ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬರಾಕ್ ಭಾರತ ಭೇಟಿ : 10 ಸಂಗತಿ ನೀವು ತಿಳಯಲೇಬೇಕ್

|
Google Oneindia Kannada News

ನವದೆಹಲಿ, ಜ, 19: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಜನವರಿ 25 ರಿಂದ ಮೂರು ದಿನಗಳ ಕಾಲ ಭಾರತದಲ್ಲಿರಲಿದ್ದಾರೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಲಿರುವ ಒಬಾಮ ಒಂದು ಕ್ಷಣವೂ ಬಿಡುವಿಲ್ಲದೇ ಸಂಚರಿಸಲಿದ್ದಾರೆ.

ಒಮಾಮ ಭೇಟಿಗೂ ಮುನ್ನ ಈ ಕೆಳಗಿನ ಅಂಶಗಳನ್ನು ನೀವು ಅರಿತಿರಬೇಕಾಗುತ್ತದೆ. ಅಮೆರಿಕ ಮತ್ತು ಭಾರತ ನಡುವಿನ ದ್ವಿಪಕ್ಷಿಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಈ ಭೇಟಿ ಏಷ್ಟು ನೆರವಾಗಲಿದೆ? ಎಂಬುದನ್ನು ತಿಳಿದುಕೊಳ್ಳಬೇಕು.[ಮೈಸೂರು ಪಂಚೆಯಲ್ಲಿ ಮಿಂಚಲಿದ್ದಾರೆ ಬರಾಕ್ ಒಬಾಮ!]

ಇತ್ತ ಉಗ್ರರ ದಾಳಿ ಭಯವು ಹೆಚ್ಚಿದ್ದು ದೇಶಾದ್ಯತಂದ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಒಬಾಮ ರಕ್ಷಣೆಗೆ ಅಮೆರಿಕದಿಂದಲೆ ತಂಡ ಆಗಮಿಸಲಿದೆ. ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ನಂತರ ಒಬಾಮ ಪತ್ನಿ ಸಮೇತರಾಗಿ ತಾಜ್ ಮಹಲ್ ಗೆ ಭೇಟಿ ನೀಡಲಿದ್ದಾರೆ.

ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ.

ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ.

ಭಾರತದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಅಮೆರಿಕದ ಮೊದಲ ಅಧ್ಯಕ್ಷ ಬರಾಕ್ ಒಬಾಮ.

ಕುಟುಂಬದೊಂದಿಗೆ ಆಗಮನ

ಕುಟುಂಬದೊಂದಿಗೆ ಆಗಮನ

ಪತ್ನಿ ಮಿಚೆಲ್ ಒಬಾಮ ಮತ್ತು ಹಿರಿಯ ಅಧಿಕಾರಿಗಳ ತಂಡ ಗಣರಾಜ್ಯೋತ್ಸವದ ವೇಳೆ ಒಬಾಮ ಜತೆ ಇರಲಿದೆ.

ಕ್ಯಾಡಿಲಾಕ್ ಬರಲಿದೆ!

ಕ್ಯಾಡಿಲಾಕ್ ಬರಲಿದೆ!

ಅಧ್ಯಕ್ಷ ಒಬಾಮ ಅವರ ಸವಾರಿಗೆ ಕ್ಯಾಡಿಲ್ಯಾಕ್ ಕಾರು ಅಮೆರಿಕದಿಂದಲೇ ಬರಲಿದೆ, ಜತೆಗೆ ಪರಮಾಣು ದಾಳಿಯಂಥ ತುರ್ತು ಪರಿಸ್ಥಿತಿಯಲ್ಲಿ ಒಬಾಮ ಮತ್ತವರ ಕುಟುಂಬವನ್ನು ಸುರಕ್ಷಿತವಾಗಿ ಕೊಂಡೊಯ್ಯಲು 3 ಮರೀನ್ ಒನ್ ಚಾಪರ್‌ಗಳು ಬರಲಿವೆ. ಜತೆಗೆ 6 ಏರ್ ಕ್ರಾಫ್ಟ್ ಗಳು, 30 ಅತ್ಯಾಧುನಿಕ ಕಾರುಗಳು ಬೆಂಗಾವಲು ಪಡೆಯಂತೆ ಇರಲಿವೆ

ಮೊದಲ ದಿನ ಏನು ಕಾರ್ಯಕ್ರಮ?

ಮೊದಲ ದಿನ ಏನು ಕಾರ್ಯಕ್ರಮ?

ಭೇಟಿಯ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಒಬಾಮ ನಡುವೆ ಭಾರತ-ಅಮೆರಿಕ ನಡುವಿನ ವಿದೇಶಾಂಗ ಸಂಬಂಧ, ಒಪ್ಪಂದಗಳ ಬಗ್ಗೆ ಚರ್ಚೆ ನಡೆಯಲಿದೆ. ಪರಮಾಣು ಮತ್ತು ರಕ್ಷಣಾ ವ್ಯವಸ್ಥೆ ಕುರಿತಾದ ವಿಚಾರಗಳ ಬಗ್ಗೆ ಪರಸ್ಪರ ಸಹಕಾರ ಕೋರುವ ನಿರೀಕ್ಷೆಯಿದೆ. ಅಮೆರಿಕದ ನಿರ್ವಹಣೆಯಲ್ಲಿ ಭಾರತದಲ್ಲಿ ಅಣು ಕೇಂದ್ರ ಸ್ಥಾಪನೆಯಾಗುವ ಬಗ್ಗೆಯೂ ಮಾತುಕತೆ ನಡೆಯಲಿದೆ.

2 ನೇ ದಿನ ಗಣರಾಜ್ಯೋತ್ಸವ

2 ನೇ ದಿನ ಗಣರಾಜ್ಯೋತ್ಸವ

ಎರಡನೇ ದಿನ ಅಂದರೆ ಜನವರಿ 26 ರಂದು ಒಬಾಮ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಜತೆ ಭಾಗವಹಿಸಲಿದ್ದಾರೆ. ಭಾರತ ಮತ್ತು ಅಮೆರಿಕ ವಿದೇಶಾಂಗ ಅಧಿಕಾರಿಗಳು, ಸಚಿವರು ಪಾಲ್ಗೊಳ್ಳಲಿದ್ದಾರೆ.

ಕೊನೆ ದಿನ

ಕೊನೆ ದಿನ

ಭೇಟಿಯ ಕೊನೆ ದಿನ ಒಬಾಮ ದೆಹಲಿಯ ಟೌನ್ ಹಾಲ್ ನಲ್ಲಿ ಭಾಷಣ ಮಾಡಲಿದ್ದಾರೆ. ಭೇಟಿಯ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ.

ತಾಜ್ ಮಹಲ್ ಗೆ ಭೇಟಿ?

ತಾಜ್ ಮಹಲ್ ಗೆ ಭೇಟಿ?

ಕಳೆದ ಬಾರಿಯಂತೆ ಈ ಸಾರಿಯೂ ಒಬಾಮ ಪತ್ನಿ ಸಮೇತರಾಗಿ ಪ್ರೇಮಸೌಧ ಆಗ್ರಾದ ತಾಜ್ ಮಹಲ್ ಗೆ ಭೇಟಿ ನೀಡಲಿದ್ದಾರೆ.

ಬಿಗಿ ಭದ್ರತೆ

ಬಿಗಿ ಭದ್ರತೆ

ಒಬಾಮ ಭೇಟಿ ವೇಳೇಯೇ ಉಗ್ರರು ದಾಳಿ ಮಾಡುವ ಭಯ ಕಾಡುತ್ತಿರುವುದರಿಂದ ದೆಹಲಿ, ಮುಂಬೈ ಸೇರಿದಂತೆ ಎಲ್ಲ ಕಡೆ ಭದ್ರತೆ ಹೆಚ್ಚಿಸಲಾಗಿದೆ. ಜಮ್ಮು ಕಾಶ್ಮೀರ ಗಡಿ ಭಾಗದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ದೇಶದ ಎಲ್ಲ ರೈಲು ಮತ್ತು ವಿಮಾನ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ರಾಜಪಥದಲ್ಲಿ ಬಂದೋಬಸ್ತ್

ರಾಜಪಥದಲ್ಲಿ ಬಂದೋಬಸ್ತ್

ಉಗ್ರರು ಬಾಂಬ್ ದಾಳಿ ಮಾಡಲಿದ್ದಾರೆ ಎಂದು ಗುಪ್ತಚರ ದಳ ವರದಿ ನೀಡಿರುವ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ರಾಜಪಥದಲ್ಲಿ ಮತ್ತು ತಂದಿಡುವ ಹೂ ಕುಂಡಗಳ ಬಗ್ಗೆ ವಿಶೇಷ ಜಾಗೃತಿ ವಹಿಸಲು ತಿಳಿಸಲಾಗಿದೆ.

ಉಗ್ರ ದಾಳಿ ಸಾಧ್ಯವಿಲ್ಲ

ಉಗ್ರ ದಾಳಿ ಸಾಧ್ಯವಿಲ್ಲ

ಭೂ ಸೇನೆ ಮತ್ತು ವಾಯುಸೇನೆ ಮತ್ತು ಗುಪ್ತಚರದಳ ಉಗ್ರರ ಚಟುವಟಿಕೆ ಮೇಲೆ ಹದ್ದಿನ ಕಣ್ಣಿರಿಸಿದ್ದು ಯಾವುದೆ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಿದೆ.

English summary
During his three-day visit starting January 25, US President Barack Obama will have a really tight schedule in India. Here some important things you should definitely know about Obama's visit to India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X