ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಮತ ಹಾಕಿದ್ರೆ ಸ್ಕೂಟಿ ಜೊತೆಗೆ ಪೆಟ್ರೋಲ್, ಲ್ಯಾಪ್ ಟಾಪ್ ಫ್ರೀ

|
Google Oneindia Kannada News

ಪಾಟ್ನಾ, ಅ 5: ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತನ್ನ vision document ಅನ್ನು ಬಿಡುಗಡೆ ಮಾಡಿದ್ದು, ಯುವ ಸಮುದಾಯದ ಮೇಲೆ ಎಂದಿನಂತೆ ವಿಶೇಷ ಒಲವು ತೋರಿದೆ.

ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದು ಹೋಗಿರುವ ಬಿಜೆಪಿ ಒಂದು ವೇಳೆ ತಾನು ಅಧಿಕಾರಕ್ಕೆ ಬಂದರೆ ಐದು ಸಾವಿರ ಸ್ಕೂಟಿಯನ್ನು ವಿದ್ಯಾರ್ಥಿನಿಯರಿಗೆ ವಿತರಿಸಲಾಗುವುದು, ಜೊತೆಗೆ ಉಚಿತ ಪೆಟ್ರೋಲ್ ಕೂಡಾ ವಿತರಿಸಲಾಗುವುದು ಎಂದು ಅಪರೂಪದ ಆಫರ್ ನೀಡಿದೆ.

ಅಧಿಕಾರಕ್ಕೆ ಬಂದರೆ ಅರ್ಹ ವಿದ್ಯಾರ್ಥಿಗಳಿಗೆ ಐವತ್ತು ಸಾವಿರ ಲ್ಯಾಪ್ ಟಾಪ್ ವಿತರಿಸುವುದಾಗಿ ಈಗಾಗಲೇ ಬಿಜೆಪಿ ಹೇಳಿದೆ. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳಿಸುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲಾಗುವುದೆಂದು ಬಿಹಾರದ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ. (ಬಿಹಾರ ಸಮೀಕ್ಷೆ: ನಿತೀಶ್ ಗೆ ಮುಖಭಂಗ)

ಸ್ಕೂಟಿ ವಿತರಿಸಲು ಷರತ್ತು ವಿಧಿಸಿರುವ ಬಿಜೆಪಿ, ಎಸ್ಎಸ್ಎಲ್ ಸಿ ಅಥವಾ ಪಿಯುಸಿಯಲ್ಲಿ ಉತ್ತಮ ಮಾರ್ಕ್ ಗಳಿಸುವ ವಿದ್ಯಾರ್ಥಿಯನಿಯರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ ಎಂದಿದೆ. ಜೊತೆಗೆ ದಲಿತ ಮತ್ತು ಮಹಾದಲಿತ ಸಮುದಾಯಕ್ಕೆ ಉಚಿತ ಟಿವಿ ನೀಡಲಾಗುವುದೆಂದು ಭರವಸೆ ನೀಡಿದೆ.

ಪ್ರತೀ ಜಿಲ್ಲೆಗೆ ವರ್ಷಕ್ಕೆ ನೂರು ಸ್ಕೂಟಿಯಂತೆ ವಿತರಿಸಲಾಗುವುದು ಜೊತೆಗೆ ಎರಡು ವರ್ಷ ಪೆಟ್ರೋಲ್ ವಿತರಿಸಲಾಗುವುದು ಎಂದು ಬಿಜೆಪಿ ಹೇಳಿದೆ. ಉತ್ತರಪ್ರದೇಶ ಚುನಾವಣೆಯ ಸಮಯದಲ್ಲಿ ಮುಲಾಯಂ ಯಾದವ್ ಲ್ಯಾಪ್ ಟಾಪ್ ಯೋಜನೆ ಘೋಷಿಸಿ ಯಶಸ್ಸನ್ನು ಪಡೆದಿದ್ದರು. ಆ ಯೋಜನೆಯನ್ನು ಈಗ ಬಿಹಾರದಲ್ಲಿ ಪ್ರಯೋಗ ಮಾಡಲು ಬಿಜೆಪಿ ಮುಂದಾಗಿದೆ.

ಬಿಹಾರ ಚುನಾವಣಾ ಸಭೆಯಲ್ಲಿ ಸೋನಿಯಾ, ಮುಂದೆ ಓದಿ..

ಪ್ರಿಯಾಂಕ ಚೋಪ್ರಾ

ಪ್ರಿಯಾಂಕ ಚೋಪ್ರಾ

ಹೀರೋ ಹೊಂಡಾ ಪ್ಲೆಷರ್ ದ್ವಿಚಕ್ರ ವಾಹನದ ಜಾಹೀರಾತಿನಲ್ಲಿ "why should boys have all the fun?" ಎಂದು ಪ್ರಿಯಾಂಕ ಚೋಪ್ರಾ ಹೇಳಿದ್ದರು. ಇದನ್ನು ಬಳಸಿಕೊಂಡಂತೆ ಕಾಣುವ ಬಿಜೆಪಿ ವಿದ್ಯಾರ್ಥಿನಿಯರಿಗೆ ಯಾವ ಪಕ್ಷವೂ ಘೋಷಿಸದ ಭರವಸೆಯನ್ನು vision document ನಲ್ಲಿ ಘೋಷಿಸಿದೆ. ಜೊತೆಗೆ ಮೋದಿಯ ಜನಪ್ರಿಯ 'ಬೇಟಿ ಬಚಾವೋ, ಬೇಟಿ ಪಡಾವೋ' ಘೋಷ ವ್ಯಾಕ್ಯಕ್ಕೂ ಹೊಸ ರೂಪ ನೀಡಲು ನಿರ್ಧರಿಸಿದಂತಿದೆ.

ವಿದ್ಯುತ್ ಸಪ್ಲೈ

ವಿದ್ಯುತ್ ಸಪ್ಲೈ

ನಿರಂತರ ವಿದ್ಯುತ್ ಸರಬರಾಜು ವಿಚಾರದಲ್ಲಿ ಗುಜರಾತ್ ಮಾದರಿಯನ್ನು ಬಳಸಿಕೊಳ್ಳಲಾಗುವುದು ಎಂದು ಬಿಜೆಪಿ ಹೇಳಿದೆ. ರಾಜ್ಯಾದ್ಯಂತ ನಿರಂತರ 24 ಗಂಟೆ ವಿದ್ಯುತ್ ಸರಬರಾಜು ನೀಡಲಾಗುವುದು. ಗೃಹಪಯೋಗಿ ಮತ್ತು ಕೃಷಿ ಚಟುವಟಿಕೆಗಾಗಿ ಎರಡು ಪ್ರತ್ಯೇಕ ಫೀಡರ್ ಸ್ಥಾಪಿಸಲಾಗುವುದು ಎಂದು ಬಿಜೆಪಿ ಹೇಳಿದೆ.

ಸೋನಿಯಾ ರ್ಯಾಲಿ

ಶನಿವಾರ (ಅ 3) ಭಾಗಲ್ಪುರದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಸೋನಿಯಾ ಗಾಂಧಿ, ನಮ್ಮ ಪ್ರಧಾನಿಗಳು ಯಾವಾಗಲೂ ವಿದೇಶದಲ್ಲಿರುತ್ತಾರೆ. ಮನಮೋಹನ್ ಸಿಂಗ್ ಸರಕಾರದ ಸಾಧನೆ ಏನು ಎನ್ನುವುದು ನಿಮಗೆ ತಿಳಿದಿದೆ. ನಮ್ಮ ಯೋಜನೆಗಳಿಗೆ ಹೊಸ ರೂಪ ಕೊಟ್ಟು ಅದನ್ನು ತಮ್ಮ ಯೋಜನೆಯೆಂದು ಹೇಳುವಲ್ಲಿ ಪ್ರಧಾನಿ ಮೋದಿ ನಿಸ್ಸೀಮರು ಎಂದು ಸೋನಿಯಾ ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

ಅಮಿತ್ ಶಾ ವಾಗ್ದಾಳಿ

ಅಮಿತ್ ಶಾ ವಾಗ್ದಾಳಿ

ಮುಜಫರ್ ನಗರದಲ್ಲಿ ಭಾನುವಾರ (ಅ 4) ನಡೆದ ಸಭೆಯಲ್ಲಿ ಮಾತನಾಡುತ್ತಿದ್ದ ಅಮಿತ್ ಶಾ, ಎರಡೆರಡು ಪಕ್ಷಗಳ ಜೊತೆ ಹೊಂದಾಣಿಕೆಯಿಂದ ನಿತೀಶ್ ಕುಮಾರ್ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ತರಲು ಸಾಧ್ಯವಿಲ್ಲ. ಯುಪಿಎ ಸರಕಾರದ ಅವಧಿಯಲ್ಲಿ ಹನ್ನೆರಡು ಲಕ್ಷ ಕೋಟಿ ಭ್ರಷ್ಟಾಚಾರ ನಡೆಸಿರುವುದು ಕಾಂಗ್ರೆಸ್ ಪಕ್ಷದ ಸರಕಾರದ ಸಾಧನೆ. ನಿತೀಶ್ ಮತ್ತು ಲಾಲೂ ಮೈತ್ರಿಕೂಟಕ್ಕೆ ನೀವು ಬೆಂಬಲ ನೀಡಿದರೆ ಮತ್ತೆ ಜಂಗಲ್ ರಾಜ್ಯ ಖಂಡಿತ ಎಂದು ಶಾ ಸಭೆಯಲ್ಲಿ ಹೇಳಿದ್ದಾರೆ.

ಚುನಾವಣಾ ಆಯೋಗ

ಚುನಾವಣಾ ಆಯೋಗ

ಚುನಾವಣಾ ಪ್ರಣಾಳಿಕೆಯ ಪ್ರತಿಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕೆಂದು ಕೇಂದ್ರ ಚುನಾವಣಾ ಆಯೋಗ ಎಲ್ಲಾ ಪ್ರಮುಖ ಪಕ್ಷಗಳಿಗೆ ಸೂಚನೆ ನೀಡಿದೆ. ಜೊತೆಗೆ ಪ್ರಣಾಳಿಕೆಯಲ್ಲಿ ಆಯೋಗ ತಿಳಿಸಿರುವ ರೂಲ್ಸ್ ಮತ್ತು ಗೈಡ್ಲೈನ್ಸ್ ಅನ್ನು ಪಾಲಿಸಬೇಕೆಂದು ಹೇಳಿದೆ.

English summary
Bihar election 2015: BJP eyes on women empowerment. 5000 free scootys and free petrol for two years for PUC girls on merit basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X