ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಫಲಿತಾಂಶ: ಮಾಧ್ಯಮಗಳ ಕನ್ ಫ್ಯೂಷನ್ ಬಗ್ಗೆ ಟ್ವೀಟ್ಸ್

By Mahesh
|
Google Oneindia Kannada News

ಪಾಟ್ನ, ನ.8: ಬಿಹಾರದ ವಿಧಾನಸಭಾ ಚುನಾವಣೆಯ ಐದು ಹಂತಗಳ ಮತದಾನದ ಭವಿಷ್ಯ ನವೆಂಬರ್ 8ರಂದು ಹೊರ ಬಂದಿದೆ. ಚುನಾವಣೋತ್ತರ ಸಮೀಕ್ಷೆ ವರದಿಗಳ ಸಾರ್ವಜನಿಕರಿಗೆ ಗೊಂದಲ ಮೂಡಿಸಿದ್ದ ಟಿವಿ ಮಾಧ್ಯಮಗಳು ಬಿಹಾರ ಫಲಿತಾಂಶ ಟ್ರೆಂಡಿಂಗ್ ತೋರಿಸುವಲ್ಲಿ ಎಡವಿ ಕನ್ ಫ್ಯೂಸ್ ಆಗಿ ಟ್ವಿಟ್ಟರ್ ನಲ್ಲಿ ನಗೆಪಾಟಲಿಗೆ ಈಡಾದವು.

ಎನ್ ಡಿಎ ಹಾಗೂ ಮಹಾಮೈತ್ರಿಕೂಟ ನಡುವೆ ಫೋಟೋ ಫಿನಿಷ್ ಸಾಧ್ಯತೆಯನ್ನು ಸೂಚಿಸಿರುವುದು ಕುತೂಹಲ ಕೆರಳಿಸಿತ್ತು. ಅದರೆ, ಮತ ಎಣಿಕೆ ಆರಂಭವಾದ ಎರಡು ಗಂಟೆ ಅವಧಿಯಲ್ಲಿ ಬಿಜೆಪಿ ಮುನ್ನಡೆ ಸಿಕ್ಕಿದೆ ಎನ್ನಲಾಗಿತ್ತು. ನಂತರ ಬಂದ ಅಂಕಿ ಅಂಶ ಎಲ್ಲರನ್ನು ಗೊಂದಲಕ್ಕೀಡು ಮಾಡಿತು. [ಬಿಹಾರ: ಎಲ್ರಾ ಕಾಲ್ ಏಳಿತದೇ ಕಾಲ, ಮೋದಿನೂ ಬಿಡೋಲ್ಲಾ]

243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದೆ. ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿಕೂಟ ಈಗ ಅಧಿಕಾರಿ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸಿದೆ. ಮಾಧ್ಯಮಗಳಲ್ಲಿ ಫಲಿತಾಂಶ ಬಗ್ಗೆ ಬಂದ ಗೊಂದಲಮಯ ಸುದ್ದಿ ಬಗ್ಗೆ ಟ್ವೀಟ್ಸ್ ಇಲ್ಲಿದೆ...[ಬಿಹಾರ: ನಿತೀಶ್ ಹ್ಯಾಟ್ರಿಕ್, ನಡೆಯಲಿಲ್ಲ ಮೋದಿ ಟ್ರಿಕ್]

ಟಿವಿ ಮಾಧ್ಯಮಗಳ ಗೊಂದಲದ ಅಂಕಿ ಅಂಶ

ಟಿವಿ ಮಾಧ್ಯಮಗಳ ಗೊಂದಲದ ಅಂಕಿ ಅಂಶ

ಬೆಳಗ್ಗೆ 10.30ರ ಸುಮಾರಿಗೆ ಟೈಮ್ಸ್ ನೌ (ಜೆಡಿಯು+ಆರ್ ಜೆಡಿ+ಕಾಂಗ್ರೆಸ್)- 143ಸೀಟುಗಳು, ಎನ್ ಡಿಎ (ಬಿಜೆಪಿ+ಎಚ್ಎಎಂ+ಎಲ್ ಜೆಪಿ) 92 ಹಾಗೂ ಇತರೆ 6 ಎಂದು ತೋರಿಸಿತು.
ಸಿಎಎನ್ ಐಬಿಎನ್: ಜೆಡಿಯು -146; ಬಿಜೆಪಿ +: 84
ಎನ್ ಡಿಟಿವಿ : ಜೆಡಿಯು+ : 127, ಬಿಜೆಪಿ +: 100. ಇತರೆ 8.
ಅಂಕಿ ಅಂಶ ವ್ಯತ್ಯಾಸ ಅಂತಿಮ ಫಲಿತಾಂಶ ಪ್ರಕಟಣೆ ತನಕ ಮುಂದುವರೆದಿದೆ.

ಸಂಭ್ರಮಾಚರಣೆ ಮಾಡುವ ಮುನ್ನ

ಸಂಭ್ರಮಾಚರಣೆ ಮಾಡುವ ಮುನ್ನ ಒಮ್ಮೆ ಯೋಚಿಸಿ, ಫಲಿತಾಂಶ ಉಲ್ಟಾ ಆಗಬಹುದು.

ಟೈಮ್ಸ್ ನೌ ಅರ್ನಾಬ್ ಅವರಿಂದ ಪಾಠ ಕೇಳಿಸಿಕೊಳ್ಳಿ

CAT ಅಭ್ಯರ್ಥಿಗಳೇ ಟೈಮ್ಸ್ ನೌ ಪ್ರೊ.ಅರ್ನಾಬ್ ಅವರಿಂದ ಪಾಠ ಕೇಳಿಸಿಕೊಳ್ಳಿ

ಎಲ್ಲಾ ಚಾನೆಲ್ ಗಳಲ್ಲಿ ಒಂದೇ ರೀತಿ ಸಂಖ್ಯೆ

ಎಲ್ಲಾ ಚಾನೆಲ್ ಗಳಲ್ಲಿ ಒಂದೇ ರೀತಿ ಸಂಖ್ಯೆ ಬರಲು ಸಾಧ್ಯವಿಲ್ಲವೇ.

ಚಾಣಕ್ಯ ವರದಿ ಬಗ್ಗೆ ಟ್ವೀಟ್

ಟಿವಿ ಮಾಧ್ಯಮ ವರದಿ ನಂತರ ಚಾಣಕ್ಯ ವರದಿ ಬಗ್ಗೆ ಟ್ವೀಟ್

ಬಿಹಾರ ಹಳೆ ಕಾಲಕ್ಕೆ ಹೋಗುತ್ತಿದೆ

ಬಿಹಾರ ಹಳೆ ಕಾಲಕ್ಕೆ ಹೋಗುತ್ತಿದೆ. 1900ರ ಪರಿಸ್ಥಿತಿ ಮುಂದುವರೆಯಲಿದೆ. ಭಾರತ 2020ಕ್ಕೆ ಮತ್ತೆ ಉದಯಿಸಲಿದೆ.

English summary
Both Team Modi and Team Nitish began their celebrations in Bihar on Sunday, Nov 8 as their supporters and people across the country got confused citing the early trends of Bihar election results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X