ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಸೇನೆಯ ಮುಖ್ಯಸ್ಥರಾಗಿ ಲೆ.ಜ. ಬಿಪಿನ್ ರಾವತ್ ಅಧಿಕಾರ ಸ್ವೀಕಾರ

By Ramesh
|
Google Oneindia Kannada News

ನವದೆಹಲಿ, ಡಿಸೆಂಬರ್. 31 : ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಶನಿವಾರ ಭಾರತೀಯ ಭೂಸೇನೆಯ ನೂತನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದರು.

ಈ ಮೊದಲು ಇದ್ದ ಲೆಫ್ಟಿನೆಂಟ್ ಜನರಲ್ ದಲ್ಬೀರ್ ಸಿಂಗ್ ಅವರಿಂದ ಅಧಿಕಾರ ಸ್ವೀಕರಿಸಿದರು. ಅಧಿಕಾರ ಹಸ್ತಾಂತರಿಸುವ ಮೊದಲು ನಿವೃತ್ತಿ ಹೊಂದಲಿರುವ ದಲ್ಬೀರ್ ಸಿಂಗ್ ಹಾಗೂ ವಾಯುಪಡೆ ಮುಖ್ಯಸ್ಥ ಅನುಪ್ ರಾಹಾ ಇಂಡಿಯಾ ಗೇಟ್ ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. [ದೇಶದ 4 ಪ್ರಮುಖ ಹುದ್ದೆಗಳಿಗೆ ಹೊಸ ಮುಖ್ಯಸ್ಥರ ನೇಮಕ]

Bipin Rawat takes over as new Indian Army chief

ದೇಶದ ಗೌರವವನ್ನು ಕಾಪಾಡಲು ತ್ಯಾಗ-ಬಲಿದಾನಗಳನ್ನು ನೀಡಿದ ಯೋಧರಿಗೆ ನನ್ನ ನಮನಗಳು ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ದಲ್ಬೀರ್ ಸಿಂಗ್ ಹೇಳಿದರು.

ಏಕ ಶ್ರೇಣಿ ಏಕ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿರುವುದಕ್ಕೆ ಪ್ರಧಾನಿ ಮೋದಿ ಹಾಗೂ ಸರ್ಕಾರಕ್ಕೆ ನಿವೃತ್ತ ದಲ್ಬೀರ್ ಸಿಂಗ್ ಧನ್ಯವಾದ ಸಲ್ಲಿಸಿದರು.

ಭಾರತೀಯ ಸೇನೆಯು ಆಂತರಿಕ ಹಾಗೂ ಬಾಹ್ಯ ಸವಾಲಗಳೆನ್ನದುರಿಸಲು ಸಮರ್ಥವಾಗಿದೆ ಎಂದಿರುವ ಅವರು ಮಾತುಗಳಿಗಿಂತ ಕೃತಿಯೇ ಮುಖ್ಯವಾಗಿರಬೇಕೆಂದು ನಂಬಿದವನು ನಾನು ಎಂದು ಹೇಳಿದರು.

English summary
Lt Gen Bipin Rawat has taken over as the head of the 1.3 million strong Indian Army, succeeding General Dalbir Singh Suhag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X