ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಂಗಿಕ ಕಿರುಕುಳ ಆರೋಪ ಹೊತ್ತ ಸಾರಿಗೆ ಸಚಿವ ರಾಜೀನಾಮೆ!

ಕೇರಳದ ಎಲ್ ಡಿ ಎಫ್ ಸರ್ಕಾರಕ್ಕೆ ಆಘಾತವಾಗಿದೆ. ಕೇರಳದ ಸಾರಿಗೆ ಸಚಿವ ಎಕೆ ಸಸೀಂದ್ರನ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.

By Mahesh
|
Google Oneindia Kannada News

ಕೇರಳದ ಎಲ್ ಡಿ ಎಫ್ ಸರ್ಕಾರಕ್ಕೆ ಆಘಾತವಾಗಿದೆ. ಕೇರಳದ ಸಾರಿಗೆ ಸಚಿವ ಎಕೆ ಸಸೀಂದ್ರನ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.

ಸಸೀಂದ್ರನ್ ಅವರು ಮಹಿಳೆಯೊಬ್ಬರಿಗೆ ಕರೆ ಮಾಡಿ ಕೊಳಕು ಭಾಷೆಯಲ್ಲಿ ಮಾತನಾಡಿ, ಕಿರುಕುಳ ನೀಡಿರುವುದನ್ನು ಖಾಸಗಿ ಸುದ್ದಿವಾಹಿನಿ ಬಯಲು ಮಾಡಿದೆ. ಇದಾದ ಬಳಿಕೆ ಸಚಿವರು ರಾಜೀನಾಮೆ ಸಲ್ಲಿಸಿದ್ದಾರೆ.

Audio tape scandal : Kerala Minister AK Saseendran resigns

ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಫೋನ್ ಕರೆ ಮಾಡಿ ಅಶ್ಲೀಲ ಮಾತುಗಳನ್ನಾಡಿ ಕಿರುಕುಳ ನೀಡಿದ ಆರೋಪವನ್ನು ಸಚಿವ ಸಸೀಂದ್ರನ್ ಹೊತ್ತಿದ್ದಾರೆ. ಈ ಕುರಿತಂತೆ ಮಂಗಳ ಟಿವಿ, ಆಡಿಯೋ ಕ್ಲಿಪ್ ಪ್ರಸಾರ ಮಾಡಿತ್ತು.

ನಂತರ ಸುದ್ದಿಗೋಷ್ಠಿ ನಡೆಸಿ, ರಾಜೀನಾಮೆ ಸಲ್ಲಿಸಿರುವುದಾಗಿ ಘೋಷಿಸಿದರು. ಆದರೆ, ನಾನು ಯಾವುದೇ ತಪ್ಪು ಮಾಡಿಲ್ಲ. ಅಪರಾಧಿ ಮನೋಭಾವದಿಂದ ರಾಜೀನಾಮೆ ನೀಡಿಲ್ಲ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಲಹೆಯಂತೆ ರಾಜೀನಾಮೆ ನೀಡಿದ್ದೇನೆ. ಯಾವುದೇ ರೀತಿಯ ತನಿಖೆಗೂ ನಾನು ಸಿದ್ಧ ಎಂದಿದ್ದಾರೆ.

ಕೇರಳ್ದದ ಎಲ್ ಡಿಎಫ್ ಸರ್ಕಾರಕ್ಕೆ ಇದು ಎರಡನೇ ಆಘಾತವಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಕೈಗಾರಿಕಾ ಸಚಿವ ಇ.ಪಿ ಜಯರಾಜನ್ ಅವರು ಸ್ವಜನಪಕ್ಷಪಾತ, ಸರ್ಕಾರಿ ಉನ್ನತ ಹುದ್ದೆಗಳಿಗೆ ಕುಟುಂಬಸ್ಥರ ನೇಮಕಾತಿ ಆರೋಪ ಹೊತ್ತು ರಾಜೀನಾಮೆ ನೀಡಿದ್ದರು.

English summary
Audio tape scandal : AK Saseendran resigned after an audio tape of alleged sexual harassment was aired on a regional channel Mangala TV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X