ಅಂತರಿಕ್ಷ್-ದೇವಾಸ್ ಡೀಲ್: ಇಸ್ರೋ ಮಾಜಿ ಅಧ್ಯಕ್ಷ ನಾಯರ್ ವಿರುದ್ಧ ಚಾರ್ಜ್ ಶೀಟ್

Written by: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಆಗಸ್ಟ್ 11: ಅಂತರಿಕ್ಷ್-ದೇವಾಸ್ ಅವ್ಯವಹಾರ ಪ್ರಕರಣಕ್ಕೆ ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ವಿರುದ್ಧ ಸಿಬಿಐ ತಂಡ ಗುರುವಾರ ದೋಷಾರೋಪ ಪಟ್ಟಿ (ಚಾರ್ಜ್​ಶೀಟ್) ದಾಖಲಿಸಿದೆ.

ಸರ್ಕಾರಿ ಸ್ವಾಮ್ಯದ ಅಂತರಿಕ್ಷ್ ಹಾಗೂ ಮಲ್ಟಿ ಮೀಡಿಯಾ ಕಂಪನಿ ದೇವಾಸ್ ನಡುವಿನ ವ್ಯವಹಾರದಲ್ಲಿ 578 ಕೋಟಿ ರು ವಂಚನೆ ಆರೋಪ ಕೇಳಿ ಬಂದಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು.

Antrix-Devas Deal: CBI files chargesheet against former ISRO chief Madhavan Nair

ಆರ್ ಮಾಧವನ್ ನಾಯರ್ ಅವರು ಭಾರತೀಯ ಅಂತರಿಕ್ಷ ಸಂಶೋಧನಾ ಕೇಂದ್ರ(ಇಸ್ರೋ) ದ ಅಧ್ಯಕ್ಷರಾಗಿದ್ದ ಕಾಲದಲ್ಲಿ ನಡೆದಿದೆ ಎನ್ನಲಾದ ಈ ಪ್ರಕರಣದಲ್ಲಿ ಈ ಮುಂಚೆ ಮಾಧವನ್ ​ರನ್ನು ಸಿಬಿಐ ತಂಡ ವಿಚಾರಣೆಗೆ ಒಳಪಡಿಸಿತ್ತು.

ಅಂತರಿಕ್ಷ್ ನ ಕಾರ್ಯಕಾರಿ ನಿರ್ದೇಶಕ ಕೆಆರ್ ಶ್ರೀಧರಮೂರ್ತಿ ಹಾಗೂ ಹಿರಿಯ ಅಧಿಕಾರಿ ಬೆಂಗಳೂರು ಮೂಲದ ದೇವಾಸ್ ಮಲ್ಟಿಮೀಡಿಯಾದ ಸ್ಥಾಪಕ ಹಾಗೂ ಇಸ್ರೋದ ಮಾಜಿ ಅಧಿಅಕರಿ ಎಂಜಿ ಚಂದ್ರಶೇಖರ್ ಅವರ ಹೆಸರು ಕೂಡಾ ದೋಷಾರೋಪಣ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

English summary
The Central Bureau of Investigation on Thursday filed a chargesheet against former ISRO chief Madhavan Nair and others in connection with the Antrix-Devas deal.
Please Wait while comments are loading...