ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣ ಪರಿಣಾಮ ಜಿಡಿಪಿ ಪಾರದರ್ಶಕ, ದೈತ್ಯ: ಜೇಟ್ಲಿ

|
Google Oneindia Kannada News

ನವದಹೆಲಿ, ಫೆಬ್ರವರಿ 1: ಅಪನಗದೀಕರಣದಿಂದ ಮುಂದಿನ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟಾರೆ ದೇಶೀಯ ಉತ್ಪನ್ನವು ಪಾರದರ್ಶಕವಾಗಿಯೂ, ದೈತ್ಯವಾಗಿಯೂ ಬೆಳೆಯಲು ಸಹಾಯವಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.[ಇಡೀ ದೇಶವೇ ಎದುರು ನೋಡುತ್ತಿರುವ ಕೇಂದ್ರ ಬಜೆಟ್ ನಿಮ್ಮ ಮುಂದೆ LIVE]

ಸಂಸತ್ತಿನಲ್ಲಿ ಬುಧವಾರ 2017-18ರ ಸಾಮಾನ್ಯ ಬಜೆಟ್ ಮಂಡನೆ ವೇಳೆ ಅವರು ಅವರು ಈ ವಿಚಾರ ತಿಳಿಸಿದರಲ್ಲದೆ ಕೇಂದ್ರದ ಅಪನಗದೀಕರಣದ ನಿರ್ಧಾರವನ್ನು ಈ ಮೂಲಕ ಸಮರ್ಥಿಸಿಕೊಂಡರು. ಅಪನಗದೀಕರಣದ ಬಗ್ಗೆ ಜೇಟ್ಲಿ ಹೇಳಿದ ಮುಖ್ಯಾಂಶಗಳು ಇಲ್ಲಿವೆ.[ಕರ್ನಾಟಕಕ್ಕೆ ನಿರಾಸೆ ಬುತ್ತಿ ಕಟ್ಟಿ ಕೊಟ್ಟ ಅರುಣ್ ಜೇಟ್ಲಿ]

Arun Jaitley assured bigger GDP through Demonetisation

- ನೋಟು ಅಮಾನ್ಯಕರಣದಿಂದಾಗಿ ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆಗೆ ಹಣ ಪೂರೈಕೆಯಂಥ ಕುಕೃತ್ಯಗಳಿಗನ್ನು ಮಟ್ಟ ಹಾಕಲು ಸಾಧ್ಯ.[ರಾಜಕೀಯ ಪಕ್ಷಗಳ ದೇಣಿಗೆ 2 ಸಾವಿರ ರು.ಗಳಿಗೆ ಇಳಿಕೆ]

- ಅಪನಗದೀಕರಣದಿಂದಾಗಿ, ದೇಶದ ಜಿಡಿಪಿಯು ಸ್ವಚ್ಛ, ಪಾರದರ್ಶಕ ಹಾಗೂ ದೈತ್ಯಾಕಾರಕ್ಕೆ ಬೆಳೆಯಲು ಸಾಧ್ಯ.[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]

- ಅಪನಗದೀಕರಣ ಈ ವರ್ಷ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರಬಹುದು. ಆದರೆ, ಮುಂದಿನ ಆರ್ಥಿಕ ವರ್ಷದಿಂದ ಇದರ ನೆರಳೂ ಇರುವುದಿಲ್ಲ.[ಒಂದಷ್ಟು ಹೊಸ ಘೋಷಣೆ, ಹಳೆ ಯೋಜನೆಗಳ ಮುಂದುವರಿಕೆ; ಓಡದ ಜೇಟ್ಲಿ ರೈಲು]

- ಅಪನಗದೀಕರಣದಿಂದಾಗಿರುವ ಗಾಢ ಪರಿಣಾಮಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಕಾರ್ಯೋನ್ಮುಖವಾಗಿದೆ.[ಬಜೆಟ್ 2017: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕಾಚಾರ]

- ಕಳೆದೊಂದು ವರ್ಷದಿಂದ ವಿಶ್ವದಲ್ಲೇ ಅತಿ ವೇಗವಾಗಿ ಸಾಗುತ್ತಿರುವ ಆರ್ಥಿಕತೆ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಇಂಥ ಹೆಗ್ಗಳಿಕೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ನೋಟು ನಿಷೇಧ ನಿರ್ಧಾರ ಮಹತ್ವದ ಪಾತ್ರ ವಹಿಸಲಿದೆ.[ಬಜೆಟ್ 2017: ಹಣಕಾಸು ಸಚಿವ ಅರುಣ್ ಜೇಟ್ಲಿ ಘೋಷಿಸಿದ ಮುಖ್ಯಾಂಶಗಳು]

English summary
While presenting the union budget for the financial year 2017-18, finance minister Arun Jaitley justified the demonetisation and assured the transperant, Bigger growth of GDP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X