ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ರಕ್ಷಣಾ ಸಚಿವರಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇಮಕ?

ಅಮಿತ್ ಶಾ ಅವರಿಗೆ ರಕ್ಷಣಾ ಸಚಿವ ಪಟ್ಟ. ಬಿಜೆಪಿ ಮೂಲಗಳಿಂದ ಮಾಹಿತಿ. ಸದ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವ ಅಮಿತ್. ಗುಜರಾತ್ ಮೂಲಕ ರಾಜ್ಯಸಭಾ ಸದಸ್ಯರಾದ ನಂತರ ರಕ್ಷಣಾ ಇಲಾಖೆ ಸಚಿವರಾಗಿ ನೇಮಕವಾಗುವ ಸಾಧ್ಯತೆ.

|
Google Oneindia Kannada News

ನವದೆಹಲಿ, ಆಗಸ್ಟ್ 1: ಹಲವಾರು ದಿನಗಳಿಂದ ಖಾಲಿ ಇರುವ ರಕ್ಷಣಾ ಸಚಿವರ ಹುದ್ದೆಗೆ ಈಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ತಂದು ಕೂರಿಸಲು ಮೋದಿ ಹಾಗೂ ಬಿಜೆಪಿಯ ಥಿಂಕ್ ಟ್ಯಾಂಕ್ ಆಲೋಚಿಸಿವೆಯೇ?

ಬಿಜೆಪಿಯ ನಂಬಲರ್ಹ ಮೂಲಗಳನ್ನು ನಂಬುವುದಾದರೆ ಇದು ಸರಿ! ಹೌದು. ರಾಜ್ಯಸಭಾ ಸದಸ್ಯರಾಗುವ ಮೂಲಕ ಸಂಸತ್ ಪ್ರವೇಶಿಸಲು ವೇದಿಕೆ ಸಜ್ಜು ಮಾಡಿಕೊಂಡಿರುವ ಅಮಿತ್ ಶಾ, ಸಂಸದರಾಗಿ ಚುನಾಯಿತರಾದ ಕೂಡಲೇ ಅವರಿಗೆ ರಕ್ಷಣಾ ಸಚಿವರ ಹುದ್ದೆಯೇರಲಿದ್ದಾರೆಂದು ಹೇಳಲಾಗಿದೆ.

2019ರಲ್ಲಿ ಮೋದಿಗೆ ಸವಾಲೊಡ್ಡಲು ಯಾರಿಗೂ ಸಾಧ್ಯವಿಲ್ಲ: ನಿತೀಶ್2019ರಲ್ಲಿ ಮೋದಿಗೆ ಸವಾಲೊಡ್ಡಲು ಯಾರಿಗೂ ಸಾಧ್ಯವಿಲ್ಲ: ನಿತೀಶ್

Amit Shah who is national president of BJP

ಈ ಹಿಂದೆ, ರಕ್ಷಣಾ ಇಲಾಖೆಯನ್ನು ಈ ಹಿಂದೆ ಮನೋಹರ್ ಪರಿಕ್ಕರ್ ನಿಭಾಯಿಸುತ್ತಿದ್ದರು. ಆದರೆ ಅವರು ಗೋವಾದ ಮುಖ್ಯಮಂತ್ರಿಯಾದ ನಂತರ, ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ರಕ್ಷಣಾ ಖಾತೆಯನ್ನು ನಿಭಾಯಿಸುತ್ತಿದ್ದಾರೆ.

ಆರ್ಥಿಕ ಇಲಾಖೆ ಜತೆಗೆ ರಕ್ಷಣಾ ಇಲಾಖೆಯನ್ನೂ ನಿಭಾಯಿಸುತ್ತಿರುವುದರಿಂದ ಜೇಟ್ಲಿಯವರಿಗೆ ಹೆಚ್ಚು ಹೊರೆಯಾಗುತ್ತಿದೆ. ಹೀಗಾಗಿಯೇ, ಕೇಂದ್ರ ಮಂತ್ರಿ ಮಂಡಲ ಪುನಾರಚನೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ.

ಮನ್ ಕಿ ಬಾತ್: GST ಯಶಸ್ವಿಗೊಳಿಸಿದ ದೇಶದ ಜನತೆಗೆ ಮೋದಿಯಿಂದ ಧನ್ಯವಾದಮನ್ ಕಿ ಬಾತ್: GST ಯಶಸ್ವಿಗೊಳಿಸಿದ ದೇಶದ ಜನತೆಗೆ ಮೋದಿಯಿಂದ ಧನ್ಯವಾದ

ಗಡಿಯಲ್ಲಿ ಚೀನಾ, ಪಾಕಿಸ್ತಾನಗಳೆರಡೂ ಭಾರತಕ್ಕೆ ತಲೆನೋವಾಗಿರುವ ಈ ವೇಳೆಯಲ್ಲಿ ರಕ್ಷಣಾ ಸಚಿವರಾಗಿ ಶಾ ಬಂದರೆ, ಈ ಸಮಸ್ಯೆಗಳನ್ನು ಹೇಗೆ ನಿಭಾಯಿಸುತ್ತಾರೆಂಬ ಕುತೂಹಲ ಈಗ ಎಲ್ಲರಲ್ಲಿ ಮನೆ ಮಾಡಿದೆ.

English summary
Prime Minister Narendra Modi has planned to fill up the Defence Minister's place with Amith Shah. Amith Shah who is national president of BJP, is now contesting for Rajya Sabha from Gujarat. After his win he will be incorporated into PM Cabinet says sources.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X