ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಧಿಗೆ ಮುನ್ನವೇ ಕರಗಿದ ಅಮರನಾಥ ಹಿಮಲಿಂಗ

|
Google Oneindia Kannada News

ಶ್ರೀನಗರ, ಆ.05: ಪ್ರಸಿದ್ಧ ಅಮರನಾಥ ಯಾತ್ರೆ ಮುಗಿಯಲು ಇನ್ನು ಎರಡು ವಾರ ಬಾಕಿ ಇರುವಂತೆಯೇ ಹಿಮಲಿಂಗ ಸಂಪೂರ್ಣವಾಗಿ ಕರಗಿ ಹೋಗಿದೆ.

2006ರಲ್ಲಿಯೂ ಇದೇ ರೀತಿ ಯಾತ್ರೆ ಮುಗಿಯುವ ಮುನ್ನವೇ ಲಿಂಗ ಕರಗಿತ್ತು. ದಶಕದಲ್ಲೇ ಮೊದಲ ಸಾರಿ 20 ಅಡಿ ಲಿಂಗ ನಿರ್ಮಾಣವಾಗಿದ್ದರೂ ಅನೇಕ ಭಕ್ತರಿಗೆ ದರ್ಶನ ಭಾಗ್ಯ ಇಲ್ಲದಂತಾಗಿದೆ. [ಅಮರನಾಥ ಯಾತ್ರಿಕರಿಗೆ ಭಾರತ ಸೈನ್ಯದ ರಕ್ಷಣೆ]

Amarnath Shiv lingam melts completely

ಶಿವಲಿಂಗ ಕರಗಲು ಜಾಗತಿಕ ತಾಪಮಾನ ಏರಿಕೆ ಮತ್ತು ಪರಿಸರ ಮಾಲಿನ್ಯವೇ ಕಾರಣ ಎಂದು ವಿಜ್ಞಾನಿಗಳು ವಿಶ್ಲೇಷಣೆ ಮಾಡಿದ್ದಾರೆ. ಲಿಂಗ ಕರಗುವ ಬಗ್ಗೆ ಮೊದಲೇ ಅನುಮಾನ ವ್ಯಕ್ತಪಡಿಸಿದ್ದ ಅಮರನಾಥ ಶ್ರೈನ್ ಬೋರ್ಡ್ ಕೆಲ ಮುಂಜಾಗೃತಾ ಕ್ರಮ ತೆಗೆದುಕೊಂಡರೂ ಯಾವ ಪರಿಣಾಮ ಬೀರಿಲ್ಲ.[ ಭಾರೀ ಮಳೆಯಲ್ಲಿ ಯಾತ್ರೆ ಚಿತ್ರದಲ್ಲಿ ನೋಡಿ]

ಯಾತ್ರೆಯನ್ನು ಬಿಗಿ ಭದ್ರತೆಯಲ್ಲಿ ಕೇಂದ್ರ ಸರ್ಕಾರ ಆರಂಭ ಮಾಡಿತ್ತು. ಆದರೆ ಜಮ್ಮು ಕಾಶ್ಮೀರ ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದ್ದರಿಂದ ಕೆಲ ಕಾಲ ಯಾತ್ರೆಯನ್ನು ಬಂದ್ ಮಾಡಲಾಗಿತ್ತು. ಇದೀಗ ಕೊಂಚ ತಡವಾಗಿ ಹೊರಟ ಭಕ್ತರಿಗೆ ಶಿವಲಿಂಗ ದರ್ಶನ ಭಾಗ್ಯ ಇಲ್ಲದಂತಾಗಿದೆ.

English summary
Shrinagar: The naturally formed ice lingam of Lord Shiva at the Amarnath cave has completely melted, before the end of the pilgrimage. Even before the beginning of the annual pilgrimage, the lingam was 20-feet tall this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X