ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಾರಾಮ್ ಬಳಿ 2,300 ಕೋಟಿ ರು ಆಸ್ತಿ ಇದ್ರು, ತೆರಿಗೆ ವಿನಾಯಿತಿ!

By Mahesh
|
Google Oneindia Kannada News

ನವದೆಹಲಿ, ಜೂನ್ 23: ಲೈಂಗಿಕ ಕಿರುಕುಳ ಆರೋಪ ಹೊತ್ತು ಜೈಲು ಪಾಲಾಗಿರುವ ವಿವಾದಿತ ಸ್ವಯಂ ಘೋಷಿತ ದೇವ ಮಾನವ ಅಸಾರಾಮ್ ಬಾಪು ಅವರ ಬಳಿ 2,300 ಕೋಟಿ ರು ಗೂ ಅಧಿಕ ಅಘೋಷಿತ ಆಸ್ತಿ ಇದೆ. ಆದರೂ ಬಾಪು ಅವರ ಒಡೆತನ ಚಾರಿಟೇಬಲ್ ಟ್ರಸ್ಟ್ ಗಳಿಗೆ ತೆರಿಗೆ ವಿನಾಯಿತಿ ಮುಂದುವರೆಸಲಾಗಿದೆ.

ಕೊನೆಗೂ ಎಚ್ಚೆತ್ತುಕೊಂಡಿರುವ ಅದಾಯ ತೆರಿಗೆ ಇಲಾಖೆ, ಕ್ರಮಕೈಗೊಳ್ಳಲು ಮುಂದಾಗಿದೆ. ರಿಯಲ್ ಎಸ್ಟೇಟ್, ಮ್ಯೂಚುವಲ್ ಫಂಡ್, ಷೇರುಗಳು, ಕಿಸಾನ್​ವಿಕಾಸ್ ಪತ್ರ ಮುಂತಾದೆದೆಗಳಲ್ಲಿ ಬೇನಾಮಿ ಹೆಸರಿನಲ್ಲಿ ಅಸಾರಾಮ್ ಬಾಪು ಹಾಗೂ ಹಿಂಬಾಲಕರು ಹೂಡಿಕೆ ಮಾಡಿರುವುದು ಕಂಡುಬಂದಿದೆ ಎಂದು ಇಲಾಖೆ ಹೇಳಿದೆ.

Asaram Bapu’s trusts hold undisclosed income of Rs 2,300 cr, reveals IT probe

ಕೋಲ್ಕತ್ತಾದ 7 ಖಾಸಗಿ ಕಂಪನಿಗಳ ಮೂಲಕ ವ್ಯವಹಾರ ನಡೆಸಲಾಗುತ್ತಿದ್ದು, ಅಸಾರಾಂ ಮತ್ತು ಸಹಚರರು ತಿಂಗಳಿಗೆ ಶೇ.1ರಿಂದ ಶೇ.2 ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದರು. 1991-92ರ ನಂತರದಲ್ಲಿ ಸಾಲ ನೀಡುತ್ತಾ ಬಂದಿದ್ದು, ದೇಶದೆಲ್ಲೆಡೆ 1,400 ಜನರಿಗೆ ಒಟ್ಟು 3,800 ಕೋಟಿ ರುಗಳನ್ನು ಸಾಲದ ರೂಪದಲ್ಲಿ ನೀಡಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 11 ನಗರಗಳಲ್ಲಿ ಅಸಾರಾಂ ಹಾಗೂ ಸಹಚರರಿಗೆ ಸೇರಿದ 71 ಜಾಗಗಳ ಮೇಲೆ ದಾಳಿ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.ರಾಜಸ್ಥಾನದ ಜೋಧಪುರ್ ಆಶ್ರಮದಲ್ಲಿ 16 ವರ್ಷ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಎಸೆಗಿದ ಆರೋಪದ ಮೇಲೆ 2013ರಲ್ಲಿ ಅಸಾರಾಮ್ ಬಾಪುರನ್ನು ಬಂಧಿಸಿ, ಜೈಲಿಗೆ ಕಳಿಸಲಾಗಿದೆ.

English summary
Various charitable trusts controlled by jailed ‘godman’ Asaram Bapu hold undisclosed income of Rs 2,300 crore since 2008-09, a probe by the Income Tax (I-T) department has revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X