ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನಸಂಖ್ಯೆಗಿಂತ ಜಾಸ್ತಿ ಆಧಾರ್ ಕಾರ್ಡ್ ವಿತರಣೆ!

|
Google Oneindia Kannada News

ಯುಪಿಎ ಸರಕಾರ ಮಹತ್ವಾಕಾಂಕ್ಷೆಯಿಂದ ಆರಂಭಿಸಿದ್ದ 'ಆಧಾರ್ ಕಾರ್ಡ್' ವಿತರಣೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲವೇ? 2011ರ ಜನಗಣತಿಗೂ, ಇದುವರೆಗೆ ಆಧಾರ್ ಕಾರ್ಡ್ ವಿತರಣೆಯಾಗಿರುವುದಕ್ಕೂ ಹೋಲಿಕೆಯಾಗದೇ ಇರುವುದು ಇಂತಹ ಸಣ್ಣ ಅನುಮಾನಕ್ಕೆ ಈಗ ದಾರಿ ಮಾಡಿಕೊಟ್ಟಿದೆ.

ಒಂದೆಡೆ, ಸರಕಾರಿ ಸೇವೆಗಳನ್ನು ಪಡೆಯಲು, ಎಲ್ಪಿಜಿ ಪಡೆಯಲು, ಬ್ಯಾಂಕ್ ಖಾತೆಯನ್ನು ತೆರೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕೆನ್ನುವ ಕಾನೂನು ಕಟ್ಟುನಿಟ್ಟಾಗಿ ಜಾರಿಯಾಗುತ್ತಿದೆ. ಇನ್ನೊಂದೆಡೆ, 2011ರ ಜನಗಣತಿಗಿಂತ ಹೆಚ್ಚು ಆಧಾರ್ ಕಾರ್ಡ್ ವಿತರಣೆಯಾಗಿದೆ ಎನ್ನುವ ವಿಷಯ ಬಹಿರಂಗವಾಗಿದೆ.

ಆದರೂ, 2011ರ ಸೆನ್ಸಸ್ ನಂತರದ ನಾಲ್ಕು ವರ್ಷಗಳಲ್ಲಿ ಕುಟುಂಬ ಸದಸ್ಯರ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದೆ ಎನ್ನುವ ಆಧಾರ್ ಪ್ರಾಧಿಕಾರದ ವಾದವೂ ಮೇಲ್ನೋಟಕ್ಕೆ ಒಪ್ಪಿಕೊಳ್ಳುವಂತದ್ದು. (ಆಧಾರ್ ಕಾರ್ಡ್ ಮಾಡಿಸುವುದು ಹೇಗೆ)

ದೇಶದ 36 ರಾಜ್ಯಗಳ ಪೈಕಿ ಕೆಲ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿತರಣೆಯಾಗಿರುವ ಆಧಾರ್ ಕಾರ್ಡುಗಳು 2011ರ ಜನಗಣತಿಗೆ ತಾಳೆಯಾಗದೇ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಡು ವಿತರಣೆಯಾಗಿರುವುದು ಈ ಗೊಂದಲಕ್ಕೆ ಕಾರಣ.

ದೇಶದ ಹದಿಮೂರು ರಾಜ್ಯಗಳಲ್ಲಿ ಆಧಾರ್ ಕಾರ್ಡ್ ಹೊಂದಿರುವವರ ಸಂಖ್ಯೆ, ಜನಸಂಖ್ಯೆಗಿಂತ ಹೆಚ್ಚಾಗಿದೆ. ಆದರೆ, ಯುಐಡಿಎಐ ಅಧಿಕಾರಿಗಳು ಇದರಲ್ಲಿ ಯಾವುದೇ ರೀತಿಯ ಎಡವಟ್ಟು ನಡೆದಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಯಾವ ಯಾವ ರಾಜ್ಯಗಳಲ್ಲಿ ಈ ಗೊಂದಲ

ಯಾವ ಯಾವ ರಾಜ್ಯಗಳಲ್ಲಿ ಈ ಗೊಂದಲ

ಕೇಂದ್ರಾಡಳಿತ ಪ್ರದೇಶ ದೆಹಲಿ, ಲಕ್ಷದ್ವೀಪ, ಪುದುಚೇರಿ, ಚಂಡೀಗಢ ಮತ್ತು ರಾಜ್ಯಗಳಾದ ಆಂಧ್ರಪ್ರದೇಶ, ಸಿಕ್ಕಿಂ, ಹಿಮಾಚಲ ಪ್ರದೇಶ, ಪಂಜಾಬ್, ಕೇರಳ, ಜಾರ್ಖಂಡ, ಗೋವಾ, ಹರ್ಯಾಣ, ತ್ರಿಪುರ ರಾಜ್ಯಗಳು. ಪುಣ್ಯಕ್ಕೆ ಈ ಪಟ್ಟಿಯಲ್ಲಿ ನಮ್ಮ ರಾಜ್ಯದ ಹೆಸರಿಲ್ಲ.

ಪ್ರಾಧಿಕಾರದ ಪ್ರಕಾರ

ಪ್ರಾಧಿಕಾರದ ಪ್ರಕಾರ

786 ಮಿಲಿಯನ್ ಆಧಾರ್ ಕಾರ್ಡನ್ನು ಪ್ರಾಧಿಕಾರ ಇದುವರೆಗೆ ವಿತರಿಸಿದೆ. ಇದರಲ್ಲಿ 642 ಮಿಲಿಯನ್ ಕಾರ್ಡ್ 24 ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿ ವಿತರಣೆಯಾಗಿದೆ. ಉಳಿದ ಹನ್ನೆರಡು ರಾಜ್ಯಗಳಲ್ಲಿನ 144 ಮಿಲಿಯನ್ ಕಾರ್ಡ್ ವಿತರಣೆಯಾಗಿದೆ.

ಆಧಾರ್ ಕಾರ್ಡ್ ವಿತರಣೆ ಜವಾಬ್ದಾರಿ

ಆಧಾರ್ ಕಾರ್ಡ್ ವಿತರಣೆ ಜವಾಬ್ದಾರಿ

36 ರಾಜ್ಯಗಳ ಪೈಕಿ 24 ರಾಜ್ಯಗಳಲ್ಲಿ ಕಾರ್ಡ್ ವಿತರಿಸುವ ಜವಾಬ್ದಾರಿ ಯುಐಡಿಎಐಗೆ ಮತ್ತು 12 ರಾಜ್ಯಗಳಲ್ಲಿ ಆರ್ಜಿಐಗೆ (Registrar General of India) ನೀಡಲಾಗಿದೆ. ಹೊಸ ಆಧಾರ್ ಕಾರ್ಡ್ ನೊಂದಾಣಿ ವಿಚಾರದಲ್ಲಿ ಆರ್ಜಿಐ, ಯುಐಡಿಎಐಗಿಂತ ಹಿಂದಿದೆ.

ಪ್ರಾಧಿಕಾರ ಹೇಳುವುದೇನು?

ಪ್ರಾಧಿಕಾರ ಹೇಳುವುದೇನು?

ಆಧಾರ್ ಕಾರ್ಡಿನಲ್ಲಿ ಎಡವಟ್ಟು ಆಗಿರುವ ಸಾಧ್ಯತೆ ಇಲ್ಲವೇ ಇಲ್ಲ. ಬಯೋಮೆಟ್ರಿಕ್, ಫಿಂಗರ್ ಪ್ರಿಂಟ್ ಮುಂತಾದವುಗಳನ್ನು ತೆಗೆದುಕೊಂಡೇ ಆಧಾರ್ ಕಾರ್ಡ್ ವಿತರಿಸಲಾಗುತ್ತಿದೆ. ಮೇಲಾಗಿ ಇದು 2011ರ ಜನಗಣತಿ. ಸೆನ್ಸಸ್ ನಡೆಯುವ ಸಮಯದಲ್ಲಿ ವಿಳಾಸ ಸರಿಯಾಗಿರದೇ ಇರುವುದು, ಮನೆಯಲ್ಲಿನ ಸದಸ್ಯರ ಸಂಖ್ಯೆಯಲ್ಲಿ ವ್ಯತ್ಯಾಸ ಕಂಡಿರಬಹುದು ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.

ಸೆನ್ಸಸ್ ಅಧಿಕಾರಿಗಳು ಹೇಳುವುದೇನು?

ಸೆನ್ಸಸ್ ಅಧಿಕಾರಿಗಳು ಹೇಳುವುದೇನು?

ಮನೆ ವಿಳಾಸದಲ್ಲಿ ತಪ್ಪಾಗಿರುವ ಯಾವುದೇ ಸಾಧ್ಯತೆಗಳಿಲ್ಲ. ಪ್ರತೀ ಮನೆಮನೆಗೆ ತೆರಳಿ ಜನಗಣತಿ ಮಾಡಲಾಗಿದೆ ಎಂದು ಸೆನ್ಸಸ್ ಅಧಿಕಾರಿಗಳೂ ಸೆನ್ಸಸ್ ಅನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

English summary
Aadhaar card issued numbers in 13 of the country's 36 states and Union territories have exceeded their respective population as per 2011 census figures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X