ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ ಆ. 22ರಂದು ದೇಶವ್ಯಾಪಿ ಬ್ಯಾಂಕ್‌ ಮುಷ್ಕರ

|
Google Oneindia Kannada News

ಬೆಂಗಳೂರು, ಆಗಸ್ಟ್ 18 : ಕೇಂದ್ರ ಸರಕಾರದ ಕೆಲವು ಜನವಿರೋಧಿ ಬ್ಯಾಂಕಿಂಗ್‌ ಸುಧಾರಣೆಗಳನ್ನು ಖಂಡಿಸಿ ಬ್ಯಾಂಕ್‌ ನೌಕರರು ಆಗಸ್ಟ್ 22ರಂದು ದೇಶವ್ಯಾಪಿ ಮುಷ್ಕರ ನಡೆಸಲಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಯೂನಿಟ್ ನ ಪಶ್ಚಿಮ ಬಂಗಾಲದ ಸಂಚಾಲಕ ಸಿದ್ದಾರ್ಥ ಖಾನ್‌, ಬ್ಯಾಂಕಿಂಗ್ ವಲಯದ ಪ್ರಸ್ತಾವಿತ ಸುಧಾರಣೆಗಳ ವಿರುದ್ಧ ದೇಶದ ಪ್ರಮುಖ ಬ್ಯಾಂಕ್ ಸಂಘಟನೆಗಳಲ್ಲಿ ಒಂದಾದ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಯೂನಿಟ್(UFBU) ಮುಷ್ಕರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

Bank strike on Aug 22 to protest against proposed reforms

ಸುಸ್ತಿಸಾಲಗಳ ವಸೂಲಾತಿಗಾಗಿ ಸಂಸತ್ತು ನೇಮಿಸಿರುವ ಸಮಿತಿಯ ಶಿಫಾರಸುಗಳನ್ನು ತಕ್ಷಣ ಜಾರಿಮಾಡಬೇಕು. ವಸೂಲಾಗದ ಸಾಲಗಳ ಮರುಪಾವತಿಗಾಗಿ ಕಠಿಣ ಕ್ರಮ ಕೈಗೊಳ್ಳಬೇಕು.

ಬ್ಯಾಂಕುಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ಖಾಲಿ ಇರುವ ಹುದ್ದೆಗಳಿಗೆ ತಕ್ಷಣ ನೇಮಕಾತಿ ಮಾಡಬೇಕು. ಬ್ಯಾಂಕುಗಳ ವಿಲೀನ ಮತ್ತು ಖಾಸಗೀಕರಣ ಯೋಜನೆಗಳನ್ನು ಕೈಬಿಡಬೇಕು ಎಂದು ಅವರು ಒತ್ತಾಯಿಸಿದರು.

English summary
United Forum of Banking Unions (UFBU), the umbrella body of trade unions in the banking sector, has called a nation-wide strike on August 22 to protest against the reforms proposed by the Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X