ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ್ಮಹತ್ಯೆಗೆ ಯತ್ನಿಸುವುದು ಇನ್ನು ಅಪರಾಧವಲ್ಲ!

|
Google Oneindia Kannada News

ನವದೆಹಲಿ, ಡಿ. 10 : ಇನ್ನು ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ಬದುಕುಳಿದರೆ ಪೊಲೀಸರು ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ. ಭಾರತೀಯ ದಂಡ ಸಂಹಿತೆಯಲ್ಲಿ ತಿದ್ದುಪಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅಪರಾಧ ಪ್ರಕರಣಗಳ ಪಟ್ಟಿಯಿಂದ ಆತ್ಮಹತ್ಯೆ ಯತ್ನವನ್ನು ತೆಗೆದುಹಾಕಲು ನಿರ್ಧರಿಸಿದೆ.

ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ 18 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳು ಸಮ್ಮತಿ ಸೂಚಿಸಿದ್ದು, ಸೆಕ್ಷನ್ 309ಅನ್ನು ತೆಗೆದು ಹಾಕಲು ಸರ್ಕಾರ ಮುಂದಾಗಿದೆ. ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದವರ ವಿರುದ್ಧ ದೂರು ದಾಖಲು ಮಾಡದೆ ಅವರಲ್ಲಿ ಜೀವನೋಲ್ಲಾಸ ತುಂಬಲು ಈ ತೀರ್ಮಾನ ಕೈಗೊಳ್ಳಲಾಗಿದೆ.

Suicide

ಇನ್ನು ಮುಂದೆ 309 ಸೆಕ್ಷನ್‌ ತೆಗೆದು ಹಾಕಲು ನಿರ್ಧರಿಸಲಾಗಿದ್ದು, ಆತ್ಮಹತ್ಯೆ ಯತ್ನ ಮಾಡಿ ಬದುಕುಳಿದ ವ್ಯಕ್ತಿಯ ವಿರುದ್ಧ ದೂರು ಸ್ವೀಕರಿಸುವಂತಿಲ್ಲ. ವಿಚಾರಣೆ ಅಥವಾ ತನಿಖೆ ನಡೆಸುವಂತಿಲ್ಲ ಎಂಬ ನಿಯಮವನ್ನು ರೂಪಿಸಲಾಗುತ್ತದೆ. [ಕಡಿಮೆ ಕಾನೂನು, ಹೆಚ್ಚಿನ ಪ್ರಭಾವ : ಗೌಡರ ಘೋಷಣೆ]

ಸದ್ಯ ಐಪಿಸಿ ಸೆಕ್ಷನ್‌ 309ರ ಅಡಿ ಆತ್ಮಹತ್ಯೆಗೆ ಯತ್ನಿಸಿದವರಿಗೆ 1 ವರ್ಷ ಜೈಲು ಮತ್ತು ದಂಡ ವಿಧಿಸಲಾಗುತ್ತಿತ್ತು. ಕೇಂದ್ರದಲ್ಲಿ ಹೊಸ ಸರ್ಕಾರ ಜಾರಿಗೆ ಬಂದಾಗಲೇ ಅನಗತ್ಯ ಕಾನೂನುಗಳನ್ನು ತೆಗೆದುಹಾಕುವ ಬಗ್ಗೆ ಚರ್ಚೆ ಆರಂಭವಾಗಿತ್ತು.

English summary
Attempt to suicide is no longer a crime. The Central Government on Wednesday said, it will remove section 309 from the Indian Penal Code, under which anyone attempting to commit suicide is punishable with a jail term to one year and a fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X