ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆಯ ಬಾಲಕಿ ಉಗ್ರ ಸಂಘಟನೆ ಸೇರಲು ಹೊರಟಿದ್ದಳೆ?

|
Google Oneindia Kannada News

ಪುಣೆ, ಡಿಸೆಂಬರ್, 18: ಐಎಸ್ ಐಎಸ್ ಸೇರಲು ಮುಂದಾಗಿದ್ದ 16 ವರ್ಷದ ಮುಸ್ಲಿಂ ಬಾಲಕಿಯನ್ನು ಉಗ್ರ ನಿಗ್ರಹ ಪಡೆ ರಕ್ಷಣೆ ಮಾಡಿದ್ದು ನಿರಂತರ ಪ್ರಶ್ನೆ ಕೇಳುತ್ತಿದೆ.

ಪುಣೆಯ ಕಾನ್ವೆಂಟ್ ಒಂದರ 11 ನೇ ತರಗತಿ ವಿದ್ಯಾರ್ಥಿನಿ ಐಎಸ್ ಐಎಸ್ ಉಗ್ರ ಸಂಘಟನೆ ಸೇರಲು ಸಿರಿಯಾಗೆ ವಿಮಾನದಲ್ಲಿ ಹೊರಟಿದ್ದಳು. ಈ ವೇಳೆ ಮಹಾರಾಷ್ಟ್ರ ಉಗ್ರ ನಿಗ್ರಹ ಪಡೆ(ಎಟಿಎಸ್) ಬಾಲಕಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.[ಉಗ್ರವಾದ ಬಿತ್ತುತ್ತಿದ್ದವನಿಗೆ ಸುರತ್ಕಲ್ ನಂಟು]

isis

ಕಳೆದ ಕೆಲ ವಾರಗಳಿಂದ ಉಗ್ರ ನಿಗ್ರಹ ಪಡೆ ಬಾಲಕಿ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಕಳೆದ ವಾರ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಹಲವು ಆತಂಕದ ಮಾಹಿತಿಗಳು ಹೊರಕ್ಕೆ ಬಂದಿವೆ.

ಉಗ್ರ ಸಂಘಟನೆ ಕುರಿತು ಆಲ್ ಜಝೀರಾ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದ ಡಾಕ್ಯುಮೆಂಟರಿಯನ್ನು ನಿರಂತರವಾಗಿ ನೋಡುತ್ತಿದ್ದ ಬಾಲಕಿ ಉಗ್ರ ಚಟುವಟಿಕೆ ಕಡೆ ಆಕರ್ಷಿತಳಾಗಿದ್ದಳು.[ಕಣ್ಣು ಕಾಣದ ಅಜ್ಜಿ ಉಗ್ರವಾದದ ಬಗ್ಗೆ ಹೇಳಿದ್ದೇನು]

ಆಕೆಯ ಕುಟುಂಬದವರು ಬಾಲಕಿಯಲ್ಲಾದ ಬದಲಾವಣೆಯನ್ನು ಗಮನಿಸಿದ್ದರು. ಸದ್ಯ ಬಾಲಕಿಯನ್ನು ಕುಟುಂಬ ಮತ್ತು ಉಗ್ರ ನಿಗ್ರಹ ಪಡೆ ಮೊದಲಿನ ಸ್ಥಿತಿಗೆ ತರುವ ಯತ್ನ ಮಾಡುತ್ತಿವೆ.

ವೈದ್ಯಕೀಯ ಶಿಕ್ಷಣಕ್ಕೆಂದು ಸಿರಿಯಾಗೆ ತೆರಳಿ ಭಾರತದಿಂದ 200 ಯುವಕರನ್ನು ಕರೆಸಿಕೊಳ್ಳುವುದು ಆಕೆಯ ಉದ್ದೇಶವಾಗಿತ್ತು ಎಂಬ ಆತಂಕಕಾರಿ ಮಾಹಿತಿಯೂ ಈ ವೇಳೆ ಬಹಿರಂಗವಾಗಿದೆ. 2010ರ ಪುಣೆಯ ಜರ್ಮನ್ ಬೇಕರಿ ಸ್ಫೋಟದಲ್ಲಿ 17 ಜನ ಸಾವನ್ನಪ್ಪಿದರು. ಉಗ್ರರು ಭಾರತದ ಎರಡನೇ ದರ್ಜೆ ನಗರಗಳನ್ನು ಟಾರ್ಗೆಟ್ ಮಾಡುತ್ತಿರುವುದು ಆತಂಕ ಹೆಚ್ಚಿಸಿದೆ.

English summary
Pune based 16-year-old Muslim girl, who was reportedly radicalised by her ISIS contacts abroad and brain-washed to go to Syria, has been questioned by sleuths of Pune Anti-Terrorism Squad and sent to a de-radicalisation programme, an ATS officer said here tonight. According to the officer, the girl is a bright convent educated class XI student, studying in a city college.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X