ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎವರೆಸ್ಟನ್ನೂ ಮೀರಿ ಬೆಳೆದ ಚಂದ್ರಬಾಬು ನಾಯ್ಡ ಪುತ್ರನ ಆಸ್ತಿ!

ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದೇ ತಡ ಅವರ ಮಗ ನಾರಾ ಲೋಕೇಶ್ ಆಸ್ತಿ ಕಳೆದ ಆರು ತಿಂಗಳಲ್ಲಿ 14.5 ಕೋಟಿಯಿಂದ ಬರೋಬ್ಬರಿ 330 ಕೋಟಿಗೆ ಏರಿಕೆಯಾಗಿದೆ.

By Sachhidananda Acharya
|
Google Oneindia Kannada News

ಹೈದರಾಬಾದ್, ಮಾರ್ಚ್ 9: ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದೇ ತಡ ಅವರ ಮಗ ನಾರಾ ಲೋಕೇಶ್ ಆಸ್ತಿಯಲ್ಲಿ ಯದ್ವಾ ತದ್ವಾ ಏರಿಕೆಯಾಗಿದೆ. ತೆಲುಗು ದೇಶಂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ನಾರಾ ಆಸ್ತಿ ಕಳೆದ ಆರು ತಿಂಗಳಲ್ಲಿ 14.5 ಕೋಟಿಯಿಂದ ಬರೋಬ್ಬರಿ 330 ಕೋಟಿಗೆ ಏರಿಕೆಯಾಗಿದೆ.

ಕಳೆದ ಅಕ್ಟೋಬರ್ 19ರಂದು 34 ವರ್ಷದ ನಾರಾ ಲೋಕೇಶ್ ತಮ್ಮ ಆಸ್ತಿ ಘೋಷಿಸಿಕೊಂಡಿದ್ದರು. ಪಾರದರ್ಶಕತೆಯ ಕಾರಣಕ್ಕೆ ಸಾರ್ವಜನಿಕವಾಗಿ ಆಸ್ತಿ ಘೋಷಣೆ ಮಾಡಿಕೊಳ್ಳಬೇಕು ಎಂಬ ತಮ್ಮ ತಂದೆ ಚಂದ್ರಬಾಬು ನಾಯ್ಡು ಅಭಿಯಾನದಂತೆ ಇವರೂ ಘೋಷಿಸಿಕೊಂಡಿದ್ದರು.[ಆಂಧ್ರ ಮುಖ್ಯಮಂತ್ರಿ ನಾಯ್ಡುಗೆ ನಕ್ಸಲರ ಜೀವ ಬೆದರಿಕೆ]

14.5 ಕೋಟಿ

ಸಾರ್ವಜನಿಕವಾಗಿ ನಾರಾ ಲೋಕೇಶ್, ಕುಟುಂಬದ ಒಡೆತನಕ್ಕೆ ಸೇರಿದ ಹೆರಿಟೇಜ್ ಫುಡ್ ನಲ್ಲಿ ಶೇರು ಮತ್ತು 95 ಲಕ್ಷ ರೂಪಾಯಿ ಮೌಲ್ಯದ ಕಾರು ಇರುವುದಾಗಿ ಘೋಷಿಸಿಕೊಂಡಿದ್ದರು. ಹೀಗೆ ಒಟ್ಟು 14.5 ಕೋಟಿ ಆಸ್ತಿ ತಮ್ಮ ಬಳಿ ಇರುವುದಾಗಿ ಹೇಳಿದ್ದರು.

330 ಕೋಟಿಗೆ ಏರಿಕೆ

330 ಕೋಟಿಗೆ ಏರಿಕೆ

ಸದ್ಯ ಸಚಿವರಾಗಲು ಹೊರಟಿರುವು ಲೋಕೇಶ್ ನಾರಾ ವಿಧಾನ ಪರಿಷತ್ ಚುನಾವಣೆಗೆ ನಿಂತಿದ್ದಾರೆ. ಸದ್ಯ ಅವರು ಚುನಾವಣಾ ಆಯೋಗದ ಮುಂದೆ ಘೋಷಿಸಿಕೊಂಡಿರುವ ಆಸ್ತಿ ಬರೋಬ್ಬರಿ 330 ಕೋಟಿ. ಇವರ ಕುಟುಂಬಕ್ಕೆ ಸೇರಿದ ಹೆರಿಟೇಜ್ ಫುಡ್ಸ್ ನ್ನು ಇತ್ತೀಚೆಗೆ ಕಿಶೋರ್ ಬಿಯಾನಿ ಕಂಪೆನಿ ಮಾರಾಟ ಮಾಡಲಾಗಿತ್ತು. ನಂತರ ತಮ್ಮ ಆಸ್ತಿಯಲ್ಲಿ ಹೆಚ್ಚಿನ ವ್ಯತ್ಯಾಸ ವಾಗಿರುವುದನ್ನು ಅವರು ಅಫಿದವಿತ್ತಿನಲ್ಲಿ ತೋರಿಸಿದ್ದಾರೆ.[ಸರಕಾರದ ಹಣದಲ್ಲಿ ತೆಲಂಗಾಣ ಶಾಸಕರಿಗೆ ಕೋಟಿ ವೆಚ್ಚದ ಗೃಹಕಚೇರಿ]

ಎಲ್ಲಿಂದ ಎಲ್ಲಿಗೆ ಏರಿಕೆ!

ಎಲ್ಲಿಂದ ಎಲ್ಲಿಗೆ ಏರಿಕೆ!

ಕೃಷಿ ಉತ್ಪನ್ನ, ಬೇಕರಿ ಮತ್ತು ಡೈರಿ ಉತ್ಪನ್ನಗಳನ್ನು ತಯಾರಿಸುವದರಲ್ಲಿ ನಿರತವಾಗಿರುವ ಹೆರಿಟೇಜ್ ಫುಡ್ಸ್ ನಲ್ಲಿ ನಾರಾ ಲೋಕೇಶ್ ಪಾಲು ಹೊಂದಿದ್ದಾರೆ. 2016 ಅಕ್ಟೋಬರಿನಲ್ಲಿ ಈ ಕಂಪೆನಿಯಲ್ಲಿ ತಾವು ಖರೀದಿಸಿದ್ದ ಷೇರಿನ ಮುಖ ಬೆಲೆಯನ್ನಷ್ಟೇ ಘೋಷಿಸಿದ್ದೆ. ಅದರ ಮಾರುಕಟ್ಟೆ ಮೌಲ್ಯ ಈಗ 274 ಕೋಟಿಗೆ ವೃದ್ಧಿಯಾಗಿದೆ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.[ಹರಕೆ ತೀರಿಸಿದ ಕೆಸಿಆರ್, ತಿಮ್ಮಪ್ಪನಿಗೆ 5.6 ಕೋಟಿ ಮೊತ್ತದ ಚಿನ್ನಾಭರಣ ಸಮರ್ಪಣೆ]

ನಾರಾ ಲೋಕೇಶ್ ಹಿನ್ನಲೆ

ನಾರಾ ಲೋಕೇಶ್ ಹಿನ್ನಲೆ

ಲೋಕೇಶ್ ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ಕಂಪೆನಿಯ ಶೇರುಗಳಲ್ಲದೆ ತಮಗೆ ಪಿತ್ರಾರ್ಜಿತವಾಗಿ ಬಂದ 38 ಕೋಟಿ ಆಸ್ತಿ ಇರುವುದಾಗಿಯೂ ಘೋಷಿಸಿಕೊಂಡಿದ್ದಾರೆ.

ನಾರಾ ಲೋಕೇಶ್ ಹೇಳುವುದೇನು?

ನಾರಾ ಲೋಕೇಶ್ ಹೇಳುವುದೇನು?

ತಮ್ಮ ಆಸ್ತಿ ವಿಚಾರ ಸಾರ್ವಜನಿಕ ಚರ್ಚೆಗೆ ಗುರಿಯಾಗುತ್ತಿದ್ದಂತೆ ನಾರಾ ಲೋಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ತಿರುಚಲಾಗಿದೆ ಎಂದು ಅವರು ಹೇಳಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಚರ್ಚೆಗೂ ಸಿದ್ದ ಎಂದು ಹೇಳಿದ್ದಾರೆ.[ತೆಲಂಗಾಣ ಸಿಎಂ ಬಚ್ಚಲುಮನೆಗೂ ಬುಲೆಟ್ ಪ್ರೂಫ್ ಗಾಜು!]

ನಾರಾ ಕಚೇರಿ ಹೇಳುವುದು ಹೀಗೆ..

ನಾರಾ ಕಚೇರಿ ಹೇಳುವುದು ಹೀಗೆ..

ಈ ಕುರಿತು ಅವರ ಕಚೇರಿ ಪ್ರತಿಕ್ರಿಯೆ ಹೀಗಿದೆ. "ಕಳೆದ ಒಂದು ದಶಕದಿಂದ ನಾರಾ ಲೋಕೇಶ್ ಯಾವುದೇ ಶೇರುಗಳನ್ನು ಖರೀದಿಸಿಲ್ಲ ಹಾಗೂ ಮಾರಾಟ ಮಾಡಿಲ್ಲ. ಹಾಗಾಗಿ ನಾವು ಅಕ್ಟೋಬರಿನಲ್ಲಿ ಶೇರು ಖರೀದಿ ಬೆಲೆಯನ್ನಷ್ಟೆ ನೀಡಿದ್ದೆವು.' ಎಂದು ಹೇಳಿದ್ದಾರೆ.

ಏನೇ ಆಗಲಿ ನಾರಾ ಲೊಕೇಶ್ ಆಸ್ತಿಯಲ್ಲಿ 23 ಪಟ್ಟು ಏರಿಕೆ ಆಗಿರುವುದು ಹಲವರನ್ನು ಅಚ್ಚರಿಗಂತೂ ಕೆಡವಿದೆ.

English summary
The value of assets of Nara Lokesh, Telugu Desam Party general secretary and son of Andhra Pradesh chief minister N Chandrababu Naidu, has gone up by a mind-boggling Rs. 14.5 crore to Rs. 330 crores a span of five months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X