ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರನಾಥ ಯಾತ್ರೆ ವೇಳೆ ಉಗ್ರರ ದಾಳಿ, ಇದೇ ಮೊದಲಲ್ಲǃ

By ವಿಕಾಸ್ ನಂಜಪ್ಪ
|
Google Oneindia Kannada News

ಶ್ರೀನಗರ, ಜುಲೈ 11: ಅಮರನಾಥ ಯಾತ್ರಾರ್ಥಿಗಳ ಮೇಲೆ ಸೋಮವಾರ ರಾತ್ರಿ ಉಗ್ರರು ದಾಳಿ ನಡೆಸಿದ್ದು, ಕಹಿ ನೆನಪುಗಳನ್ನು ಕೆದಕುತ್ತದೆ. ಈ ಹಿಂದೆ ಮೂರು ಬಾರಿ ಯಾತ್ರಾರ್ಥಿಗಳ ಮೇಲೆ ಉಗ್ರರ ದಾಳಿ ನಡೆದಿತ್ತು.

ಹಲವು ಯಾತ್ರಿಗಳ ಪ್ರಾಣ ಉಳಿಸಿದ ಬಸ್ ಚಾಲಕ ಸಲೀಂಹಲವು ಯಾತ್ರಿಗಳ ಪ್ರಾಣ ಉಳಿಸಿದ ಬಸ್ ಚಾಲಕ ಸಲೀಂ

ಅನಂತನಾಗ್ ಜಿಲ್ಲೆಯಲ್ಲಿ ಕಳೆದ ರಾತ್ರಿ ನಡೆದ ದಾಳಿಯಲ್ಲಿ ಒಟ್ಟು 6 ಜನರು ಮೃತಪಟ್ಟು 9 ಜನರು ಗಾಯಗೊಂಡಿದ್ದಾರೆ. ಈ ಹಿಂದೆ ನಡೆದ ದಾಳಿಗಳ ವಿವರ ಮುಂದಿದೆ...

ಪಹಲ್‌ ಗಾಂವ್ ಮತ್ತು ಬಲ್ತಾಲ್ ಮೂಲ ಶಿಬಿರದಿಂದ 40 ದಿನಗಳ ಅಮರನಾಥ ಯಾತ್ರೆ ಜೂನ್‌ 28ರಂದು ಆರಂಭವಾಗಿತ್ತು.

ಅಮಾಯಕರನ್ನು ಬಲಿತೆಗೆದುಕೊಂಡವರನ್ನು ಅಮರನಾಥನೇ ಶಿಕ್ಷಿಸಲಿ...ಅಮಾಯಕರನ್ನು ಬಲಿತೆಗೆದುಕೊಂಡವರನ್ನು ಅಮರನಾಥನೇ ಶಿಕ್ಷಿಸಲಿ...

ಅಮರನಾಥ ಯಾತ್ರೆಯ ನಿಯಮವನ್ನು ಬಸ್‌ ಚಾಲಕ ಉಲ್ಲಂಘಿಸಿದ್ದಾನೆ.ಯಾತ್ರೆಯಲ್ಲಿ ಭಾಗವಹಿಸುವ ಯಾವುದೇ ವಾಹನಗಳು ಸಂಜೆ ಏಳು ಗಂಟೆಯ ನಂತರ ಹೆದ್ದಾರಿಯಲ್ಲಿ ಸಂಚರಿಸುವಂತಿಲ್ಲ. ಏಳು ಗಂಟೆ ನಂತರ ಭದ್ರತೆ ವ್ಯವಸ್ಥೆ ಇರುವುದಿಲ್ಲ.ರಾತ್ರಿ 8.20ಕ್ಕೆ ಬಸ್‌ ಅನ್ನು ಅಡ್ಡಗಟ್ಟಿದ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ ದ್ದಾರೆ ಎಂದು ತಿಳಿದುಬಂದಿದೆ.

ಜುಲೈ 10, 2017

ಜುಲೈ 10, 2017

ಅಮರನಾಥ ಯಾತ್ರಾರ್ಥಿಗಳ ಮೇಲೆ ಸೋಮವಾರ(ಜುಲೈ 10) ರಾತ್ರಿ ಉಗ್ರರ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಒಟ್ಟು 6 ಜನರು ಮೃತಪಟ್ಟು 9 ಜನರು ಗಾಯಗೊಂಡಿದ್ದಾರೆ.

ಆಗಸ್ಟ್ 2, 2000

ಆಗಸ್ಟ್ 2, 2000

ಆಗಸ್ಟ್ 2, 2000ರಂದು 95 ಜನರಿದ್ದ ಗುಂಪಿನ ಮೇಲೆ ಉಗ್ರರ ದಾಳಿ ನಡೆದಿತ್ತು. ಈ ದಾಳಿಯಲ್ಲಿ 30 ಮಂದಿ ಮೃತಪಟ್ಟಿದ್ದರು. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿತ್ತು. ಈ ದಾಳಿ ಕೂಡಾ ಆನಂತ್ ನಾಗ್ ಜಿಲ್ಲೆಯ ಪಹಲ್ ಗಾಮ್ ಪಟ್ಟಣದಲ್ಲಿ ನಡೆದಿತ್ತು.

ಜುಲೈ 20, 2001

ಜುಲೈ 20, 2001

ಜುಲೈ 20 2001ರಂದು ಆಮರನಾಥ್ ದೇಗುಲದ ಮೇಲೆ ಗ್ರೇನೈಡ್ ದಾಳಿ ನಡೆಸಲಾಗಿತ್ತು. ಮೂವರು ಮಹಿಳೆ, ಇಬ್ಬರು ಪೊಲೀಸರು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದರು. ಅಮರನಾಥ್ ಗುಹೆಯ ಬಳಿ ಶೇಷ್ ನಾಗ್ ಹತ್ತಿರ ಈ ದಾಳಿ ನಡೆದಿತ್ತು.

2002ರಲ್ಲಿ ದಾಳಿ

2002ರಲ್ಲಿ ದಾಳಿ

ಲಷ್ಕರ್ ಇ ತೋಯ್ಬಾ, ಅಲ್ ಮನ್ಸುರಿಯಾನ್ ಸಂಘಟನೆ ನಡೆಸಿದ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿದ್ದರು. ನುನ್ವಾಗ್ ಕ್ಯಾಪ್ ಬಳಿ ದಾಳಿ ನಡೆದಿತ್ತು.

English summary
The attack on the Amarnath yatra in which seven persons were killed brings back memories of past attacks. This is not the first time that the yatra has come under attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X