ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರೇ ನಿಮಿಷದಲ್ಲಿ ರೈಲ್ವೆ ಯೋಜನೆಗೆ ಸಚಿವ ಸುರೇಶ್ ಪ್ರಭು ಅಸ್ತು

ಯಾವುದೇ ಯೋಜನೆಗೆ ಒಪ್ಪಿಗೆ ಸೂಚಿಸುವುದಕ್ಕೆ ತಿಂಗಳುಗಳ ಸಮಯ, ಆ ನಂತರ ಅನುಷ್ಠಾನಕ್ಕೆ ವರ್ಷಗಟ್ಟಲೆ ಕಾಲ ಎಂದು ಸರಕಾರದ ಯೋಜನೆ ಬಗ್ಗೆ ನೀವಂದುಕೊಂಡಿದ್ದರೆ ಈ ವರದಿ ಓದಿ. ಮೂರು ನಿಮಿಷದಲ್ಲೇ ಆಗುವ ಜಾದೂ ಬಗ್ಗೆ ತಿಳಿಯಿರಿ

|
Google Oneindia Kannada News

ಭುವನೇಶ್ವರ್, ಏಪ್ರಿಲ್ 30: ಈ ಘಟನೆ ಭಾರತದಲ್ಲೇ ನಡೆದಿದ್ದು, ಅದರಲ್ಲಿ ಸರಕಾರದ ಸಚಿವರ ಕಾಳಜಿ ಇದೆ ಅನ್ನೋದನ್ನು ಯಾರೂ ನಂಬಲು ಸಾಧ್ಯವಾಗದ ಘಟನೆಯೊಂದು ನಡೆದುಹೋಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪ್ರಸ್ತಾವಿಸಿದ ಹೊಸ ರೈಲ್ವೆ ಮಾರ್ಗಕ್ಕೆ ರೈಲ್ವೆ ಸಚಿವ ಸುರೇಶ್ ಪ್ರಭು ಮೂರೇ ನಿಮಿಷದಲ್ಲಿ ಒಪ್ಪಿಗೆ ಸೂಚಿಸಿದ್ದಾರೆ.

ನವೀನ್ ಪಟ್ನಾಯಕ್ ಅವರು ಶುಕ್ರವಾರ ರಾತ್ರಿ 10.05ಕ್ಕೆ ಪುರಿ ಹಾಗೂ ಕೋನಾರ್ಕ್ ಮಧ್ಯೆ ಹೊಸ ರೈಲು ಮಾರ್ಗಕ್ಕೆ ಟ್ವಿಟ್ಟರ್ ಮೂಲಕ ಪ್ರಸ್ತಾವನೆ ಸಲ್ಲಿಸಿದ್ದಾರೆ. 10.08ಕ್ಕೆ ರೈಲ್ವ ಸಚಿವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಯೋಜನೆಗೆ ತಗುಲುವ ವೆಚ್ಚದ ಶೇ 50ರಷ್ಟನ್ನು ರಾಜ್ಯ ಸರಕಾರವೇ ಭರಿಸುತ್ತದೆ ಎಂದು ತಿಳಿಸಿದ್ದಾರೆ.[ರೈಲ್ವೆ ಸಚಿವ ಸುರೇಶ್ ಪ್ರಭು ಬಿಚ್ಚಿಟ್ಟ 20 ನಿಮಿಷದ ಸ್ಪಂದನೆ ಎಂಬ ದಿವ್ಯಮಂತ್ರ]

CM@Naveen_Odisha ಪುರಿ ಹಾಗೂ ಕೋನಾರ್ಕ್ ಹೊಸ ರೈಲು ಮಾರ್ಗಕ್ಕೆ ಶೇ 50ರಷ್ಟು ಯೋಜನಾ ವೆಚ್ಚ ಭರಿಸುವುದಾಗಿಯೂ, ಇದರಿಂದ ಪ್ರವಾಸೋದ್ಯಮಕ್ಕೆ ಅನುಕೂಲವಾಗುತ್ತದೆ #Odisha ಎಂದು ಮುಖ್ಯಮಂತ್ರಿ ಕಚೇರಿಯಿಂದ ಟ್ವೀಟ್ ಮಾಡಲಾಗಿದೆ.

ಅದಕ್ಕೆ ತಕ್ಷಣವೇ ಸುರೇಶ್ ಪ್ರಭು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. "ನಾವು ಅದಕ್ಕೆ ಯಾವಾಗಲಾದರೂ ಸಹಿ ಹಾಕಲು ಸಿದ್ಧರಿದ್ದೇವೆ. ಅದಕ್ಕಾಗಿ ಕಾಯುತ್ತಿದ್ದೇವೆ. ರಾಜ್ಯಗಳ ಜತೆಗೆ ಈ ರೀತಿ ಯೋಜನೆಯಲ್ಲಿ ಪಾಲ್ಗೊಳ್ಳುವುದು ನಮ್ಮ ಉದ್ದೇಶ" ಎಂದಿದ್ದಾರೆ.

English summary
A new railway line proposed by Odisha Chief Minister Naveen Patnaik got a nod from Railway minister Suresh Prabhu just three minutes after he presented it to the minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X