ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ತಿಂಗಳಲ್ಲಿ 600 ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿ ಪತ್ತೆ

1988ರಲ್ಲೇ ಜಾರಿಗೆ ಬಂದಿದ್ದರೂ ಬೇನಾಮಿ ಕಾನೂನು ಅನುಷ್ಠಾನಕ್ಕಿದ್ದ ಕೆಲವಾರು ತಾಂತ್ರಿಕ ಅಡಚಣೆಗಳನ್ನು ಕಳೆದ ವರ್ಷ ನಿವಾರಿಸಿದ್ದರಿಂದಲೇ ಸುಮಾರು 600 ಕೋಟಿ ರು. ಮೌಲ್ಯದ ಬೇನಾಮಿ ಆಸ್ತಿ ಪತ್ತೆ ಹಚ್ಚಲು ಸಾಧ್ಯವಾಯಿತೆಂದು ಕೇಂದ್ರ ಹೇಳಿದೆ.

|
Google Oneindia Kannada News

ನವದಹೆಲಿ, ಮೇ 24: ಕಳೆದ 28 ವರ್ಷಗಳಿಂದ ಹಲ್ಲಿಲ್ಲದ ಹಾವಾಗಿದ್ದ ಬೇನಾಮಿ ಆಸ್ತಿ ಕಾನೂನಿಗೆ ಕಾಯಕಲ್ಪ ನೀಡಿದ್ದರಿಂದಾಗಿ ಆದಾಯ ತೆರಿಗೆ ಇಲಾಖೆಯು ಕಳೆದ ಆರು ತಿಂಗಳಲ್ಲಿ ಸುಮಾರು 600 ಕೋಟಿ ರು. ಮೊತ್ತದ ಬೇನಾಮಿ ಆಸ್ತಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದಲ್ಲದೆ, ಭ್ರಷ್ಟರ ಮೇಲೆ ಇಲಾಖೆ ವತಿಯಿಂದ ನಡೆದ ದಾಳಿಯಿಂದಾಗಿ ಈವರೆಗೆ 240 ಪ್ರಕರಣಗಳಿಂದ 400 ದೊಡ್ಡ ಮಟ್ಟದ ಅಕ್ರಮ ವ್ಯವಹಾರಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಹೇಳಿದೆ.

Benami law Nets 600 Crores In Benami Property In 6 Months

1988ರಲ್ಲೇ ಬೇನಾಮಿ ಆಸ್ತಿಯ ಕಾನೂನನ್ನು ಜಾರಿಗೆ ತರಲಾಗಿದ್ದರೂ, ಕಳೆದ 28 ವರ್ಷಗಳಿಂದ ಈ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರಲು ಆಗಿರಲಿಲ್ಲ. ಕಾನೂನು ಜಾರಿಯಲ್ಲಿದ್ದ ಕೆಲವಾರು ತಾಂತ್ರಿಕ ಅಡಚಣೆಗಳು ಇದಕ್ಕೆ ಕಾರಣವಾಗಿದ್ದವು.

ಕಳೆದ ವರ್ಷ ಆ ತಾಂತ್ರಿಕ ಕಾರಣಗಳೆನ್ನೆಲ್ಲಾ ನಿವಾರಿಸಿ ಕಾನೂನಿನ ಸುಗಮ ಅನುಷ್ಠಾನಕ್ಕೆ ದಾರಿ ಮಾಡಿಕೊಟ್ಟಾಗಿನಿಂದ ಚುರುಕಾದ ಆದಾಯ ತೆರಿಗೆ ಇಲಾಖೆ ಈ ನಿಟ್ಟಿನಲ್ಲಿ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

English summary
Scaling up the operation against black money and corruption, benami, or proxy-owned property worth 600 crores has been seized by the Income Tax department over the last six months under a refurbished law that lets the government takeover properties bought in fake names.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X