ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜರ್ಮನಿ ಚಾನ್ಸಲರ್ ಜತೆ ನವರಾತ್ರಿಗೆ ಬಂದ ದುರ್ಗಾಮಾತೆ

|
Google Oneindia Kannada News

ನವದೆಹಲಿ, ಅಕ್ಟೋಬರ್. 06: ಮಹಿಷಾಸುರ ಮರ್ದಿನಿ ಅವತಾರದಲ್ಲಿರುವ ದುರ್ಗೆಯ ಪುರಾತನ ವಿಗ್ರಹವನ್ನು ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್, ಪ್ರಧಾನಿ ನರೇಂದ್ರ ಮೋದಿಗೆ ಹಸ್ತಾಂತರ ಮಾಡಿದ್ದಾರೆ.

ಜಮ್ಮು-ಕಾಶ್ಮೀರದ ಪುಲುವಾಮಾದ ದೇವಾಲಯವೊಂದರಲ್ಲಿದ್ದ 10ನೇ ಶತಮಾನದ ಮೂರ್ತಿ ಸುಮಾರು ಎರಡು ದಶಕಗಳ ಹಿಂದೆ ಕಾಣೆಯಾಗಿತ್ತು. ಜರ್ಮನಿಯ ಮ್ಯೂಸಿಯಂ ಒಂದರಲ್ಲಿ ವಿಗ್ರಹ ಇರುವ ಬಗ್ಗೆ ಪುರಾತತ್ವ ಇಲಾಖೆಗೆ ಮಾಹಿತಿ ಲಭಿಸಿತ್ತು. ವಿಗ್ರಹ ಹಿಂತಿರುಗಿಸುವಂತೆ ಭಾರತೀಯ ಪುರಾತತ್ವ ಇಲಾಖೆ ಜರ್ಮನಿ ಸರ್ಕಾರಕ್ಕೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿರುವ ಜರ್ಮನಿ ವಿಗ್ರಹವನ್ನು ಭಾರತಕ್ಕೆ ವಾಪಸ್ ಮಾಡಿದೆ.[ಮೋದಿ, ಏಂಜೆಲಾ ಮರ್ಕೆಲ್‌ ಬೆಂಗಳೂರು ಭೇಟಿ, ಕ್ಷಣ ಕ್ಷಣದ ಮಾಹಿತಿ]

Angela Merkel returns ancient Indian statue to Narendra Modi

ಸುಭಾಷ್ ಕಪೂರ್ ಕದ್ದ ವಿಗ್ರಹ
ಕಲೆ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ವಸ್ತುಗಳ ಅಪಹರಣಕಾರ ಸುಭಾಷ್ ಕಪೂರ್ ಭಾರತದಿಂದ ವಿಗ್ರಹಗಳನ್ನು ಕದ್ದು ಯುಎಸ್ ಗೆ, ಜರ್ಮನಿ, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಿಗೆ ಸಾಗಿಸುತ್ತಿದ್ದ. ಈತ ಅಪಹರಣ ಮಾಡಿದ್ದ ಹರಳುಗಳು ಯುಎಸ್ ನಲ್ಲೂ ಹಿಂದೆ ಪತ್ತೆಯಾಗಿತ್ತು. ಅಲ್ಲದೇ ಆಸ್ಟ್ರೇಲಿಯಾದ ಮ್ಯೂಸಿಯಂ ಒಂದಕ್ಕೆ 115ಕ್ಕೂ ಹೆಚ್ಚು ವಿಗ್ರಹಗಳನ್ನು ಈತ ನೀಡಿದ್ದಾನೆ ಎಂಬ ಮಾಹಿತಿಯೂ ಇದೆ.[ಚಿನ್ನ ಕಳ್ಳ ಸಾಗಣೆಯ ಹೊಸ ಮಾರ್ಗಗಳು ಯಾವವು!]

ತಮಿಳುನಾಡು ಪೊಲೀಸರು ಕಪೂರ್ ನನ್ನು ಬಂಧಿಸಿದಾಗ ಅವನು ಅಮೆರಿಕದ ಮ್ಯಾನ್ ಹಟನ್‌ನಲ್ಲಿ ಆರ್ಟ್ ಗ್ಯಾಲರಿಯೊಂದನ್ನು ನಡೆಸುತ್ತಿರುವುದು ಪತ್ತೆಯಾಗಿತ್ತು. ಇದರ ಜಾಡು ಹಿಡಿದ ಪೊಲೀಸರು ಮಹಿಷಾಸುರ ಮರ್ದಿನಿಯ ವಿಗ್ರಹ ಜರ್ಮನಿಯಲ್ಲಿರುವುದನ್ನು ಪತ್ತೆ ಹಚ್ಚಿದರು. ಜರ್ಮನಿ, ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ಭಾರತದ ಇನ್ನೂ ಹಲವು ಇಂತಹ ವಿಗ್ರಹಗಳಿದ್ದು ಅವುಗಳನ್ನೆಲ್ಲಾ ವಾಪಸು ತರುವ ಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ.

English summary
An antique statue of the Hindu goddess Durga stolen from a Indian temple and sold to a German museum was formally handed back by German Chancellor Angela Merkel. The handover of the 10th century statue took place during Merkel‘s two-day visit to India for talks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X