ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ದಿನಗಳ ಭಾರತ ಪ್ರವಾಸಕ್ಕಾಗಿ ವಿಮಾನ ಏರಿದ ಒಬಾಮ

By Kiran B Hegde
|
Google Oneindia Kannada News

ನವದೆಹಲಿ, ಜ. 24: ಗಣರಾಜ್ಯೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಭಾರತದಲ್ಲಿ ಮೂರು ದಿನಗಳ ಪ್ರವಾಸ ಕೈಗೊಂಡಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶನಿವಾರ ರಾತ್ರಿ ತಮ್ಮ ಏರ್‌ಫೋರ್ಸ್ ಒನ್ ವಿಮಾನ ಏರಿದ್ದಾರೆ.

ಅವರ ಜೊತೆ ದೊಡ್ಡ ಸಂಖ್ಯೆಯಲ್ಲಿ ಪ್ರತಿನಿಧಿಗಳ ನಿಯೋಗ ಹಾಗೂ ಉನ್ನತ ಅಧಿಕಾರಿಗಳ ತಂಡವೂ ಬರುತ್ತಿದೆ. ಬರಾಕ್ ಒಬಾಮ ಅವರು ಅನಿವಾರ್ಯ ಕಾರಣಗಳಿಂದ ತಾಜ್‌ಮಹಲ್ ಪ್ರವಾಸ ರದ್ದುಪಡಿಸಿದ್ದು, ಇದಕ್ಕಾಗಿ ಖೇದ ವ್ಯಕ್ತಪಡಿಸಿದ್ದಾರೆ ಎಂದು ಶ್ವೇತಭವನದ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿದೆ. [ಒಬಾಮಾ ಆಗ್ರಾ ಭೇಟಿ ರದ್ದಾಗಿದ್ದು ಏಕೆ? ಇಲ್ಲಿದೆ ಕಾರಣ]

ಈ ಮೊದಲು ನಿಗದಿಯಾಗಿದ್ದಂತೆ ಪ್ರವಾಸದ ಕೊನೆಯ ದಿನ ಅಂದರೆ ಜ. 27ರಂದು ಅಮೆರಿಕ ಅಧ್ಯಕ್ಷರು ಪತ್ನಿ ಸಮೇತ ಪ್ರೇಮಸೌಧಕ್ಕೆ ಭೇಟಿ ನೀಡಬೇಕಿತ್ತು. ಆದರೆ, ಸೌದಿ ಅರೇಬಿಯಾದ ರಾಜನಾಗಿದ್ದ ಕಿಂಗ್ ಅಬ್ದುಲ್ಲಾ ನಿಧನರಾದ ನಂತರ ನೇಮಕಗೊಂಡಿರುವ ನೂತನ ರಾಜನನ್ನು ಭೇಟಿ ಮಾಡಲು ಸೌದಿ ಅರೇಬಿಯಾಕ್ಕೆ ತೆರಳಲಿದ್ದಾರೆ. ಆದ್ದರಿಂದ ತಾಜ್‌ಮಹಲ್ ಸೌಂದರ್ಯ ಸವಿಯುವ ಅವಕಾಶ ಒಬಾಮ ದಂಪತಿಗೆ ಸಿಗುತ್ತಿಲ್ಲ.

abama

ದೊಡ್ಡ ಸಂಖ್ಯೆಯಲ್ಲಿ ಅತಿಥಿಗಳ ನಿಯೋಗ : ಒಬಾಮ ಜೊತೆ ಸಂಪುಟದ ಹಲವು ಸದಸ್ಯರು, ಪ್ರಭಾವಿ ಉದ್ಯಮಿಗಳು ಮತ್ತು ಹಲವು ಅಮೆರಿಕ ಕಾನೂನು ತಜ್ಞರು ಆಗಮಿಸಲಿದ್ದಾರೆ. ಇವರಲ್ಲಿ ಅಮೆರಿಕ ಸಂಸತ್ತಿನ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿ ನ್ಯಾನ್ಸಿ ಪೆಲೋಸಿ ಕೂಡ ಸೇರಿದ್ದಾರೆ. [ಉಗ್ರರಿಗೆ ಪಾಕ್ ಸುರಕ್ಷಿತ ಸ್ವರ್ಗ]

ಭಾರತಕ್ಕೆ ಪ್ರಯಾಣ ಬೆಳೆಸಿರುವ ಏರ್‌ಫೋರ್ಸ್‌ ಒನ್ ಜರ್ಮನಿಯ ರಮ್‌ಸ್ಟೇನ್‌ನಲ್ಲಿ ವಿಮಾನಕ್ಕೆ ಇಂಧನ ತುಂಬಿಸಿಕೊಳ್ಳಲು ಇಳಿಯಲಿದ್ದಾರೆ. ನಿಗದಿಯಂತೆ ನವದೆಹಲಿಯ ಪಾಲಮ್ ವಾಯು ದಳ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಆಗಮಿಸಲಿದ್ದಾರೆ.

ಒಬಾಮ ದಂಪತಿಗೆ ರಾಷ್ಟ್ರಪತಿ ಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಂಪ್ರದಾಯಿಕ ಸ್ವಾಗತ ನೀಡಲಿದ್ದಾರೆ. 12.40ಕ್ಕೆ ರಾಜ್‌ಘಾಟ್‌ನಲ್ಲಿರುವ ಮಹಾತ್ಮಾ ಗಾಂಧಿ ಸಮಾಧಿಗೆ ಗೌರವ ವಂದನೆ ಸಮರ್ಪಿಸುವರು. ಇಲ್ಲಿಯೇ ಹಮ್ಮಿಕೊಂಡಿರುವ ವನಮಹೋತ್ಸವ ಕಾರ್ಯಕ್ರಮದಲ್ಲೂ ಭಾಗವಹಿಸುವರು. [3 ಹಂತದಲ್ಲಿ ಒಬಾಮ ಆಹಾರ ಪರೀಕ್ಷೆ]

ನಂತರ ನರೇಂದ್ರ ಮೋದಿ ಹಾಗೂ ಬರಾಕ್ ಒಬಾಮ ಇಬ್ಬರೂ ಪ್ರತಿನಿಧಿಗಳ ನಿಯೋಗ ಮಟ್ಟದ ಸಭೆಯನ್ನು ಸುಮಾರು ಒಂದು ಗಂಟೆ ಕಾಲ ನಡೆಸುವರು. ಮಧ್ಯಾಹ್ನ 4.10ಕ್ಕೆ ಜಂಟಿ ಸುದ್ದಿಗೋಷ್ಠಿ ನಡೆಸುವರು.

ಸಂಜೆ 7.35ಕ್ಕೆ ಒಬಾಮ ಅವರು ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಅಮೆರಿಕ ರಾಯಭಾರ ಕಚೇರಿಯ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರನ್ನು ಭೇಟಿ ಮಾಡಲಿದ್ದಾರೆ. 7.50ಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ರಾತ್ರಿ ಊಟ ಸೇವಿಸಲು ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದಾರೆ. [ಅಮೆರಿಕನ್ನರ ಪ್ರಕಾರ ದೇಶದ ಕೆಟ್ಟ ಅಧ್ಯಕ್ಷ ಯಾರು?]

ಗಣರಾಜ್ಯೋತ್ಸವ : ಜ. 26ರ ಗಣರಾಜ್ಯೋತ್ಸವದಲ್ಲಿ ಒಬಾಮ ಅವರು ಪತ್ನಿಯೊಂದಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ನಂತರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೊಂದಿಗೆ ಸಮಾರಂಭದಲ್ಲಿ ಭಾಗವಹಿಸುವರು.

ಮಧ್ಯಾಹ್ನ ಒಬಾಮ ಹಾಗೂ ಮೋದಿ ಅವರು ವಿವಿಧ ಕಂಪನಿಗಳ ಸಿಇಓಗಳೊಂದಿಗೆ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸುವರು. ಈ ಸಂದರ್ಭದಲ್ಲಿ ಭಾರತ ಹಾಗೂ ಅಮೆರಿಕ ನಡುವಣ ಇರುವ ವ್ಯವಹಾರ ಒಪ್ಪಂದ ಕುರಿತು ವಿವರಿಸುವರು.

ಜ. 27ರಂದು ಬೆಳಗ್ಗೆ ಅಮೆರಿಕ ಅಧ್ಯಕ್ಷ ಒಬಾಮ ಅವರು ಸಿರಿ ಫೋರ್ಟ್ ಸಭಾಂಗಣದಲ್ಲಿ ಉಪನ್ಯಾಸ ನೀಡುವರು. ನಂತರ ತಾಜ್‌ಮಹಲ್ ನೋಡುವ ಕಾರ್ಯಕ್ರಮ ರದ್ದಾಗಿರುವ ಕಾರಣ ಸೌದಿ ಅರೇಬಿಯಾಕ್ಕೆ ತೆರಳಲಿದ್ದಾರೆ.

English summary
US President Barack Obama and his wife Michelle Obama has boarded the Air Force One for three-day trip to India. Obama regrets the cancellation of his visit to the Taj Mahal during his visit to India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X