ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 1ರಿಂದ ಅಮರನಾಥ ಯಾತ್ರೆಗೆ ನೋಂದಣಿ ಆರಂಭ

ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದೆನಿಸಿರುವ ಅಮರನಾಥ ಯಾತ್ರೆಗೆ ಮಾರ್ಚ್ 1 ರಿಂದ ನೋಂದಣಿ ಕಾರ್ಯ ಆರಂಭ. ಕಣಿವೆ ರಾಜ್ಯದ ಬಾಲ್ಟಲ್ ಹಾಗೂ ಚಂದನ್ ವಾರಿ ಮಾರ್ಗದಲ್ಲಿ ಮೊದಲಿಗೆ ಪಯಣ.

By Mahesh
|
Google Oneindia Kannada News

ಶ್ರೀನಗರ, ಫೆಬ್ರವರಿ 26 : ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಒಂದೆನಿಸಿರುವ ಅಮರನಾಥ ಯಾತ್ರೆಗೆ ಮಾರ್ಚ್ 1 ರಿಂದ ನೋಂದಣಿ ಕಾರ್ಯ ಆರಂಭ. ಕಣಿವೆ ರಾಜ್ಯದ ಬಲ್ತಾಲ್ ಹಾಗೂ ಚಂದನ್ ವಾರಿ ಮಾರ್ಗದಲ್ಲಿ ಮೊದಲಿಗೆ ಪಯಣ ಸಾಗಲಿದೆ ಎಂದು ಆಡಳಿತಾಧಿಕಾರಿಗಳು ಹೆಳೀದ್ದಾರೆ.

ಕಾಶ್ಮೀರದ ಚಂದನ್ ವಾರಿ ಮತ್ತು ಉತ್ತರ ಕಾಶ್ಮೀರದ ಬಲ್ತಾಲ್ ಮಾರ್ಗಗಳಲ್ಲಿ ಮೊದಲಿಗೆ ಯಾತ್ರೆ ಸಾಗಲಿದೆ. ಎರಡೂ ಮಾರ್ಗಗಳ ಉದ್ದಕ್ಕೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡವನ್ನು ನಿಯೋಜಿಸಲಾಗಿದ್ದು ಯಾತ್ರಾರ್ಥಿಗಳ ಹಿತ ಕಾಪಾಡುವ ಕಾರ್ಯ ನಿರ್ವಹಿಸಲಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ.

Amarnath Yatra registration to begin from March 1

ದೇಶದ ಹಲವೆಡೆ ಇರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನ 433 ಬ್ರ್ಯಾಂಚ್ ಗಳು ಹಾಗೂ ಜಮ್ಮು ಮತ್ತು ಕಾಶ್ಮೀರ್ ಬ್ಯಾಂಕ್, ಯೆಸ್ ಬ್ಯಾಂಕ್ ನಲ್ಲಿ ಅಮರನಾಥ್ ಯಾತ್ರೆಗೆ ನೋಂದಣಿ ಮಾಡಿಸಿಕೊಳ್ಳಬಹುದು.

ಎರಡು ಮಾರ್ಗಗಳಲ್ಲಿ ಏಕಕಾಲಕ್ಕೆ ಜೂನ್ 29 ರಿಂದ ಆರಂಭಗೊಂಡು ಆಗಸ್ಟ್ 7 ರ ರಕ್ಷಾಬಂಧನ್ ದಿನದಂದು ಮುಕ್ತಾಯವಾಗಲಿದೆ. ಫೆಬ್ರವರಿ 10 ರ ನಂತರ ಸಂಪೂರ್ಣ ವೈದ್ಯಕೀಯ ಪರೀಕ್ಷೆ ಪ್ರಮಾಣ ಪತ್ರ ಪಡೆದಿರಬೇಕು. 13 ವರ್ಷವಯಸ್ಸಿಗಿಂತ ಚಿಕ್ಕವರು, 75 ವರ್ಷಕ್ಕೂ ಅಧಿಕ ವಯಸ್ಸಿನ ಹಿರಿಯರು, 6 ತಿಂಗಳ ಗರ್ಭಿಣಿಯರಿಗೆ ನೋಂದಣಿ ನಿರ್ಬಂಧಿಸಲಾಗಿದೆ ಎಂದು ಅಮರನಾಥ್ ಯಾತ್ರೆ ಮಂಡಳಿಯ ಸಿಇಒ ಪಿಕೆ ತ್ರಿಪಾಠಿ ಹೇಳಿದ್ದಾರೆ.

ಯಾತ್ರಿಕರ ಸುರಕ್ಷತೆಗಾಗಿ ಸೇನೆ, ಅರೆ ಸೇನಾಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳಿಂದ ಮೂರು ಹಂತಗಳ ಭದ್ರತೆ ಒದಗಿಸಲಾಗುತ್ತದೆ. ಮಾತ್ರವಲ್ಲದೆ ರಾಜ್ಯ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ತಂಡಗಳನ್ನೂ ನಿಯೋಜಿಸಲಾಗುತ್ತದೆ. ಸುಮಾರು ಎರಡು ತಿಂಗಳ ಕಾಲ ನಡೆಯಲಿರುವ ಯಾತ್ರೆಯಲ್ಲಿ ಸಾವಿರಾರು ಜನ ಭಕ್ತರು ಪಾಲ್ಗೊಳ್ಳುತ್ತಾರೆ. ಭಕ್ತರು ಹಿಮಲಿಂಗದ ದರ್ಶನ ಪಡೆದು ಪುನೀತರಾಗುತ್ತಾರೆ.

English summary
The registration for the annual Amarnath yatra through both Baltal and Chandanwari routes will commence on March 1, an official spokesman said on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X