ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲೀಯರ ವಿರುದ್ಧ ಕಾರ್ಯಾಚರಣೆಗೆ ಮಹಿಳಾ ಪಡೆ!

By Mahesh
|
Google Oneindia Kannada News

ನವದೆಹಲಿ, ನ.16: ಮೊಟ್ಟ ಮೊದಲ ಬಾರಿಗೆ ನಕ್ಸಲೀಯರ ವಿರುದ್ಧದ ಕಾರ್ಯಾಚರಣೆಗೆ ಮಹಿಳೆಯರೇ ಇರುವ ವಿಶೇಷ ಪಡೆಯನ್ನು ದಟ್ಟ ಅರಣ್ಯ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ದೇಶ ಎದುರಿಸುತ್ತಿರುವ ನಕ್ಸಲೀಯರ ಮಿತಿಮೀರಿದ ಹಿಂಸಾತ್ಮಕ ಚಟುವಟಿಕೆಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಮಹಿಳಾ ಕಮಾಂಡೋಗಳು ನೇರ ಹೋರಾಟಕ್ಕಿಳಿದಿದ್ದಾರೆ.

ಅರಣ್ಯ ಪ್ರದೇಶಗಳಲ್ಲಿ ನಕ್ಸಲರ ವಿರುದ್ಧ ಹೋರಾಟಕ್ಕೆ ಮಹಿಳಾ ಕಮಾಂಡೋಗಳನ್ನು ಬಳಸಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಈಗ ಭಾರತವೂ ಸೇರಿದಂತಾಗಿದೆ. ಪುರುಷ ಸಿಬ್ಬಂದಿ ಜತೆ ಕೆಲವು ಮಹಿಳಾ ಕಮಾಂಡೋಗಳನ್ನು ನಕ್ಸಲೀಯರ ವಿರುದ್ಧದ ನೇರ ಕಾರ್ಯಾಚರಣೆಗಾಗಿ ಅರಣ್ಯ ಪ್ರದೇಶಕ್ಕೆ ಕಳುಹಿಸಲಾಗಿದ್ದು, ದಟ್ಟ ಅರಣ್ಯದಲ್ಲಿ ಈ ಮಹಿಳಾ ಸಿಆರ್ ಪಿಎಫ್ ಸಿಬ್ಬಂದಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೇಶದ ಅತಿ ದೊಡ್ಡ ಅರೆಸೈನಿಕ ಪಡೆ ಸಿಆರ್ ಪಿ ಎಫ್ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

First women commando team deployed in red corridor

ಈ ಮಹಿಳಾ ಸಿಬ್ಬಂದಿ ಕೇವಲ ಗಸ್ತು ತಿರುಗುವುದಕ್ಕಷ್ಟೇ ಸೀಮಿತವಾಗದೆ, ಕೆಂಪು ಉಗ್ರರ ವಿರುದ್ಧ ನೇರಾನೇರ ಗುಂಡಿನ ಚಕಮಕಿ ನಡೆಸಲೂ ಸಮರ್ಥರಾಗಿದ್ದಾರೆ. ದೇಶದಲ್ಲಿಯೇ ನಕ್ಸಲರ ಹಿಡಿತಕ್ಕೆ ಸಿಕ್ಕಿ ಜರ್ಝರಿತಗೊಂಡಿರುವ ಛತ್ತೀಸ್ ಗಢದ ಬಸ್ತಾರ್ ಜಿಲ್ಲೆಯ ಅರಣ್ಯಕ್ಕೆ ಬಂದು ಮಹಿಳಾ ತಂಡ ಹಾಗೂ ಜಾರ್ಖಂಡ್ ನ ರಹಸ್ಯ ತಾಣವೊಂದಕ್ಕೆ ಇನ್ನೊಂದು ತಂಡವನ್ನು ಕಳುಹಿಸಿಕೊಡಲಾಗಿದೆ.

ನಕ್ಸಲ್ ಪೀಡಿತ ಪ್ರದೇಶಗಳಿಗೆ ಈ ತಂಡಗಳನ್ನು ಕಳುಹಿಸಿ 15 ದಿನಗಳಾಗಿದ್ದು, ತಂಡದ ಕಮಾಂಡೋಗಳು ದಕ್ಷತೆಯಿಂದ ನಕ್ಸಲರ ಮುಖಾಮುಖಿಯಾಗಿ ಸೆಣಸಾಡುತ್ತಿದ್ದಾರೆ. ತಲಾ 35 ಮಹಿಳೆ ಯೋಧರುಳ್ಳ ಪ್ಲಾಟೂನ್ ಗಳನ್ನು ಕೂಂಬಿಂಗ್ ಗೆ ಬಿಡಲಾಗಿದೆ. ಪಶ್ಚಿಮಬಂಗಾಳದಲ್ಲಿ ಇದೇ ರೀತಿ ಪ್ರಯೋಗ ಮಾಡಿ ಯಶಸ್ಸು ಗಳಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
For the first time in the country's history, a special squad of women troops has been deployed deep inside jungles to undertake active and prolonged operations against Naxalites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X