ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಡಿಯುವ ನೀರಿಗೆ ಪ್ರಧಾನಿಗೆ ಪತ್ರ ಬರೆದ ಬೆಂಗಳೂರಿಗ

|
Google Oneindia Kannada News

ಬೆಂಗಳೂರು, ಡಿಸೆಂಬರ್. 01: ಬೆಂಗಳೂರಿನಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ ಎಂದು ಪದೇ ಪದೇ ಹೇಳುವುದರಲ್ಲಿ ಅರ್ಥವೇ ಇಲ್ಲ ಎಂಬಂತಾಗಿದೆ. ಕುಡಿಯುವ ನೀರು ಸಮರ್ಪಕವಾಗಿ ಸಿಗದೇ ಬೇಸತ್ತ ಬೆಂಗಳೂರು ನಾಗರಿಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ವಿಕೆ ಶ್ರೀವತ್ಸ ಎಂಬುವರು ಸಾಮಾಜಿಕ ತಾಣ ಫೇಸ್ ಬುಕ್ ಮುಖಾಂತರ ಪ್ರಧಾನಿಯವರ ಖಾತೆಗೆ ನೇರವಾಗಿ ಮನವಿ ನವೆಂಬರ್ 29 ರಂದು ಸಲ್ಲಿಕೆ ಮಾಡಿದ್ದಾರೆ. ತಾವು ಪ್ರತಿದಿನ ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.[ಬೆಂಗಳೂರು ಸುರಕ್ಷಿತವೇ? ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಪ್ರೇರಣಾ ಶರ್ಮಾ]

ಅವರ ಪತ್ರವನ್ನು ಯಥಾವತ್ತಾಗಿ ನೋಡಿದರೆ, ಓದಿದರೆ ನಿಮಗೆ ಬೆಂಗಳೂರು ಉತ್ತರ ಭಾಗ ಎದುರಿಸುತ್ತಿರುವ ಸಕಲ ಸಮಸ್ಯೆಗಳ ದರ್ಶನವಾಗುವುದರಲ್ಲಿ ಅನುಮಾನವಿಲ್ಲ.

Bengaluru water crisis: Letter to PM Narendra Modi

ಮಾನ್ಯರೇ,
ಬೆಂಗಳೂರಿನ ಹೊರವಲಯದ ಪ್ರದೇಶಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಉತ್ತರ ಬೆಂಗಳೂರಿನ ನಿವಾಸಿಯಾದ ನಾವು ಕೇಂದ್ರ ಸಚಿವ ಸದಾನಂದ ಗೌಡರು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತೇವೆ.

ಬೆಂಗಳೂರು ಉತ್ತರದ ಕನಕಪುರ ರಸ್ತೆಗೆ ಹೊಂದಿಕೊಂಡು ಸುಮಾರು 50 ಸಾವಿರ ಮನೆಗಳಿದ್ದು 2 ಲಕ್ಷ ಜನ ವಾಸ ಮಾಡುತ್ತಿದ್ದಾರೆ. ಹೊಸ ಮನೆ ಮತ್ತು ಬಡಾವಣೆಗಳು ನಿರ್ಮಾಣವಾಗುತ್ತಿದೆ.

ಅಂತರ್ಜಲ ಮಟ್ಟ ಸಂಪೂರ್ಣ ಕುಸಿದು ಹೋಗಿದೆ. ನಮಗೆ ಇರುವ ಏಕೈಕ ನೀರಿನ ಆಶ್ರಯ ಎಂದರೆ ಅದು ಕಾವೇರಿ ನೀರು. ರಾಜ್ಯ ಸರ್ಕಾರ ಇಡೀ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಮಾಡುತ್ತಿದೆ.(ನಮ್ಮನ್ನು ಬಿಟ್ಟು) ಪೈಪ್ ಲೈನ್ ಗಳನ್ನು ಇದೇ ಕನಕಪುರ ರಸ್ತೆಯಲ್ಲಿ ತೆಗೆದುಕೊಂಡು ಹೋಗಲಾಗಿದೆ. ನಮಗೆ ಮಾತ್ರ ಕಾವೇರಿ ನೀರು ಕುಡಿಯುವುದು ಕನಸಾಗಿಯೇ ಉಳಿದಿದೆ.[ನೀರಿಗಾಗಿ ಮೂರು ಹೆಂಡಿರ ಗಂಡನಾದ ಮಾರ್ತಾಂಡ!]

ಇದಕ್ಕೆಲ್ಲ ಕಾರಣ ಇಲ್ಲಿರುವ ವಾಟರ್ ಮಾಫಿಯಾ. ಒಂದು ವೇಳೆ ಪ್ರದೇಶಕ್ಕೆ ಕಾವೇರಿ ನೀರು ಪೂರೈಕೆಯಾದರೆ 'ಕೆಲವರಿಗೆ' ಬರುವ ಆದಾಯ ನಿಂತು ಹೋಗುತ್ತದೆ. ಜನಪ್ರತಿನಿಧಿಗಳಿಗೂ ನಮ್ಮ ಕೂಗು ಕೇಳುತ್ತಿಲ್ಲ.

2012 ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕುಡಿಯುವ ನೀರು ನೀಡಲು ಯೋಜನೆಯೊಂದನ್ನು ರೂಪಿಸಿತ್ತು. ಆದರೆ ಬಿಡಿಎ, ಬಿಡ್ಬ್ಲೂಎಸ್ ಎಸ್ ಬಿ, ರಾಜ್ಯ ಸರ್ಕಾರಗಳ ನಡುವಿನ ಹೊಂದಾಣಿಕೆ ಕೊರತೆ ಮತ್ತು ಸಂವಹನ ಕೊರತೆಯಿಂದ ಯಾವ ಅನುದಾನ ಬಿಡುಗಡೆಯಾಗಲಿಲ್ಲ.

ಸ್ವತಃ ಕೇಂದ್ರ ಸಚಿವ ಸದಾನದಂದ ಗೌಡ ಅವರೇ ಬಿಡಿಎ ಕಮಿಷನರಿಗೆ ಮನವಿ ಮಾಡಿಕೊಂಡರೂ ಹೆಚ್ಚಿನ ಅನುದಾನ ಬಿಡುಗಡೆಯಾಗಲೇ ಇಲ್ಲ. ಜಲಮಂಡಳಿಗೆ ಬಿಡಿಎ ಬಿಡುಗಡೆ ಮಾಡಿದ್ದು ಒಂದು ಕಾಲು ಕೋಟಿ ರೂ. ಆದರೆ ಜಲಮಂಡಳಿ ಕೇಳಿದ್ದು 80 ಕೋಟಿ ರು.!

ಪ್ರತಿ ತಿಂಗಳು ಕುಟುಂಬವೊಂದು 8 ರಿಂದ 10 ಸಾವಿರ ರು. ಗಳನ್ನು ಕುಡಿಯುವ ನೀರಿಗೆ ವ್ಯಯಿಸಬೇಕಾಗಿದೆ. ವಾಟರ್ ಮಾಫಿಯಾ ಭಾಗದಲ್ಲಿ ಜೋರಾಗಿಯೇ ಕೆಲಸ ಮಾಡುತ್ತಿದೆ. ಹೆಚ್ಚಿನ ಹಣ ನೀಡಿ ಕೊಳಚೆ ನೀರು ಕುಡಿಯಬೇಕಾಗಿದೆ. ಎಲ್ಲರಿಗೂ ಮನವಿ ಮಾಡಿ ಅಂತಿಮವಾಗಿ ನಿಮ್ಮ ಬಳಿ ಸಮಸ್ಯೆ ಹೇಳಿಕೊಳ್ಳುತ್ತಿದ್ದೇನೆ.

ದಯಮಾಡಿ ನಮಗೆ ನೀರು ಕೊಡಿ, ಬಿಡಿಎ ಮತ್ತು ಜಲಮಂಡಳಿಗೆ ಶಿಫಾರಸು ಪತ್ರ ಕಳಿಸಿಕೊಡಿ. ನಿಮ್ಮ ಶಿಫಾರಸಿನ ನಂತರವಾದರೂ ನಮಗೆ ಕಾವೇರಿ ನೀರು ಕುಡಿಯುವ ಭಾಗ್ಯ ಸಿಗುತ್ತದೆ ಎಂದು ಅಂದುಕೊಂಡಿದ್ದೇವೆ.

Sir: Outskirts of Bangalaore facing severe drinking water crisis. We are from North Bangalore Lokasabha constituency...

Posted by VK Srivatsa onSaturday, November 28, 2015

English summary
Outskirts of Bengaluru, especially Bengaluru North loksabha constituency facing acute water shortage. V K Srivatsa a citizen writes open letter on Social Media Facebook, to PM Narendra Modi, urging him to intervene and provide Cauvery water to the areas. Full Text of the letter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X