ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ ಕ್ಯಾಪ್ಟನ್ ಹೇಳಿದಂತೆ ಕೇಳಲಿದ್ದಾನೆ 'ವಿಕ್ರಮಾದಿತ್ಯ'

By ಒನ್ ಇಂಡಿಯಾ ಡಿಫೆನ್ಸ್ ಡೆಸ್ಕ್
|
Google Oneindia Kannada News

ಬೆಂಗಳೂರು, ನವೆಂಬರ್. 02: ಭಾರತದ ವಾಯುಸೇನೆಯ ಅತಿದೊಡ್ಡ ಯುದ್ಧ ನೌಕೆ 'ವಿಕ್ರಮಾದಿತ್ಯ' ವನ್ನು ಇನ್ನು ಮುಂದೆ ಬೆಂಗಳೂರು ಮೂಲದ ಕೃಷ್ಣ ಸ್ವಾಮಿನಾಥನ್ ಮುಂದೆ ನಡೆಸಲಿದ್ದಾರೆ.

ಕೃಷ್ಣ ಸ್ವಾಮಿನಾಥನ್ ನೌಕೆಯ ಸೆಕೆಂಡ್ ಕಮಾಂಡಿಂಗ್ ಆಫಿಸರ್ (ಸಿಒ) ಆಗಿ ಕಾರವಾರದಲ್ಲಿ ಸೋಮವಾರ ಅಧಿಕಾರ ತೆಗೆದುಕೊಂಡರು ಎಂದು ಭಾರತೀಯ ಸೇನೆ ತಿಳಿಸಿದೆ. ಇಷ್ಟು ದಿನ ವಿಕ್ರಮಾದಿತ್ಯ ಕ್ಯಾಪ್ಟನ್ ಸುರಜ್ ಬೆರ್ರಿ ಮುಂದಾಳತ್ವದಲ್ಲಿ ಸಾಗುತ್ತಿತ್ತು. 2013 ರ ನವೆಂಬರ್ 26 ರಿಂದ ಬೆರ್ರಿ ನೌಕೆಯನ್ನು ಮುನ್ನಡೆಸುತ್ತಿದ್ದರು.[ವಿಶ್ವದ ಬಲಿಷ್ಠ ಮಿಲಿಟರಿ ಶಕ್ತಿ ಹೊಂದಿರುವ ದೇಶಗಳು : ಇಲ್ಲಿದೆ ಪಟ್ಟಿ]

army

ದೆಹಲಿಯ ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಅಮೆರಿಕದಲ್ಲಿ ಸ್ವಾಮಿನಾಥನ್ ತಮ್ಮ ತರಬೇತಿಯನ್ನು ಮುಗಿಸಿ ಭಾರತಕ್ಕೆ ಹಿಂದಿರುಗಿದ್ದರು.[ವಜ್ರಕೋಶದ ವಿಶೇಷಗಳೇನು]

ವಿಕ್ರಮಾದಿತ್ಯನ ಹೊಸ ನಾವಿಕನ ಬಗ್ಗೆ ಮತ್ತಷ್ಟು
* ಬೆಂಗಳೂರಿನ ಬಿಷಪ್ ಕಾಟನ್ಸ್ ಶಾಲೆ ಮತ್ತು ಬಿಜಾಪುರದ ಸೈನಿಕ ಶಾಲೆಯಲ್ಲಿ ಸ್ವಾಮಿನಾಥನ್ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರು.
* ಕ್ಷಿಪಣಿ ನೌಕೆಗಳಾದ ಐಎನ್ ಎಸ್ ವಿದ್ಯುತ್ ಮತ್ತು ವಿನಾಶ್ ನ್ನು ಮುನ್ನಡಿಸಿದ ಅನುಭವ ಅವರಿಗಿದೆ.
* ಮೈಸೂರಿನಲ್ಲೂ ಸೈನ್ಯದ ತಂಡಗಳಿಗೆ ಮಾರ್ಗದರ್ಶನ ನೀಡಿದ್ದಾರೆ.
* ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಬಿ ಎಸ್ಸಿ ಪದವಿ ಪಡೆದುಕೊಂಡಿದ್ದರು. ರಕ್ಷಣಾ ವಿಭಾಗದಲ್ಲಿ ಎಂಎ ಮತ್ತು ಮುಂಬೈ ವಿವಿಯಿಂದ ಎಂ ಫಿಲ್ ಸಹ ಪಡೆದುಕೊಂಡಿದ್ದಾರೆ.
* ವೆಲ್ಲಿಂಗ್ ಟನ್ ಕಾಲೇಜಿನ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ.
*ನವೆಲ್ ಸಿಗ್ನಲ್ಸ್ ನ ಪ್ರಧಾನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

army
English summary
The largest warship of Indian Navy INS Vikramaditya will be now commanded by Bengalurian Captain Krishna Swaminathan. Indian Navy said that Captain Krishna Swaminathan assumed charge as the second Commanding Officer (CO) of INS Vikramaditya at Karwar base on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X