ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಣೆಯಾಗಿದ್ದಾರೆ: ರಾಹುಲ್ ಗಾಂಧಿ, ಅಮೇಥಿ ಸಂಸದ

By Mahesh
|
Google Oneindia Kannada News

ಅಮೇಥಿ, ಮಾ.25: 'ನಾಯಕ ಇಲ್ಲದ ಕ್ಷೇತ್ರ ಅಮೇಥಿ' ನಮ್ಮ ಸಂಸದ ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಡಿ ಎಂದು ಉತ್ತರಪ್ರದೇಶದ ಅಮೇಥಿ ಕ್ಷೇತ್ರದ ಹಲವೆಡೆ ಕಾಣೆಯಾದವರ ಬಗ್ಗೆ ನೀಡುವ ಪ್ರಕಟಣೆಯಂತೆ 'ರಾಹುಲ್ ಗಾಂಧಿ ನಾಪತ್ತೆ' ಪ್ರಕಟಣೆ ಹೊರಡಿಸಲಾಗಿದೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಪತ್ತೆ ವಿಚಾರ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ.ಲೋಕಸಭೆಯಲ್ಲೂ ಈ ಬಗ್ಗೆ ಭಾರಿ ಚರ್ಚೆ ನಡೆದು ವಿಷಯ ಈಗ ತಣ್ಣಗಾಗಿದೆ. ಈ ನಡುವೆ ರಾಹುಲ್ ಗಾಂಧಿ ಅವರ ಸ್ವಕ್ಷೇತ್ರದಲ್ಲಿ ಹೀಗೊಂದು ಪ್ರಕಟಣೆ ಹಾದಿ ಬೀದಿಯಲ್ಲಿ ಕಾಣಿಸಿಕೊಂಡಿದೆ.

Rahul Gandhi missing? Amethi is without a leader, says new posters in UP

"Jaane woh Kaunsa desh , Jahan tum chale Gaye" ಎಂದು ಕ್ಷೇತ್ರದ ಜನತೆ ಪ್ರಶ್ನಿಸಿದ್ದಾರೆ. ಅಮೇಥಿ ಮೂಲ ಸೌಕರ್ಯಗಳ ಕೊರತೆ ಅನುಭವಿಸುತ್ತಿದೆ. ಇಲ್ಲ ನಾಯಕನಿಲ್ಲ, ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ, ರಸ್ತೆ ಇಲ್ಲ, ಆರೋಗ್ಯ ಸೇವಾಕೇಂದ್ರಗಳಿಲ್ಲ ಎಂದು ಜನರು ತಮ್ಮ ಗೋಳನ್ನು ಈ ಮೂಲಕ ಜಗತ್ತಿನ ಮುಂದೆ ಬಿಚ್ಚಿಟ್ಟಿದ್ದಾರೆ.[ಏಪ್ರಿಲ್ ತಿಂಗಳಲ್ಲಿ ರಾಹುಲ್ ಗಾಂಧಿಗೆ ಪಟ್ಟಾಭಿಷೇಕ!]

ನಾಪತ್ತೆಯಾಗಿರುವ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಬಗ್ಗೆ ಸುಳಿವು ಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿದೆ. ಅದರೆ, ಇದೆಲ್ಲವೂ ಬಿಜೆಪಿ ಕುತಂತ್ರ ಎಂದು ಕಾಂಗ್ರೆಸ್ ಕಿಡಿಕಾರಿದೆ.

Rahul Gandhi

ಕೆಲ ಪೋಸ್ಟರ್ ಗಳಲ್ಲಿ ಪಕ್ಷಾತೀತವಾಗಿ ರಾಜಕೀಯ ಮುಖಂಡರಿಗೆ ಚುರುಕು ಮುಟ್ಟಿಸಲಾಗಿದೆ. ಬುಂದೇಲ್ ಖಂಡ್ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದ ಉಮಾಭಾರತಿ ಎಲ್ಲಿದ್ದಾರೆ ಎಂದು ಪ್ರಶ್ನಿಸಲಾಗಿದೆ. [ರಾಹುಲ್ ಗಾಂಧಿಗಾಗಿ ಹುಡುಕಾಟ, ಕೈಪಡೆ ಕಂಗಾಲು]

ಒಟ್ಟಾರೆ, ಈ ಹಿಂದೆ ಅಜಂ ಖಾನ್, ಜಯಪ್ರದಾ, ಕ್ರಿಕೆಟರ್ ಕಮ್ ರಾಜಕಾರಣಿ ನವಜ್ಯೋತ್ ಸಿಧು ಅವರು ನಾಪತ್ತೆಯಾಗಿದ್ದಾರೆ ಎಂದು ಪ್ರಕಟಣೆ ಹೊರಡಿಸಿದ್ದಂತೆ ಈ ಬಾರಿ ರಾಹುಲ್ ಗಾಂಧಿ ಸರದಿ. ಆದರೆ, ರಾಹುಲ್ ಗಾಂಧಿ ನಾಪತ್ತೆ ಬಗ್ಗೆ ಪ್ರಕಟಣೆ ಬಲವಾಗಿ ಕಾಂಗ್ರೆಸ್ ಪಕ್ಷವನ್ನು ತಟ್ಟುತ್ತಿದೆ.

English summary
Nearly a month after Congress granted leave to its vice-president Rahul Gandhi for few weeks, posters announcing 'Rahul Gandhi is missing' have been seen in parts of Uttar Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X