ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದ ವಿರುದ್ಧ ಬ್ಯಾಂಕ್ ನೌಕರರ ಮುಷ್ಕರ

By Mahesh
|
Google Oneindia Kannada News

ನವದೆಹಲಿ, ಮೇ 12: ಕೇಂದ್ರ ಸರ್ಕಾರದ ಹಲವು ನಿರ್ಧಾರಗಳಿಂದ ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ನಷ್ಟವಾಗುತ್ತಿದೆ. ಸರ್ಕಾರದ ನೀತಿಗಳನ್ನು ಖಂಡಿಸಿ ಜುಲೈ 29ರಂದು ಸುಮಾರು 10 ಲಕ್ಷ ಮಂದಿ ಬ್ಯಾಂಕ್ ನೌಕರರು ಮುಷ್ಕರ ಹೂಡಲು ನಿರ್ಧರಿಸಿದ್ದಾರೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ಹೇಳಿದ್ದಾರೆ.

ಎಐಬಿಎಇ, ಎಐಬಿಒಸಿ, ಎನ್​ಸಿಬಿಇ, ಎಐಬಿಒಎ, ಬಿಇಎಫ್​ಐ, ಐಎನ್​ಬಿಇಎಫ್, ಐಎನ್​ಬಿಒಸಿ, ಎನ್​ಒಬಿಡಬ್ಲ್ಯೂ, ಎನ್​ಒಬಿಒ ಸಂಘಟನೆಗಳು ಯುಎಫ್​ಬಿಯು ಅಂಗ ಸಂಸ್ಥೆಗಳ ಪ್ರತಿನಿಧಿಗಳು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್​ಬಿಯು) ಸಭೆಯಲ್ಲಿ ಭಾಗವಹಿಸಿ ಈ ನಿರ್ಧಾರ ಕೈಗೊಂಡಿವೆ. [ಪಾಸ್ ಪೋರ್ಟ್ ಕಳೆದುಕೊಂಡ ಮಲ್ಯ ಮುಂದಿರುವ ಆಯ್ಕೆಗಳು?]

Bankers to strike on July 29 against government policies, inaction

ಪ್ರಾದೇಶಿಕ ಬ್ಯಾಂಕುಗಳಲ್ಲಿ ಹೆಚ್ಚು ಖಾಸಗಿ ಬಂಡವಾಳಕ್ಕೆ ಅನುಮತಿ ನೀಡುವ ಮೂಲಕ ಬ್ಯಾಂಕಿಂಗ್ ನಲ್ಲಿ ಅಸಮತೋಲನ ಉಂಟಾಗುತ್ತಿದೆ.ವಸೂಲಿಯಾಗದ ಸಾಲದ ಪ್ರಮಾಣ 10 ಲಕ್ಷ ಕೋಟಿ ರೂಪಾಯಿಗಳನ್ನು ಮೀರಿದೆ. ಸುಸ್ತಿದಾರರ ವಿರುದ್ಧ ಕ್ರಮ ಇಲ್ಲ ಎಂದು ವೆಂಕಟಾಚಲಂ ಹೇಳಿದರು.

ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದರೂ ಯಾವುದೇ ಕ್ರಮ ಇದುವರೆವಿಗೂ ಜರುಗಿಸಲು ಆಗಿಲ್ಲ. ಉದ್ಯಮಿ ವಿಜಯ್ ಮಲ್ಯ ಸೇರಿದಂತೆ ದೇಶದಲ್ಲಿ ಸರಿ ಸುಮಾರು 7,000 ಉದ್ದೇಶ ಪೂರ್ವಕ ಸುಸ್ತಿದಾರರಿದ್ದು ಒಟ್ಟು 60,000 ಕೋಟಿ ರು ಗೂ ಅಧಿಕ ಮೊತ್ತ ಬ್ಯಾಂಕುಗಳಿಗೆ ಸೇರಬೇಕಿದೆ ಎಂದು ವಿವರಿಸಿದರು (ಐಎಎನ್ಎಸ್)

English summary
Around 10 lakh bankers will go on strike on July 29 against the government's varied actions and inaction pertaining to the banking sector, said a top leader of All India Bank Employees'Association (AIBEA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X