ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಹಗರಣ ಬಯಲಿಗೆಳೆದ ಅರ್ನಬ್: ಈ ಬಾರಿ ಸೋನಿಯಾ ಅಳಿಯ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ, ರಾಬರ್ಟ್ ವಾಧ್ರಾ ಅವರ ಬಹುಕೋಟಿ ಲ್ಯಾಂಡ್ ಡೀಲ್ ಬಹಿರಂಗಗೊಳಿಸಿದ ರಿಪಬ್ಲಿಕ್ ಟಿವಿ.

|
Google Oneindia Kannada News

ಕಾರ್ಯಾರಂಭಗೊಂಡ ನಂತರ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಿರುವ ರಿಪಬ್ಲಿಕ್ ವಾಹಿನಿ, ಗುರುವಾರ (ಜೂ 1) ಮತ್ತೊಂದು ಹಗರಣವನ್ನು ಬಯಲುಗೆಳೆದಿದೆ.

ಲಾಲೂ ಪ್ರಸಾದ್ ಯಾದವ್, ಶಶಿ ತರೂರ್ ನಂತರ ಅರ್ನಬ್ ಗೋಸ್ವಾಮಿ ಬಯಲುಗೆಳೆದದ್ದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ, ರಾಬರ್ಟ್ ವಾಧ್ರಾ ಅವರ ಬಹುಕೋಟಿ ಲ್ಯಾಂಡ್ ಡೀಲ್.[ಮಾನಹಾನಿ: ಅರ್ನಬ್, ರಿಪಬ್ಲಿಕ್ ಟಿವಿಗೆ ದೆಹಲಿ ಹೈಕೋರ್ಟ್ ನೋಟಿಸ್]

ಇದಕ್ಕೆ ಅಂದಿನ ಹರ್ಯಾಣದ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ (ಕಾಂಗ್ರೆಸ್) ನೇರವಾಗಿ ಶಾಮೀಲಾಗಿದ್ದಾರೆಂದು ಹೇಳಿರುವ ಅರ್ನಬ್, ಇದಕ್ಕೆ ಸಂಬಂಧಪಟ್ಟ ದಾಖಲೆಯನ್ನು ತಮ್ಮ ಶೋನಲ್ಲಿ ಬಿಡುಗಡೆ ಮಾಡಿದ್ದಾರೆ.

ಆದರೆ, ಅರ್ನಬ್ ಇದುವರೆಗೆ ಬಯಲುಗೆಳೆದ ಎಲ್ಲಾ ಹಗರಣಗಳು ಕೇಂದ್ರದಲ್ಲಿ ವಿರೋಧ ಪಕ್ಷಗಳ ಮುಖಂಡರಿಗೆ ಸಂಬಂಧಪಟ್ಟದ್ದಾಗಿದ್ದು, ಬಿಜೆಪಿ ಮುಖಂಡರ ಯಾವ ಭ್ರಷ್ಟಾಚಾರವೂ ಅರ್ನಬ್ ಗೋಸ್ವಾಮಿಗೆ ಕಾಣಿಸದೆ 'ಜಾಣ ಕುರುಡುತನ' ಪ್ರದರ್ಶಿಸುತ್ತಿದ್ದಾರಾ ಎನ್ನುವ ಪ್ರಶ್ನೆ ಉದ್ಭವಿಸುತ್ತಿದೆ.[ನನ್ನ ಹಣಕಾಸು ವ್ಯವಹಾರಗಳಿಗೂ ವಾದ್ರಾಗೂ ಸಂಬಂಧವಿಲ್ಲ: ಪ್ರಿಯಾಂಕಾ]

124 ಪುಟಗಳ ಧಿಂಗ್ರಾ ವರದಿ ಬಯಲುಗೆಳೆದಿರುವ ರಿಪಬ್ಲಿಕ್ ವಾಹಿನಿ, ಸೋನಿಯಾ ಗಾಂಧಿ ಹೆಸರನ್ನು ನೇರವಾಗಿ ಬಳಸಿಕೊಂಡು ಜೊತೆಗೆ ತಮ್ಮದೇ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವುದನ್ನು ದುರುಪಯೋಗ ಪಡಿಸಿಕೊಂಡು, ವಾಧ್ರಾ ಭೂ ಅವ್ಯವಹಾರ ನಡೆಸಿದ್ದಾರೆಂದು ರಿಪಬ್ಲಿಕ್ ವಾಹಿನಿ ಹೇಳಿದೆ.

ಜಸ್ಟೀಸ್ ಎಸ್ ಎನ್ ಧಿಂಗ್ರಾ ಅವರು ನೀಡಿರುವ ವರದಿಯಲ್ಲಿ, ಸೋನಿಯಾ ಅಳಿಯ ರಾಬರ್ಟ್ ವಾಧ್ರಾ, 2008ರಲ್ಲಿ ನಯಾಪೈಸೆ ಖರ್ಚು ಮಾಡದೇ 50.5 ಕೋಟಿ ಲಾಭ ಮಾಡಿಕೊಂಡಿದ್ದಾರೆಂದು ಎನ್ನುವ ಅಂಶವನ್ನು ರಿಪಬ್ಲಿಕ್ ವಾಹಿನಿ ಬಯಲುಗೆಳೆದಿದೆ. ಮುಂದೆ ಓದಿ..[ಭೂಕಬಳಿಕೆ : ರಾಬರ್ಟ್ ವದ್ರಾ ಆಪ್ತನ ಮೇಲೆ ಇಡಿ ದಾಳಿ]

ಧಿಂಗ್ರಾ ಸಮಿತಿ ನೀಡಿರುವ ವರದಿ

ಧಿಂಗ್ರಾ ಸಮಿತಿ ನೀಡಿರುವ ವರದಿ

ಆಗಸ್ಟ್ 31, 2016ರಲ್ಲಿ ಈಗಿನ ಮುಖ್ಯಮಂತ್ರಿ ಬಿಜೆಪಿಯ ಮನೋಹರ್ ಲಾಲ್ ಕಟ್ಟರ್ ಅವರಿಗೆ ಧಿಂಗ್ರಾ ಸಮಿತಿ ನೀಡಿರುವ ವರದಿಯಲ್ಲಿ ಹೇಳಿರುವಂತೆ, ವಾಧ್ರಾ ಒಡೆತನದ ಸ್ಕೈಲೈಟ್ ಹಾಸ್ಪಿಟಾಲಿಟೀಸ್ ಮತ್ತು ಡಿಎಲ್ಎಫ್ ಸಂಸ್ಥೆಯ ನಡುವೆ ಯಾವ ರೀತಿ ಅವ್ಯವಹಾರ ನಡೆದಿತ್ತು ಎನ್ನುವುದನ್ನು ರಿಪಬ್ಲಿಕ್ ವಾಹಿನಿ ಬಿಚ್ಚಿಟ್ಟಿದೆ.

ಕಾಲೋನಿ ಬದಲು ಕಮರ್ಷಿಯಲ್ ಕಾಂಪ್ಲೆಕ್ಸ್

ಕಾಲೋನಿ ಬದಲು ಕಮರ್ಷಿಯಲ್ ಕಾಂಪ್ಲೆಕ್ಸ್

ಹರ್ಯಾಣದ ಶ್ರೀಮಂತ ಮತ್ತು ದುಬಾರಿ ಗುರುಗಾಂ (ಈಗಿನ ಗುರುಗ್ರಾಮ) ನಗರದ ಶಿಖೋಪುರ, ಸಿಕಂದರಪುರ, ಬಾದಾ, ಕೇರ್ಕಿ ದೌಲಾ ಮುಂತಾದ ಪ್ರದೇಶ ಅಭಿವೃದ್ದಿಗೊಳಿಸಿ ಕಾಲೋನಿ ನಿರ್ಮಿಸುವ ಬದಲು ವಾಣಿಜ್ಯ ಕಟ್ಟಡ ನಿರ್ಮಾಣಗೊಂಡಿರುವ ಬಗ್ಗೆ ಧಿಂಗ್ರಾ ಸಮಿತಿಯ ವರದಿಯಲ್ಲಿ ಉಲ್ಲೇಖವಾಗಿತ್ತು.

ಸಾಮಾಜಿಕ ತಾಣದಲ್ಲಿ #VadraReportOut ಟ್ರೆಂಡಿಂಗ್

ವಾಧ್ರಾ ಆಸ್ತಿ ಐವತ್ತು ಲಕ್ಷದಿಂದ ಮುನ್ನೂರು ಕೋಟಿ ಎನ್ನುವ ವ್ಯಂಗ್ಯ ಟ್ವೀಟ್

ತೆರಿಗೆ ಪಾವತಿಸುವವರ ದುಡ್ಡು

ಇಟೆಲಿಯ ಅತ್ತೆ ತನ್ನ ಅಳಿಯನಿಗೆ ಭಾರತದ ತೆರಿಗೆ ಪಾವತಿಸುವವರ ದುಡ್ಡನ್ನು ಈ ಮೂಲಕ ನೀಡುತ್ತಿದ್ದಾರೆ.

ವಾಧ್ರಾ ಹಗರಣ ಬಯಲುಗೆಳೆದ ರಿಪಬ್ಲಿಕ್

ರಾಬರ್ಟ್ ವಾಧ್ರಾ ಅವರ ಎಲ್ಲಾ ಹಗರಣವನ್ನು ರಿಪಬ್ಲಿಕ್ ವಾಹಿನಿ ಬಯಲುಗೆಳೆಯುತ್ತಿದೆ.

English summary
Arnab Goswami's Republic exposes Robert vadra, son-in-law of AICC President Sonia Gandhi multi crore land deal in Haryana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X