ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಕಿ ಲಾಲೂ, ಸೀಲಿಂಗ್ ಫ್ಯಾನ್ ಬಿದ್ದರೂ ಬಚಾವ್!

By Mahesh
|
Google Oneindia Kannada News

ಪಾಟ್ನ, ಅ.16: ಬಿಹಾರ ವಿಧಾನಸಭೆಯ ಎರಡನೇ ಹಂತದ ಮತದಾನ ಶುಕ್ರವಾರ ಶಾಂತಿಯುತವಾಗಿ ಸಂಪನ್ನವಾಗಿದೆ. ಶೇ 55ರಷ್ಟು ಮತದಾನ ದಾಖಲಾಗಿದೆ. ಅದರೆ, ಇನ್ನೊಂದೆಡೆ ಚುನಾವಣಾ ಪ್ರಚಾರ ನಿರತ ಆರ್ ಜೆಡಿ ಮುಖ್ಯಸ್ಥ ಲಾಲೂ ಅವರು ಸೀಲಿಂಗ್ ಫ್ಯಾನ್ ಹೊಡೆತದಿಂದ ಕೊದಳೆಲೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.

ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಅವರು ಚುನಾವಣಾ ಪ್ರಚಾರ ನಡೆಸಲು ಮೋತಿಹರಿ ಪ್ರದೇಶಕ್ಕೆ ಬಂದಿದ್ದರು. ಲಾಲೂ ಅವರು ವೇದಿಕೆ ಏರಿ ಕುಳಿತ್ತಿದ್ದರು. ಮೇಲೆ ತಿರುಗುತ್ತಿದ್ದ ಫ್ಯಾನ್ ಇನ್ನೇನು ಬೀಳುವ ಹಂತದಲ್ಲಿ ಎಂಬುದನ್ನು ಕಂಡು ಕಾರ್ಯಕ್ರಮ ಆಯೋಜಕರಿಗೆ ಹೇಳಿದ್ದಾರೆ.[ಬಿಹಾರ ಅಸೆಂಬ್ಲಿ ಸಮರ ಎರಡನೇ ಹಂತದ ಫೈಟ್]

ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ವ್ಯಕ್ತಿ ಈ ಬಗ್ಗೆ ಘೋಷಣೆ ಕೂಗಿ ಎಲೆಕ್ಟ್ರಿಷನ್ ಕರೆಸುವಷ್ಟರಲ್ಲಿ ಸೀಲಿಂಗ್ ಫ್ಯಾನ್ ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ಲಾಲೂ ಪ್ರಸಾದ್ ಯಾದವ್ ಅವರಿಗೆ ಯಾವುದೇ ಹಾನಿಯಾಗಿಲ್ಲ. ಬಲಗೈಗೆ ಕೊಂಚ ಪೆಟ್ಟಾಗಿದೆ. ನಂತರ ಚುನಾವಣಾ ಭಾಷಣ ಮುಗಿಸಿದ ಲಾಲೂ ಅವರು ಆಯೋಜಕರನ್ನು ತರಾಟೆಗೆ ತೆಗೆದುಕೊಂಡು ವೇದಿಕೆಯಿಂದ ನಿರ್ಗಮಿಸಿದ್ದಾರೆ.

ಲಕ್ಕಿ ಲಾಲೂ ಅವರು ಎದುರಿಸಿದ ಸೀಲಿಂಗ್ ಫ್ಯಾನ್ ಫಾಲಿಂಗ್ ಘಟನೆ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಹವಾ ಸೃಷ್ಟಿಸುತ್ತಿದೆ.

ಸೀಲಿಂಗ್ ಫ್ಯಾನ್ ಫಾಲಿಂಗ್ ಘಟನೆ

ಸೀಲಿಂಗ್ ಫ್ಯಾನ್ ಫಾಲಿಂಗ್ ಘಟನೆ

ಲಕ್ಕಿ ಲಾಲೂ ಅವರು ಎದುರಿಸಿದ ಸೀಲಿಂಗ್ ಫ್ಯಾನ್ ಫಾಲಿಂಗ್ ಘಟನೆ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ದೊಡ್ಡ ಹವಾ ಸೃಷ್ಟಿಸುತ್ತಿದೆ.

ಎರಡನೇ ಹಂತದಲ್ಲಿ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ 32 ಕ್ಷೇತ್ರಗಳಲ್ಲಿ ಮತದಾನ ನಡೆಸಲಾಗಿದೆ. ಮತದಾನದಲ್ಲಿ 456ರ ಅದೃಷ್ಟ ಪರೀಕ್ಷೆಯಾಗಿದ್ದು, ಫಲಿತಾಂಶಕ್ಕಾಗಿ ನವೆಂಬರ್ 8(ಭಾನುವಾರ) ರ ತನಕ ಕಾಯಬೇಕಾಗಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ

ಲಕ್ಕಿ ಲಾಲೂ ಅವರು ಎದುರಿಸಿದ ಸೀಲಿಂಗ್ ಫ್ಯಾನ್ ಫಾಲಿಂಗ್ ಘಟನೆ ವಿಡಿಯೋ

ಬಹುಶಃ ಇದು ಮೋದಿ ಕಡೆಯವರ ಫ್ಯಾನ್

ಬಹುಶಃ ಇದು ಮೋದಿ ಕಡೆಯವರ ಫ್ಯಾನ್ ಇರಬೇಕು ಅದಕ್ಕೆ ಲಾಲೂ ಮೇಲೆ ಬಿದ್ದಿದೆ

ದಸರಾ ಎಂದರೆ ಹತ್ತು ತಲೆ ರಾವಣ 'ತಲೆದಂಡ'

ದಸರಾ ಎಂದರೆ ಹತ್ತು ತಲೆ ರಾವಣ 'ತಲೆ ಕತ್ತರಿಸುವುದು. ದುಷ್ಟ, ಭ್ರಷ್ಟ ರಾಜಕಾರಣಿ ತಲೆ ತೆಗೆಯಲು ಫ್ಯಾನ್ ಯತ್ನಿಸಿರಬಹುದು.

ಲಾಲೂ ಮುಂದಿನ ಹೋರಾಟದ ಹಾದಿ

ಜಾತಿವಾದಿ(Communal Force)ಗಳ ವಿರುದ್ಧ ಹೋರಾಟಕ್ಕಿಳಿದ ಲಾಲೂ ಮುಂದಿನ ಹೋರಾಟ ಏನಿದ್ದರೂ ಗುರುತ್ವಾಕರ್ಷಣ(gravitational force) ಶಕ್ತಿ ವಿರುದ್ಧ..

English summary
Lalu Prasad Yadav, the chief of Rashtriya Janata Dal (RJD), had a narrow escape during an election rally in Bihar on Friday, Oct 16.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X