ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ಹೊಸ ನಿರ್ದೇಶಕ ಅನಿಲ್ ಕುಮಾರ್ ಸಿನ್ಹಾ

By Mahesh
|
Google Oneindia Kannada News

ನವದೆಹಲಿ, ಡಿ.3: ಸಿಬಿಐನ ನೂತನ ನಿರ್ದೇಶಕರಾಗಿ ಅನಿಲ್ ಕುಮಾರ್ ಸಿನ್ಹಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿ ಮಂಗಳವಾರ ರಾತ್ರಿ ಆಯ್ಕೆ ಮಾಡಿದೆ. ಸಿಬಿಐ ನಿರ್ದೇಶಕರಾಗಿದ್ದ ರಂಜಿತ್ ಸಿನ್ಹಾ ಅವರ ಅಧಿಕಾರ ಅವಧಿ ಡಿ.2ಕ್ಕೆ ಕೊನೆಗೊಂಡಿತ್ತು. ಸಿಬಿಐನ ತನಿಖಾ ತಂಡವೊಂದರ ವಿಶೇಷ ನಿರ್ದೇಶಕರಾಗಿರುವ ಅನಿಲ್ ಕುಮಾರ್ ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಮಂಗಳವಾರ ರಾತ್ರಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಉಪಸ್ಥಿತರಿದ್ದರು. [ಸಿಬಿಐ ನಿರ್ದೇಶಕ ಸಿನ್ಹಾ ನಿವೃತ್ತಿ]

ಸಿನ್ಹಾ ಪರಿಚಯ: 1979ರ ಬಿಹಾರ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಸಿನ್ಹಾ ಅವರು ಕೇಂದ್ರ ತನಿಖಾ ದಳದಲ್ಲಿ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಮನಃಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಎಂಫಿಲ್ ಪಡೆದಿದ್ದಾರೆ.

Anil Kumar Sinha appointed new CBI Director

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೂವರು ಸದಸ್ಯರ ಸಮಿತಿ ಮುಂದೆ ಐಪಿಎಸ್ ಅಧಿಕಾರಿಗಳಾದ ಅನಿಲ್‌ಕುಮಾರ್ ಸಿನ್ಹಾ ಮತ್ತು ಶರತ್‌ಕುಮಾರ್ ಹಾಗೂ ಆಂತರಿಕ ಭದ್ರತಾ ಪಡೆ ವಿಶೇಷ ಕಾರ್ಯದರ್ಶಿ ಪ್ರಕಾಶ್ ಮಿಶ್ರಾ, ರೈಲ್ವೆ ರಕ್ಷಣಾ ಪಡೆ ಪ್ರಧಾನ ನಿರ್ದೇಶಕ ಕೃಷ್ಣ ಚೌಧರಿ ಅವರ ಹೆಸರುಗಳು ಚರ್ಚೆಗೊಳಲ್ಪಟ್ಟಿತ್ತು. [2ಜಿ ಹಗರಣ ತನಿಖೆ]

ಸುಮಾರು 40 ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಪರಿಶೀಲಿಸಲಾಗಿತ್ತು. ಅಂತಿಮವಾಗಿ ಅನಿಲ್ ಕುಮಾರ್ ಸಿನ್ಹಾ ಮತ್ತು ಹರ್ಯಾಣದ ಐಪಿಎಸ್ ಅಧಿಕಾರಿ ಶರತ್ ಕುಮಾರ್ ನಡುವೆ ಪೈಪೋಟಿ ಇತ್ತು. ಕೊನೆಗೆ ಅನಿಲ್ ಸಿನ್ಹಾ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.

ಅನಿಲ್ ಕುಮಾರ್ ಸಿನ್ಹಾ ಹಾಗೂ ಅವರ ತಂಡ ಈಗ ಬಹುಕೋಟಿ 2ಜಿ ತರಂಗಗುಚ್ಛ ಹಂಚಿಕೆ ಹಗರಣ, ಕಲ್ಲಿದ್ದಲು ಹಗರಣ, ಅಕ್ರಮ ಗಣಿಗಾರಿಕೆ ಪ್ರಕರಣಗಳ ತನಿಖೆ ಮುಂದುವರೆಸಲಿದೆ. ಕಪ್ಪು ಹಣ ವಾಪಸ್ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷಾ ತನಿಖಾ ದಳಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸಲಿದೆ.

English summary
Senior IPS officer Anil Kumar Sinha was on Dec 2 appointed the new CBI Director to succeed Ranjit Sinha who retired in a glare of controversy with the Supreme Court directing him to recuse from 2G spectrum scam case probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X