ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE

ಉದ್ಯಮಗಳಿಗೆ ಉತ್ತೇಜನ ನೀಡುವ ಬಜೆಟ್ ಮಂಡಿಸಲಿದ್ದಾರಾ ಅಥವಾ ಶ್ರೀಸಾಮಾನ್ಯ ಶಭಾಶ್ ಎನ್ನುವಂತೆ ಬಜೆಟ್ ಮಂಡಿಸಲಿದ್ದಾರಾ ಜೇಟ್ಲಿ. ಶ್ರೀಮಂತರ ಜೇಬಿಗೆ ಕತ್ತರಿ ಹಾಕಲಿದೆಯಾ? ತೆರಿಗೆದಾರನ ತೆರಿಗೆ ಉಳಿಸಲಿದೆಯಾ?

By Prasad
|
Google Oneindia Kannada News

ನವದೆಹಲಿ, ಫೆಬ್ರವರಿ 01 : ವಿತ್ತ ಸಚಿವ ಏನು ಬಜೆಟ್ ಮಂಡಿಸುತ್ತಾರೋ ಎಂದು ಪಟ್ಟಣದಲ್ಲಿರುವ ಮಂದಿ ಟವಿ ಮುಂದೆ, ಕೈಯಲ್ಲಿ ಮೊಬೈಲ್ ಹಿಡಿದುಕೊಂಡು, ಹಳ್ಳಿಯಲ್ಲಿರುವ ಜನರು ಕಿವಿಗೆ ರೇಡಿಯೋ ಕಿವಿಗಿಟ್ಟುಕೊಂಡು ಕುಳಿತಿದ್ದರು. ಆದರೆ, ಜೇಟ್ಲಿ ಸಾಹೇಬರು ಮಂಡಿಸಿರುವ ಬಜೆಟ್ ಅತ್ತ ಆಶಾದಾಯಕವೂ ಅಲ್ಲ, ಇತ್ತ ನಿರಾಶಾದಾಯಕವೂ ಅಲ್ಲದಂತಾಗಿದೆ.

ರೈತರಿಗೆ, ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ, ವಿಕಲಾಂಗರಿಗೆ ಕೆಲವೊಂದು ಘೋಷಣೆಗಳನ್ನು ಘೋಷಿಸಿರುವುದನ್ನು ಬಿಟ್ಟರೆ ಅಂತಹ ದೊಡ್ಡ ಪ್ರಮಾಣದ ಘೋಷಣೆಯನ್ನೇನೂ ಮಾಡಿಲ್ಲ ಅರುಣ್ ಜೇಟ್ಲಿ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಏನಾದರೂ ಬದಲಾವಣೆ ಕಾಣಬಹುದಾ ಎಂದು ಕಾದವರಿಗೆ ನಿರಾಶೆ ಮಾಡಿದ್ದಾರೆ ಜೇಟ್ಲಿ.

ಉತ್ತರಪ್ರದೇಶ ಮತ್ತು ಇತರ ನಾಲ್ಕು ರಾಜ್ಯಗಳ ಚುನಾವಣೆ ಸದ್ಯದಲ್ಲೇ ಇರುವುದರಿಂದ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಹೋಗಿಲ್ಲ. ರೈಲು ಬಜೆಟ್ ನಲ್ಲಿಯೂ ಬಡಜನತೆಯ ಮೇಲೆ ಯಾವುದೇ ಹೇರಿಕೆ ಹೇರಲು ಹೋಗಿಲ್ಲ. ಕರ್ನಾಟಕಕ್ಕಂತೂ ಎಂದಿನ ವರ್ಷದಂತೆ ಈಬಾರಿಯೂ ನಿರಾಶೆಯ ಬುತ್ತಿಯನ್ನು ಕಟ್ಟಿ ಕೊಟ್ಟಿದ್ದಾರೆ.

5 ಲಕ್ಷದವರೆಗೆ ಆದಾಯ ಇರುವವರಿಗೆ ತೆರಿಗೆಯನ್ನು ಶೇ.10ರಿಂದ 5ರವರೆಗೆ ಇಳಿಸಿರುವುದು ಬಡ ಮಧ್ಯಮವರ್ಗದವರಿಗೆ ಸ್ವಲ್ಪ ರಿಲೀಫ್ ತಂದಿದೆಯಷ್ಟೆ. ರಾಹುಲ್ ಗಾಂಧಿ ಹೇಳಿದಂತೆ, ಬಜೆಟ್ಟಿನಲ್ಲಿ ಧಾಂಧೂಂ ಬಾಂಬು, ರಾಕೆಟ್ಟು ಯಾವುದನ್ನು ಬಿಟ್ಟಿಲ್ಲ. ಒಟ್ಟಿನಲ್ಲಿ ಅರುಣ್ ಜೇಟ್ಲಿಯವರು ಸೇಫ್ ಗೇಮ್ ಆಡಿದ್ದಾರೆ. ಬಜೆಟ್ಟಿನಲ್ಲಿ ಏನೇನು ಮುಖ್ಯಾಂಶಗಳಿವೆ ಮುಂದಿವೆ ಓದಿರಿ.[ಒಂದಷ್ಟು ಹೊಸ ಘೋಷಣೆ, ಹಳೆ ಯೋಜನೆಗಳ ಮುಂದುವರಿಕೆ; ಓಡದ ಜೇಟ್ಲಿ ರೈಲು]

* ಇನ್ಮುಂದೆ ರೈಲ್ವೆ ಇ ಟಿಕೆಟ್ ಗೆ ಸರ್ವೀಸ್ ಚಾರ್ಜ್ ಇರಲ್ಲ

* ಡಿಜಿಗ್ರಾಮ ಯೋಜನೆ ಮೂಲಕ ಗ್ರಾಮಗಳಿಗೆ ಟೆಲಿ ಮೆಡಿಸಿನ್ ಒಎಫ್ ಸಿ ಅಳವಡಿಕೆ 150000 ಗ್ರಾಮಗಳಿಗೆ ವಿಸ್ತರಣೆ

* 3,96,136 ಕೋಟಿ ರು ಮೂಲ ಸೌಕರ್ಯ ಕ್ಷೇತ್ರಕ್ಕೆ ಮೀಸಲು

* ರೈಲ್ವೆ ರಕ್ಷಾ ನಿಧಿ 1 ಲಕ್ಷ ಕೋಟಿ ರು ಮೊತ್ತ,[ಶೀಘ್ರ ವಿಜಯ್ ಮಲ್ಯ ಆಸ್ತಿ ಜಪ್ತಿ? ಬಜೆಟ್ ನಲ್ಲಿ ಜೇಟ್ಲಿ ಸುಳಿವು]

* 25 ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ 500 ರೈಲು ನಿಲ್ದಾಣಗಳಿಗೆ ವಿಕಲ ಚೇತನಗಳಿಗೆ ಅನುಕೂಲ

* 7000 ನಿಲ್ದಾಣಗಳಲ್ಲಿ ಸೌರಶಕ್ತಿ ಸಂಪೂರ್ಣ ಬಳಕೆ ಬಯೋ ಶೌಚಾಲಯಗಳುಳ್ಳ ರೈಲುಗಳ ಸಂಖ್ಯೆ ಹೆಚ್ಚಳ

* ಜಾರ್ಖಂಡ್ ಹಾಗೂ ಗುಜರಾತಿನಲ್ಲಿ ಹೊಸ ಏಮ್ಸ್ ಸ್ಥಾಪನೆ[ಬಜೆಟ್ 2017: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕಾಚಾರ]

* ಗರ್ಭಿಣಿಯರ ಖಾತೆಗಳಿಗೆ 6000 ರು ನೇರವಾಗಿ ಪಾವತಿ

* ಎಂನರೇಗಾ ಯೋಜನೆ ಅನುದಾನ 48000 ಕೋಟಿ ರುಗೆ ಹೆಚ್ಚಳ

* ನಿರ್ಗತಿಕರಿಗೆ 1 ಕೋಟಿ ಮನೆ ನಿರ್ಮಾಣ ಗುರಿ : ಜೇಟ್ಲಿ, ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು

* ಉತ್ಪಾದನಾ ಕ್ಷೇತ್ರದಲ್ಲಿ 9ನೇ ಸ್ಥಾನದಿಂದ 6ನೇ ಸ್ಥಾನಕೇರಿದ ಭಾರತ ಆರ್ಥಿಕ ವರ್ಷ ಆರಂಭಕ್ಕೂ ಮುನ್ನವೇ ಬಜೆಟ್ ಮಂಡನೆ[ಬಜೆಟ್ 2017ರ ಪ್ರಮುಖ ಘೋಷಣೆಗಳು]

* 1924ರ ನಂತರ ರೈಲ್ವೆ ಬಜೆಟ್ ಹಾಗೂ ಸಾಮಾನ್ಯ ಬಜೆಟ್ ವಿಲೀನ ಬದಲಾವಣೆ, ಕ್ಲೀನ್ ಇಂಡಿಯಾ, ಟೆಕ್ ಇಂಡಿಯಾ ನಮ್ಮ ಮುಂದಿನ ಗುರಿ

* ಯುವ ಸಮುದಾಯ ಹಾಗೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ಅಪನಗದೀಕರಣ ಯೋಜನೆಗೆ ಎಲ್ಲೆಡೆಯಿಂದ ಪ್ರಶಂಸೆ ಡಿಜಿಟಲ್ ಇಂಡಿಯಾದಿಂದ ಭ್ರಷ್ಟಾಚಾರ ನಿಯಂತ್ರಣ ಜಿಡಿಪಿ ಪ್ರಗತಿ ಸಾಧ್ಯ

* ಸಾರ್ವಜನಿಕ ಹಣದ ನಂಬಿಗಸ್ತ ರಕ್ಷಕ ಎಂದು (ಬಿಜೆಪಿ) ಸರಕಾರವನ್ನು ನೋಡಲಾಗುತ್ತಿದೆ. ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಜನರಿಗೆ ಅನಂತಾನಂತ ಧನ್ಯವಾದಗಳು : ಅರುಣ್ ಜೇಟ್ಲಿ[ಟ್ವಿಟ್ಟರ್: 2018ರೊಳಗೆ ಎಲ್ಲಾ ಗ್ರಾಮಕ್ಕೂ ವಿದ್ಯುತ್ ಪೂರೈಕೆ?]

* 2017-18ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿರುವ ಜೇಟ್ಲಿ, ಅರುಣ್ ಜೇಟ್ಲಿ ರಿಂದ ನಾಲ್ಕನೇ ಬಾರಿಗೆ ಬಜೆಟ್ ಮಂಡನೆ ಮೊದಲ ಬಾರಿಗೆ ಸಾಮಾನ್ಯ ಬಜೆಟ್ ಜತೆ ರೈಲ್ವೆ ಬಜೆಟ್ ವಿಲೀನ

* ಸಂಸತ್ತಿನಲ್ಲಿ ಬಜೆಟ್ 2017 ಅಧಿವೇಶನ ಆರಂಭ ಅಗಲಿದ ಸಂಸದ ಇ ಅಹ್ಮದ್ ಅವರಿಗೆ ಸಂತಾಪ

* ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯ ಬಜೆಟ್ ಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ.

* ಬಜೆಟ್ ಮಂಡನೆಗೂ ಮುನ್ನ ಮಾರುತಿ ಸುಜುಕಿ ಷೇರುಗಳು ಏರಿಕೆ.

* ಬಜೆಟ್ ಮಂಡನೆ ನಿಗದಿತ ಸಮಯಕ್ಕೆ ನಡೆಯಲಿದೆ: ಲೋಕಸಭಾ ಸ್ಪೀಕರ್ ಅರುಣ್ ಜೇಟ್ಲಿ ಅವರಿಂದ 11 ಗಂಟೆಗೆ ಬಜೆಟ್ ಮಂಡನೆ: ಸುಮಿತ್ರಾ ಮಹಾಜನ್.

* ಬಜೆಟ್ ಮಂಡನೆಗೂ ಮುನ್ನ ಕೇಂದ್ರ ಸಚಿವ ಸಂಪುಟ ಸಭೆ ಆರಂಭ ನಿಗದಿತ ಸಮಯಕ್ಕೆ ಬಜೆಟ್ ಮಂಡನೆ ಎಂದು ಅರುಣ್ ಜೇಟ್ಲಿ ಟ್ವೀಟ್

* ಬಜೆಟ್ ಸೂಟ್ ಕೇಸ್ ಜತೆ ಸಂಸತ್ ಭವನ ತಲುಪಿದ ಅರುಣ್ ಜೇಟ್ಲಿ, ಬಜೆಟ್ ಮಂಡನೆ ಒಂದು ದಿನದ ಮಟ್ಟಿಗೆ ಮುಂದೂಡಲಿ : ಖರ್ಗೆ, ಬಜೆಟ್ ಮುಂದೂಡುವಂತೆ ಕೇರಳ ಸಂಸದರಿಂದಲೂ ಒತ್ತಾಯ.

* ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಅಗಲಿದ ಸಂಸದ ಇ ಅಹ್ಮದ್ ಅವರ ನಿವಾಸಕ್ಕೆ 10 ಗಂಟೆಗೆ ಭೇಟಿ ನೀಡಲಿದ್ದಾರೆ.

Live Updates: Union Budget 2017

* ಬಜೆಟ್ ಮಂಡನೆ ಮುಂದೂಡಿಕೆ ಇಲ್ಲ. ನಿಗದಿಯಂತೆ ಮಂಡನೆಯಾಗಲಿದೆ. ಇ ಅಹ್ಮದ್ ಅವರಿಗೆ ಶ್ರದ್ಧಾಂಜಲಿಯನ್ನು ಬಜೆಟ್ ಗೆ ಮೊದಲು ಅಥವಾ ನಂತರ ಸಲ್ಲಿಸಲಾಗುವುದು.

* ಬಜಟ್ ಗೆ ಸಂಬಂಧಿಸಿದಂತೆ ವಿತ್ತ ಸಚಿವರಿಗೆ ಏನಾದರೂ ಪ್ರಶ್ನೆ ಕೇಳುವುದಿಲ್ಲರೆ #MyQuestionToFM ಹ್ಯಾಶ್ ಟ್ಯಾಗ್ ಹಾಕಿ ಪ್ರಶ್ನೆಗಳನ್ನು ಕೇಳಬಹುದು.

* ಸಂಸದ ಇ ಅಹ್ಮದ್ ಅಸುನೀಗಿರುವ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ಒಂದು ದಿನ ಮುಂದೂಡಬಹುದು ಅಥವಾ ತಡವಾಗಿ ಆರಂಭವಾಗಬಹುದು. ಅಂತಿಮ ನಿರ್ಧಾರ ಲೋಕಸಭಾಧ್ಯಕ್ಷರದ್ದು.

English summary
Finance Minister Arun Jaitely will present Union Budget 2017-18 in Lok Sabha. Get live updates on Budget 2017 in Kannada language, along with key highlights and announcements.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X