ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಗುಲಗಳಲ್ಲಿ ಕಾಮಸೂತ್ರ ಪುಸ್ತಕ ಮಾರಾಟ ನಿಷೇಧಕ್ಕೆ ಆಗ್ರಹ

ವಿಶ್ವವಿಖ್ಯಾತ ಖಜುರಾಹೊ ದೇಗುಲದ ಬಳಿ ಕಾಮಸೂತ್ರ ಪುಸ್ತಕ ಮಾರಲಾಗುತ್ತಿದೆ ಎಂದು ಭಜರಂಗ ಸೇನೆ ಆರೋಪ. ದೇಗುಲದ ಮುಂದೆ ಪ್ರತಿಭಟನೆ ನಡೆಸಿದ ಪೊಲೀಸರಿಗೆ ಮನವಿ. ದೇಗುಲದ ಆವರಣಗಳ ಬಳಿ ಕಾಮಸೂತ್ರ ಪುಸ್ತಕಗಳನ್ನು ಮಾರಕೂಡದೆಂದು ಮನವಿ.

|
Google Oneindia Kannada News

ಛತ್ತರ್ ಪುರ (ಮಧ್ಯಪ್ರದೇಶ), ಜೂನ್ 15: ಇಲ್ಲಿನ ವಿಶ್ವವಿಖ್ಯಾತ ಕಜುರಾಹೊ ದೇಗುಲ ಸೇರಿದಂತೆ ಮಧ್ಯಪ್ರದೇಶದ ಹಲವಾರು ಪಾರಂಪರಿಕ ದೇಗುಲಗಳ ಆವರಣದಲ್ಲಿ ಕಾಮಸೂತ್ರ ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದನ್ನು ಕೂಡಲೇ ನಿಲ್ಲಿಸುವಂತೆ ಬಲಪಂಥೀಯ ಸಂಘಟನೆಯೊಂದು ಆಗ್ರಹಿಸಿದೆ.

ಕಾಮಾಕ್ಷಿ, ಸೊಂಟವೇ ವೈಕುಂಠ, ಕಾಯಕವೇ ಕೈಲಾಸ!ಕಾಮಾಕ್ಷಿ, ಸೊಂಟವೇ ವೈಕುಂಠ, ಕಾಯಕವೇ ಕೈಲಾಸ!

ಛತ್ತರ್ ಪುರದ ಖಜುರಾಹೋ ದೇಗುಲದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಭಜರಂಗ್ ಸೇನೆಯ ಕಾರ್ಯಕರ್ತರು ಆನಂತರ ಛತ್ತರ್ ಪುರ ಪೊಲೀಸ್ ಠಾಣೆಗೆ ಹೋಗಿ, ಕಾಮಸೂತ್ರ ಪುಸ್ತಕಗಳನ್ನು ನಿಷೇಧಿಸುವಂತೆ ಮನವಿ ಸಲ್ಲಿಸಿದರು.

Bajrang Sena says sale of Kamasutra books at Khajuraho against India’s culture, wants ban

ಕುಜುರಾಹೋ ದೇಗುಲವು ಮಿಥುನ ಶಿಲ್ಪಗಳಿಗೆ ವಿಶ್ವಖ್ಯಾತಿ ಪಡೆದಿದೆ. ವಿಶ್ವಸಂಸ್ಥೆಯ ಪಾರಂಪರಿಕ ತಾಣಗಳ ಪಟ್ಟಿಯಲ್ಲಿಯೂ ಸ್ಥಾನ ಪಡೆದಿರುವ ಈ ದೇಗುಲವನ್ನು ಸಂದರ್ಶಿಸಲು ಪ್ರತಿ ಮಾಸದಲ್ಲೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

ದೇಗುಲದ ಮೇಲ್ಮೈ ಮೇಲೆ ಮಿಥುನ ಶಿಲ್ಪಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಇಲ್ಲಿನ ಕೆಲವು ವರ್ತಕರು ದೇಗುಲದ ಮುಂದೆ ಕಾಮಸೂತ್ರ ಪುಸ್ತಕಗಳನ್ನು ಮಾರಾಟ ಮಾಡಲು ಶುರು ಮಾಡಿದ್ದಾರೆ. ಆನಂತರ ಇದು ಇತರ ದೇಗುಲದ ಅಂಗಳಕ್ಕೂ ವ್ಯಾಪಿಸಿದೆ ಎಂಬುದು ಭಜರಂಗ್ ಸೇನೆಯ ಆರೋಪ.

English summary
Members of Bajrang Sena want a ban on the sale of Kamasutra books in the land of Kamasutra — the Khajuraho temple premises, in Madhya Pradesh’s Chhatarpur district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X