ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲ್ಲು ಶಿಕ್ಷೆ ತಪ್ಪಿಸಿಕೊಂಡ ಕೋಲಿಗೆ ಜೀವಾವಧಿ ಜೈಲುವಾಸ

By Mahesh
|
Google Oneindia Kannada News

ಅಲಹಾಬಾದ್, ಜ.28: ನಿಥಾರಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ, ನಂತರ ಅವರನ್ನು ಅಮಾನವೀಯವಾಗಿ ಹತ್ಯೆ ಮಾಡಿದ ಪಾತಕಿ ಸುರೀಂದರ್ ಕೋಲಿ ಗಲ್ಲು ಶಿಕ್ಷೆಯನ್ನು ತಪ್ಪಿಸಿಕೊಂಡಿದ್ದಾನೆ. ತನಗೆ ನೀಡಿದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಅಲಹಾಬಾದ್ ಕೋರ್ಟಿಗೆ ಕೋಲಿ ಮನವಿ ಸಲ್ಲಿಸಿದ್ದ. ಇದಕ್ಕೆ ಕೋರ್ಟ್ ಬುಧವಾರ ಸಮ್ಮತಿ ಸೂಚಿಸಿದೆ.

ಗಾಜಿಯಾಬಾದ್ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶದಂತೆ 42 ವರ್ಷದ ಅತ್ಯಾಚಾರಿ, ಹಂತಕ ಕೋಲಿಯನ್ನು 2014ರ ಸೆಪ್ಟೆಂಬರ್ 12ರಂದೇ ಮೀರತ್ ಜೈಲಿನಲ್ಲಿ ಗೆಲ್ಲಿಗೇರಿಸಬೇಕಾಗಿತ್ತು. ಸೆ.2 ರಂದು ಕೋಲಿಗೆ ಡೆತ್ ವಾರೆಂಟ್ ಜಾರಿಗೊಳಿಸಲಾಗಿತ್ತು.

ಅದರೆ, ನಿಥಾರಿ ಸರಣಿ ಕೊಲೆ ಪಾತಕಿ ಸುರಿಂದರ್ ಕೋಲಿ ಪುನರ್ ಪರಿಶೀಲನೆ ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿ, ಅಕ್ಟೋಬರ್ 29, 2014ರ ತನಕ ಆತನ ಗಲ್ಲುಶಿಕ್ಷೆ ಜಾರಿಗೊಳಿಸದಂತೆ ತಡೆಯಾಜ್ಞೆ ನೀಡಿತ್ತು.[ನಿಥಾರಿ ಸರಣಿ ಹಂತಕ, ನರಭಕ್ಷಕನಿಗೆ ಡೆತ್ ವಾರೆಂಟ್]

Allahabad HC commutes Nithari serial killer Surinder Koli's death sentence

ಅದರೆ, ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸುವಂತೆ ಕೋಲಿ ಅಲಹಾಬಾದ್ ಕೋರ್ಟಿಗೆ ಅರ್ಜಿ ಹಾಕಿಕೊಂಡಿದ್ದ. ಕೋಲಿಗೆ ಜೀವಾವಧಿ ಜೈಲುವಾಸವನ್ನೇ ನೀಡುವಂತೆ ಪ್ರಜಾಪ್ರಭುತ್ವ ಹಕ್ಕುಗಳ ಹೋರಾಟ ಸಂಸ್ಥೆ(ಪಿಯುಡಿಆರ್) ಕೂಡಾ ಮನವಿ ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಚಂದ್ರಚೂಡ ಹಾಗೂ ಜಸ್ಟೀಸ್ ಪಿಕೆಎಸ್ ಬಗೇಲ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ತೀರ್ಪು ನೀಡಿದೆ. [ವಿಚಾರಣಾಧೀನ ಕೈದಿ ಬಿಡುಗಡೆ : ಲಾಭ ಯಾರಿಗೆ?]

ಡಿಸೆಂಬರ್ 2009ರಲ್ಲಿ ಪಂಧೇರ್ ಬಂಗಲೆಯಲ್ಲಿ ಕೋಲಿ ಸುಮಾರು 19 ಮಂದಿ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ನಂತರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.ಇದಲ್ಲದೆ ಮೃತ ಬಾಲಕಿಯರ ದೇಹವನ್ನು ಭಕ್ಷಿಸುವಷ್ಟು ಇತ ಕ್ರೂರಿಯಾಗಿದ್ದ. [ನಿತಾರಿ ಸರಣಿ ಹತ್ಯಾಕಾಂಡ : ಮೊನಿಂದರ್ ನಿರ್ದೋಷಿ]

ದೆಹಲಿಯ ಹೊರವಲಯದಲ್ಲಿರುವ ನೋಯ್ಡಾ ಪರಿಸರದ ನಿವಾಸಿಯಾಗಿದ್ದ ರಿಂಪಾ 2005ರಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದಳು. 2006ರಲ್ಲಿ ಪಂಧೇರ್‌ನ ನಿವಾಸದ ಹಿಂದಿರುವ ಚರಂಡಿಯಲ್ಲಿ ಹಲವಾರು ಮಾನವ ಅವಶೇಷಗಳು ಪತ್ತೆಯಾದ ನಂತರ ಸರಣಿ ಕಗ್ಗೊಲೆ ಪ್ರಕರಣ ಬೆಳಕಿಗೆ ಬಂದಿತ್ತು.

English summary
The Allahabad High Court commuted Nithari serial killer Surinder Koli's death sentence to life imprisonment on Wednesday(Jan.28).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X