕಾರವಾಗಿದೆ.

Biren Singh will be new Chief Minister of Manipur

ನಾಂಗ್ತೊಂಬಂ ಬೈರೆನ್ ಸಿಂಗ್

ನಾಂಗ್ತೊಂಬಂ ಬೈರೆನ್ ಸಿಂಗ್ ರಾಷ್ಟ್ರಮಟ್ಟದ ಫೂಟ್ಬಾಲ್ ಆಟಗಾರರೂ ಹೌದು. ನಂತರ ಅವರ ಪತ್ರಕರ್ತರಾಗಿಯೂ ಸೇವೆ ಸಲ್ಲಿಸಿದ್ದರು. ಇದಾದ ಬಳಿಕ 2003ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 2007ರಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಸಚಿವರಾಗಿದ್ದರು. ನಂತರ ಕಾಂಗ್ರೆಸಿನ ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ವಿರುದ್ಧ ಬಂಡಾಯವೆದ್ದು, 2016ರಲ್ಲಿ ಬಿಜೆಪಿ ಸೇರಿದ್ದರು. ಅವರಿಗೆ ರಾಜ್ಯದಲ್ಲಿ ಚುನಾವಣೆಯ ಉಸ್ತುವಾರಿ ಹಾಗೂ ಪಕ್ಷದ ವಕ್ತಾರರನ್ನಾಗಿ ನೇಮಿಸಿತ್ತು. ರಾಜ್ಯದಲ್ಲಿ ಬಿಜೆಪಿ ಇಷ್ಟು ದೊಡ್ಡ ಮಟ್ಟದ ಗೆಲುವು ಸಾಧಿಸುವಲ್ಲಿ ಬೈರೆನ್ ಸಿಂಗ್ ಪಾತ್ರ ಬಹಳ ದೊಡ್ಡದು.

English summary
Biren Singh of the BJP is all set to be the new Chief Minister of Manipur. He has just been appointed as the leader of the legislature party. He will meet with the Governor shortly and stake a claim to form the government in Manipur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X