ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ

By Mahesh
|
Google Oneindia Kannada News

ನವದೆಹಲಿ, ಸೆ. 09: ಕೇಂದ್ರ ಚುನಾವಣಾ ಆಯೋಗದ ಬುಧವಾರದಂದು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸಿದೆ. ಚುನಾವಣಾ ಆಯುಕ್ತ ನಸೀಂ ಜೈದಿ ಅವರು ನೀಡಿದ ವಿವರ ಮುಂದಿದೆ.

243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಶಾಸಕರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಾಗಿದೆ.

ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಿರೀಕ್ಷೆ ಇದೆ. ಅದರೆ, ಇತ್ತೀಚೆಗೆ ಮಹಾ ಮೈತ್ರಿಕೂಟದಿಂದ ಸಮಾಜವಾದಿ ಪಕ್ಷ ಹಿಂದೆ ಸರಿದಿರುವುದು ಎನ್ ಡಿಎ ಮಿತ್ರ ಪಕ್ಷಗಳಿಗೆ ನೆರವಾಗುವ ಸಾಧ್ಯತೆಯಿದೆ.

ಕಳೆದ ಹತ್ತು ವರ್ಷಗಳಿಂದ ಬಿಹಾರ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿರುವ ಜೆಡಿಯುನ ನಿತೀಶ್‌ಕುಮಾರ್, ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದಾರೆ. ಈ ಹಿಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾಗಿದ್ದ ಜೆಡಿಯು, 2013ರ ಜೂನ್‌ನಲ್ಲಿ ಅದರೊಂದಿಗಿನ ಸಂಬಂಧ ಕಡಿದುಕೊಂಡಿತ್ತು.[ಸಮರಕ್ಕೂ ಮುನ್ನವೇ ಹಿಂದೆಸರಿದ ಮೈತ್ರಿ ಕೂಟದ ಕಿಂಗ್]

Election Commission to announce the schedule and phases of Bihar Assembly polls
* ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಆರ್‌ಜೆಡಿ ಮತ್ತು ಜೆಡಿಯು ಮೈತ್ರಿ ಮಾಡಿಕೊಂಡಿವೆ.
* ಬಿಹಾರ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 243.

* ಮೈತ್ರಿಕೂಟದಲ್ಲಿರುವ ಎನ್ ಸಿಪಿ ಹಾಗೂ ಐಎನ್ ಎಲ್ ಡಿ ಕೂಡಾ ಇದಕ್ಕೆ ಬಹುತೇಕ ಸಮ್ಮತಿಸಿತ್ತು.
* ಆದರೆ, ಸೀಟು ಹಂಚಿಕೆ ಬಗ್ಗೆ ಅಪಸ್ವರ ತೆಗೆದಿರುವ ಸಮಾಜವಾದಿ ಪಕ್ಷ ಬಿಹಾರದಲ್ಲಿ ಏಕಾಂಗಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದೆ.
* ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ದಲ್ಲಿ ಪಕ್ಷದ ಚಿನ್ಹೆ ಜೊತೆಗೆ ಅಭ್ಯರ್ಥಿಗಳ ಭಾವಚಿತ್ರ ಕೂಡಾ ಇರುತ್ತದೆ.
* ಸುಮಾರು 6.6 ಕೋಟಿ ಜನಕ್ಕೆ ಮತದಾನ ಮಾಡುವ ಹಕ್ಕು ಈ ಬಾರಿ ಸಿಕ್ಕಿದೆ.

ಐದು ಹಂತಗಳಲ್ಲಿ ಚುನಾವಣೆ:
* ಸೆ. 15 ಅಧಿಸೂಚನೆ ಪ್ರಕಟಣೆ ದಿನಾಂಕ

* ಮೊದಲ ಹಂತಕ್ಕೆ
- ಸೆ. 23 : ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ
* ಅಕ್ಟೋಬರ್ 12 ಮೊದಲ ಹಂತದ ಮತದಾನ

* ಎರಡನೇ ಹಂತಕ್ಕೆ- ಸೆ.28: ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ
* ಅಕ್ಟೋಬರ್ 16 ಎರಡನೇ ಹಂತದ ಮತದಾನ

* ಮೂರನೇ ಹಂತಕ್ಕೆ : ಅಕ್ಟೋಬರ್ 8- ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ
* ಅಕ್ಟೋಬರ್ 28 : ಮತದಾನ ಮೂರನೇ ಹಂತ

*ನಾಲ್ಕನೇ ಹಂತಕ್ಕೆ : ಅಕ್ಟೋಬರ್ 14 : ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ
* ನವೆಂಬರ್ 1 ನಾಲ್ಕನೇ ಹಂತಕ್ಕೆ ಮತದಾನ

* ಐದನೇ ಹಂತಕ್ಕೆ: ಅಕ್ಟೋಬರ್ 15 :ನಾಮ ಪತ್ರ ಸಲ್ಲಿಕೆಗೆ ಕೊನೆ ದಿನಾಂಕ
* ನವೆಂಬರ್ 5: 5ನೇ ಹಂತದ ಮತದಾನ

* ನವೆಂಬರ್ 8 ಭಾನುವಾರ ಎಲ್ಲಾ ಹಂತದ ಮತ ಎಣಿಕೆ

English summary
The Election Commission Chief Nasim Zaidi announced the assembly elections dates for high-voltage Bihar.Elections will be conducted in five phases: Oct 12, Oct 16, Oct 28, Nov 1, Nov 5. Results will be announced on Nov 8.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X