ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೈಬ್ರರಿಗೆ ಹುಡ್ಗೀರ್ ಬಂದ್ರೆ ಹುಡುಗರ ತಲೆ ಕೆಡುತ್ತಂತೆ!

|
Google Oneindia Kannada News

ನವದೆಹಲಿ, ನ.11 : 'ವಿದ್ಯಾರ್ಥಿನಿಯರು ಗ್ರಂಥಾಲಯಕ್ಕೆ ಕಾಲಿಟ್ಟರೆ ಅಲ್ಲಿ ಓದುತ್ತಾ ಕುಳಿತ ಹುಡುಗರು ಅವರೆಡೆಗೆ ಆಕರ್ಷಿತರಾಗುತ್ತಾರೆ. ನಂತರ ಅವರ ಮನಸ್ಸು ಚಂಚಲವಾಗಿ ವ್ಯಾಸಂಗಕ್ಕೆ ಅಡ್ಡಿಯಾಗುತ್ತದೆ.' ಹೀಗೆಂದು ಹೇಳಿದ್ದಲ್ಲದೇ ಗ್ರಂಥಾಲಯಕ್ಕೆ ವಿದ್ಯಾರ್ಥಿನಿಯರು ಕಾಲಿಡಬಾರದು ಎಂದು ಆದೇಶವನ್ನು ಹೊರಡಿಸಲಾಗಿದೆ.

ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಉಪ ಕುಲಪತಿ ಜಮೀರುದ್ದೀನ್ ಶಾ ಇಂಥದ್ದೊಂದು ಗೊಂದಲಕಾರಿ ಆದೇಶ ಹೊರಡಿಸಿದ್ದು ವ್ಯಾಪಕ ವಿರೋಧ ಮತ್ತು ಟೀಕೆಗೆ ಗುರಿಯಾಗಿದೆ. ಹುಡುಗಿಯರು ವಿಶ್ವವಿದ್ಯಾಲಯದ ಮೌಲಾನಾ ಅಜಾದ್ ಗ್ರಂಥಾಲಯ ಪ್ರವೇಶಿಸಬಾರದು. ಪುಸ್ತಕಗಳನ್ನು ಪಡೆಯಲು ಆಗಮಿಸಬಾರದು ಎಂದು ಹೇಳಿದ್ದಾರೆ.[ಓದುಗರಿಲ್ಲದೆ ಧೂಳು ಹಿಡಿದಿದೆ ಕನ್ನಡ ಪುಸ್ತಕಗಳು]

university

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಮಹಿಳಾ ಸಂಘಟನೆಯ ಕಾರ್ಯದರ್ಶಿ ಜಮ್ಗತಿ ಸಂಘ್ವನ್. ಇದೊಂದು ದುರದೃಷ್ಟಕರ ನಿರ್ಧಾರ. ಇಂಥ ಹೇಳಿಕೆಗಳನ್ನು ಜಾರಿ ಮಾಡುವವರ ವಿರುದ್ಧ ಕಾನೂನು ಹೋರಾಟ ಅನಿವಾರ್ಯವಾಗುತ್ತದೆ ಎಂದಿದ್ದಾರೆ.

ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಬರ್ಖಾ ಶುಕ್ಲಾ, ಇದು ವಿಶ್ವವಿದ್ಯಾಲಯದ ವರ್ತನೆ ತೋರಿಸುತ್ತದೆ ಎಂದಿದ್ದಾರೆ. ವಿದ್ಯಾರ್ಥಿನಿಯರು ಗ್ರಂಥಾಲಯ ಪ್ರವೇಶಿಸಿದರೆ ಅವರೆಡೆಗೆ ಆಕರ್ಷಿತರಾಗುವ ಹುಡುಗರು ಓದೋದನ್ನು ಬಿಟ್ಟು ಗಲಾಟೆ ಮಾಡುತ್ತಾರೆ ಎಂದು ವಿವಿ ಕುಪಲಪತಿಯೇ ಹೇಳಿದ್ದಾರೆ. ಇದರ ಅರ್ಥ ವಿವಿಯ ವಾತಾವರಣ ಎಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.[ಮೊಘಲರು ಬೆಂಕಿ ಹಚ್ಚಿದ್ದ ವಿಶ್ವವಿದ್ಯಾಲಯ ಪುನರಾರಂಭ]

ಮಹಿಳಾ ಕಾಲೇಜಿನ ಗ್ರಂಥಾಲಕ್ಕೆ ಹೋಲಿಸಿದರೆ ಮೌಲಾನಾ ಅಜಾದ್ ಗ್ರಂಥಾಲಯದಲ್ಲಿ ಉತ್ತಮ ಪುಸ್ತಕಗಳಿವೆ. ಪುಸ್ತಕ ಪರಾಮರ್ಶೆಗೆ ವಿದ್ಯಾರ್ಥಿನಿಯರು ತೆರಳುತ್ತಿದ್ದರೂ ಅವರು ಸದಸ್ಯತ್ವ ಪಡೆದುಕೊಂಡಿಲ್ಲ. ಹಾಗಾಗಿ ಅವರನ್ನು ಬರದಂತೆ ತಡೆಯುವುದೇ ಆದೇಶದ ಹಿಂದಿನ ಉದ್ದೇಶ ಎಂದು ಶುಕ್ಲಾ ಆರೋಪಿಸಿದ್ದಾರೆ.

English summary
Aligarh Muslim University vice chancellor Lt Gen Zameer Uddin Shah has rejected the demand of students of Women's College for access to the varsity's Maulana Azad Library saying that if girls were permitted in, there would be "four times more boys" in the library.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X