ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮಹತ್ಯೆ ಯತ್ನ ಅಪರಾಧವಲ್ಲ, ಲೋಕಸಭೆಯಲ್ಲಿ ಮಸೂದೆ ಅಂಗೀಕಾರ

ಆತ್ಮಹತ್ಯೆಗೆ ಯತ್ನಿಸುವುದು ಐಪಿಸಿ 309ರ ಪ್ರಕಾರ ಅಪರಾಧ. ಮಾನಸಿಕ ಒತ್ತಡ, ಸಮಸ್ಯೆಯಿಂದ ಆತ್ಮಹತ್ಯೆಗೆ ಯತ್ನಿಸಿದರೆ ಅಂಥ ವ್ಯಕ್ತಿಗಳಿಗೆ ಶಿಕ್ಷೆ ನೀಡಬಾರದು ಎಂಬ ಮಹತ್ವದ ಅಂಶವುಳ್ಳ ಮಸೂದೆಯನ್ನು ಸೋಮವಾರ ಸಂಸತ್ ನಲ್ಲಿ ಅಂಗೀಕರಿಸಲಾಗಿದೆ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮಾರ್ಚ್ 28: ಮಾನಸಿಕ ಆರೋಗ್ಯ ರಕ್ಷಣೆಯ ಮಹತ್ವದ ಮಸೂದೆ ಲೋಕಸಭೆಯಲ್ಲಿ ಸೋಮವಾರ ಅಂಗೀಕರವಾಗಿದೆ. ಈ ಮಸೂದೆಯ ಅತಿ ಮುಖ್ಯ ಅಂಶವೆಂದರೆ ಮಾನಸಿಕ ಸಮಸ್ಯೆ ಎದುರಿಸುತ್ತಿರುವವರು ಆತ್ಮಹತ್ಯೆಗೆ ಯತ್ನಿಸಿದರೆ ಅದೊಂದು ಅಪರಾಧ ಎಂದು ಪರಿಗಣಿಸುವಂತಿಲ್ಲ, ಜತೆಗೆ ಮಾನಸಿಕ ಅನಾರೋಗ್ಯ ಇರುವವರಿಗೆ ಅಗತ್ಯ ಸೇವೆ ಒದಗಿಸಲು ಈ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.

ಭಾರತೀಯ ದಂಡ ಸಂಹಿತೆ 309ರ ಪ್ರಕಾರ ಆತ್ಮಹತ್ಯೆಗೆ ಯತ್ನಿಸುವುದು ಅಪರಾಧ. ಆದರೆ ಆ ವ್ಯಕ್ತಿಗೆ ತೀವ್ರ ಒತ್ತಡ, ಮಾನಸಿಕ ಸಮಸ್ಯೆ ಇದೆ ಎಂದು ಸಾಬೀತಾದಲ್ಲಿ ಆತ್ಮಹತ್ಯೆ ಯತ್ನವನ್ನು ಅಪರಾಧ ಎಂದು ಪರಿಗಣಿಸಬಾರದು ಎಂದು ಮಸೂದೆಯಲ್ಲಿ ಪ್ರಸ್ತಾವ ಮಾಡಲಾಗಿದೆ. ಮತ್ತು ಐಪಿಸಿ 309ರ ಅಡಿಯಲ್ಲಿ ಆ ವ್ಯಕ್ತಿ ಶಿಕ್ಷಾರ್ಹರಲ್ಲ.[ಕನಿಷ್ಠ 6 ಕೋಟಿ ಭಾರತೀಯರಿಗೆ ಮಾನಸಿಕ ಆರೋಗ್ಯ ಸಮಸ್ಯೆ]

Attempting suicide not a crime: What we know about the Mental Health Care Bill

ಮಾನಸಿಕ ಆರೋಗ್ಯ ರಕ್ಷಣೆ ಮಸೂದೆಯ ಪ್ರಮುಖ ಅಂಶಗಳು ಹೀಗಿವೆ.
ಸರಕಾರದ ಅನುದಾನ ಅಥವಾ ಸರಕಾರವೇ ನಡೆಸುವ ಮಾನಸಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಆರೋಗ್ಯ ಸೇವೆ ಪಡೆಯುವ ಹಕ್ಕು ಎಲ್ಲರಿಗೂ ಇದೆ. ಉತ್ತಮ ದರ್ಜೆಯ, ಸುಲಭ ಬೆಲೆಯ ಹಾಗೂ ಎಲ್ಲರನ್ನೂ ತಲುಪುವಂಥ ಸೇವೆ ಒದಗಿಸಬೇಕು. ಎಲ್ಲರಿಗೂ ಸಮಾನ ಚಿಕಿತ್ಸೆ ಎಂಬ ಹಕ್ಕಿನ ಹೊರತಾಗಿ ಈ ಎಲ್ಲ ಸೇವೆ ಒದಗಿಸಬೇಕು

ಮಾನಸಿಕ ಆರೋಗ್ಯ ಸಮಸ್ಯೆ ಆಧಾರದಲ್ಲಿ ಆಯಾ ವ್ಯಕ್ತಿಯ ಅಗತ್ಯಕ್ಕೆ ತಕ್ಕಂತೆ ಉನ್ನತ ಮಟ್ಟದ ಚಿಕಿತ್ಸೆ ಒದಗಿಸಬೇಕು. ಆಯಾ ವ್ಯಕ್ತಿಯ ಸಂಬಂಧಪಟ್ಟವರು ಅಪೇಕ್ಷಿಸುವಂಥ ಸೇವೆ ನೀಡಬೇಕು ಮತ್ತು ಸಂಬಂಧಪಟ್ಟ ವೈದ್ಯಕೀಯ ಪರಿಣತರು ಆ ಚಿಕಿತ್ಸೆಗೆ ಸಲಹೆ ಮಾಡಿರಬೇಕು.[ಸ್ನೇಹಭವನದ ಮಮತೆಯ ಮಡಿಲಲ್ಲಿ ಮಾನಸಿಕ ಅಸ್ವಸ್ಥರು]

ಮಾನಸಿಕ ಸಮಸ್ಯೆ ಇರುವವರು ಆತ್ಮಹತ್ಯೆಗೆ ಯತ್ನಿಸಿದರೆ ಭಾರತೀಯ ದಂಡ ಸಂಹಿತೆಯಡಿ ಶಿಕ್ಷಾರ್ಹ ಅಪರಾಧ ಅಲ್ಲ.

ಉನ್ನತ ಮಟ್ಟದ ಪ್ರಕ್ರಿಯೆಗಳ ಪರಿಶೀಲನೆಗಾಗಿ ಅರೆ ನ್ಯಾಯಾಂಗ ವ್ಯವಸ್ಥೆಯೊಂದನ್ನು ರೂಪಿಸಲಾಗುವುದು. ಮಾನಸಿಕ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಯ ರಕ್ಷಣೆಗೆ ಸಂಬಂಧಿಸಿದಂತೆ ಅದು ಸರಕಾರಕ್ಕೆ ಶಿಫಾರಸುಗಳನ್ನು ಮಾಡುತ್ತದೆ.

English summary
On Monday, Parliament passed the important Mental Health Care Bill in the Lok Sabha. The most significant thing about the bill is that it decriminalises a suicide attempt by mentally ill people. It also provides services for people with mental illness.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X