ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಮ್ ಪ್ರಕಾರ ಆಜಾನ್ ಓಕೆ, ಲೌಡ್ ಸ್ಪೀಕರ್ ಯಾಕೆ?: ಹೈಕೋರ್ಟ್

By ವಿಕಾಸ್ ನಂಜಪ್ಪ
|
Google Oneindia Kannada News

ಚಂಡೀಗಢ, ಮೇ 4: ಆಜಾನ್ ಇಸ್ಲಾಮ್ ನಲ್ಲಿ ಅವಿಭಾಜ್ಯವಾಗಿದೆ ಒಪ್ಪೋಣ. ಆದರೆ ಲೌಡ್ ಸ್ಪೀಕರ್ ನಲ್ಲೇ ಹೇಳಬೇಕು ಅಂತೇನೂ ಇಲ್ಲವಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಅಸಾ ಮೊಹ್ಮದ್ ಎಂಬಾತ ಗಾಯಕ ಸೋನು ನಿಗಮ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಆಜಾನ್ ನ ಲೌಡ್ ಸ್ಪೀಕರ್ ನಲ್ಲಿ ಹೇಳುವುದರಿಂದ ನಿದ್ದೆ ಹಾಳಾಗುತ್ತಿದೆ ಎಂದು ಕೆಲ ದಿನದ ಹಿಂದೆ ಸೋನು ನಿಗಮ್ ಟ್ವೀಟ್ ಮಾಡಿದ್ದರು. ಅದು ಭಾರೀ ಚರ್ಚೆಗೆ ಕಾರಣವಾಗಿತ್ತು. ನ್ಯಾಯಮೂರ್ತಿ ಎಂಎಂ ಬೇಡಿ ನೇತೃತ್ವದ ಪೀಠವು ಅರ್ಜಿಯನ್ನು ತಿರಸ್ಕರಿಸಿದೆ. ಆಜಾನ್ (ಬೆಳಗಿನ ಪ್ರಾರ್ಥನೆ) ಇಸ್ಲಾಮ್ ನ ಅವಿಭಾಜ್ಯ ಭಾಗ ಅಂತ ಒಪ್ಪಬಹುದು. ಆದರೆ ಆಜಾನ್ ನ ಲೌಡ್ ಸ್ಪೀಕರ್ ನಲ್ಲೇ ಹೇಳಬೇಕು ಅಂತ ಕಡ್ಡಾಯ ಎಲ್ಲಿದೆ ಎಂದು ಪ್ರಶ್ನಿಸಿದೆ.

Azaan and not the loudspeaker is an integral part of Islam says HC

ಸುಮ್ಮನೆ ಅಗ್ಗದ ಪ್ರಚಾರ ಪಡೆಯುವುದಕ್ಕೆ ನೀವು ಅರ್ಜಿ ಹಾಕಿದ್ದೀರಾ ಎಂದು ಮೊಹ್ಮದ್ ಗೆ ಕೋರ್ಟ್ ಹೇಳಿದೆ. ಸೋನು ನಿಗಮ್ ತಮ್ಮ ಟ್ವೀಟ್ ನಲ್ಲಿ ಆಜಾನ್ ವಿರುದ್ಧ ಏನೂ ಹೇಳಿಲ್ಲ. ತುಂಬ ಸ್ಪಷ್ಟವಾಗಿ ಲೌಡ್ ಸ್ಪೀಕರ್ ನಿಂದ ಆಗುತ್ತಿರುವ ತೊಂದರೆ ಬಗ್ಗೆ ಮಾತ್ರ ಹೇಳಿದ್ದಾರೆ ಯಾವುದೇ ಧರ್ಮವನ್ನು ಅವಮಾನಿಸುವುದು ಅವರ ಉದ್ದೇಶ ಅಲ್ಲ. ಯಾವ ಧರ್ಮದಲ್ಲೂ ಪ್ರಾರ್ಥನೆಯನ್ನು ಲೌಡ್ ಸ್ಪೀಕರ್ ಮೂಲಕ ಹೇಳು ಎಂದಿಲ್ಲ ಎಂಬ ಅಂಶವನ್ನು ಪೀಠವು ಉಲ್ಲೇಖಿಸಿದೆ.
English summary
Azaan is an integral part of Islam, not the loudspeaker, the Punjab and Haryana High Court said in a judgment. The Bench was dealing with a petition filed by one Asa Mohammad who had sought criminal action against singer, Sonu Nigam who had tweeted against Azaan being played out on loudspeakers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X