ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ಪ್ರವಾಸಿಗರ ಮೇಲೆ ಬಿತ್ತು ಉಗ್ರರ ವಕ್ರದೃಷ್ಟಿ

|
Google Oneindia Kannada News

ಬೆಂಗಳೂರು, ಅ. 17 : ಈ ಬಾರಿ ದೀಪಾವಳಿಗೆ ಪಟಾಕಿ ಸಿಡಿಸಬೇಕಾಗಿಲ್ಲ. ಆದರೆ ಪಟಾಕಿ ಬದಲಾಗಿ ದೇಶದೆಲ್ಲೆಡೆ ಬಾಂಬ್ ಗಳೇ ಸಿಡಿಯಲಿವೆ!!!

ಹೌದು... ಗುಪ್ತಚರ ಇಲಾಖೆ ಇಂಥದ್ದೊಂದು ಆತಂಕಕಾರಿ ವರದಿ ನೀಡಿದೆ. ಪಾಕಿಸ್ತಾನದ ಆಲ್ ಖಯಿದಾ ಮತ್ತು ಐಎಸ್ ಐ ಒಂದಾಗಿ ದಾಳಿ ನಡೆಸಲಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಸಪ್ಟೆಂಬರ್ 4ರ ನಂತರ ದೇಶಲ್ಲಿ ಒಟ್ಟು ಮೂರು ಬಾರಿ ಉಗ್ರ ದಾಳಿಯ ಬಗ್ಗೆ ಅಲರ್ಟ್ ಘೋಷಿಸಿರುವುದುದೇ ಇದಕ್ಕೆ ಸಾಕ್ಷಿ.

ಇವೆರಡು ಸಂಘಟನೆಗಳು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಕೈ ಜೋಡಿಸಿದರೆ ಆಶ್ಚರ್ಯವಿಲ್ಲ. ಈಗಾಗಲೇ ಗೋವಾ ಮತ್ತು ರಾಜಸ್ಥಾನದಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು ಮೋದಿಯನ್ನು ಟಾರ್ಗೆಟ್ ಮಾಡಿದ್ದ ಉಗ್ರರ ಚಿತ್ತ ಇದೀಗ ಹಬ್ಬ ಆಚರಣೆ ಮೇಲೆ ಬಿದ್ದಂತೆ ಕಾಣುತ್ತಿದೆ. ಅಲ್ಲದೇ ಬ್ರಿಟನ್‌ ಮತ್ತು ಅಮೆರಿಕದ ಪ್ರವಾಸಿಗರು ಅವರ ಗುರಿಯಾಗಿದ್ದಾರೆ ಎಂದು ಹೇಳಿದೆ. [ನರೇಂದ್ರ ಮೋದಿಯೇ ಪಾಕಿಸ್ತಾನದ ಟಾರ್ಗೆಟ್ ಯಾಕೆ?]

pakistan

ದೀಪಾವಳಿಗೆ ಭಯೋತ್ಪಾದಕರ ಕಾಟ
ದೀಪಾವಳಿ ಸಂದರ್ಭ ದಾಳಿ ಮಾಡುವ ಸಾಧ್ಯತೆಗಳು ಹೆಚ್ಚಾಗಿದ್ದು, ಪಾಕಿಸ್ತಾನ ನಿರ್ದೇಶೀತ ಕೆಲ ಗುಂಪುಗಳು ಭಾರತದಲ್ಲಿ ಕಾರ್ಯಚಟುವಟಿಕೆಯಲ್ಲಿ ತೊಡಗಿವೆ. ಭಾರತದ ಸಮಗ್ರತೆ ಮತ್ತು ಐಕ್ಯತೆಗೆ ಯಾವ ರೀತಿಯಲ್ಲಾದರೂ ಧಕ್ಕೆ ತರುವಂಥ ಕೆಲಸ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಬೆಂಗಳೂರು, ರಾಜಸ್ಥಾನ ಮತ್ತು ಗೋವಾ ಭಯೋತ್ಪಾದಕರು ಗುರುತು ಹಾಕಿಕೊಂಡಿರುವ ಜಾಗ ಎಂದು ಹೇಳಲಾಗಿದೆ.

ನಗರಗಳ ಸರ್ವೆ ಮಾಡಿರುವ ಉಗ್ರರು
ನಮ್ಮ ದೇಶದ ಮುಖ್ಯ ನಗರಗಳ ಸ್ಪಷ್ಟ ಚಿತ್ರಣ ಉಗ್ರರ ಬಳಿಯಿದೆ. ಕಳೆದ ಆರು ವರ್ಷಗಳಲ್ಲಿ ಮಾರುವೇಶದಲ್ಲಿ ರಾಷ್ಟಕ್ಕೆ ಭೇಟಿ ನೀಡಿದ್ದ ಉಗ್ರರು ತಮ್ಮದೇ ಆದ ನಕಾಶೆ ತಯಾರು ಮಾಡಿಕೊಂಡಿದ್ದಾರೆ. ಲಷ್ಕರ್-ಇ-ತೋಬ್ಬಾ ಅನೇಕ ಸಾರಿ ಗೋವಾ ಸುತ್ತಿದೆ. ಈ ಬಗೆಯ ಆಧಾರಗಳನ್ನಿಟ್ಟುಕೊಂಡೇ 2008ರಲ್ಲಿ ಕಾರುಗಳಲ್ಲಿ ಸರಣಿ ಬಾಂಬ್ ಸ್ಫೋಟ ಮಾಡಲು ಯೋಜಿಸಿತ್ತು. ಆದರೆ ದಾಳಿ ನೇತೃತ್ವವಹಿಸಿದ್ದ ಕೆಲವರು ಪೊಲೀಸರ ಬಲೆಗೆ ಬಿದ್ದುದರಿಂದ ಹೆಚ್ಚಿನ ಅನಾಹುತವಾಗುವುದು ತಡೆದಿತ್ತು. ಆದರೆ ಬೆಂಗಳೂರು ಮತ್ತು ಗೋವಾದ ಸಂಪೂರ್ಣ ಮಾಹಿತಿ ಉಗ್ರಗಾಮಿಗಳ ಕೈ ಸೇರಿದ್ದು ಭದ್ರತೆ ಲೋಪವಾದರೆ ಅಪಾಯ ಗ್ಯಾರಂಟಿ.[ಒಸಾಮಾ ಅಂತಿಮ ಯಾತ್ರೆ ರಹಸ್ಯ ಬಹಿರಂಗ]

ಹಿಂದೊಮ್ಮೆ ಬಚಾವಾಗಿದ್ದ ಬೆಂಗಳೂರು
ಹಿಂದೊಮ್ಮೆ ಬೆಂಗಳೂರು ಐಎಸ್ ಐನ ಕೊಲಂಬೋ ಘಟಕದ ದಾಳಿಯಿಂದ ಬಚಾವಾಗಿತ್ತು. ಚೆನ್ನೈಸಹ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿತ್ತು. ಅರುಣ್ ಸೆಲ್ವರಾಜನ್ ನನ್ನು ಬಂಧಿಸಿದಾಗ ಇಂಥದ್ದೊಂದು ಮಾಹಿತಿ ಹೊರಬಿದ್ದಿತ್ತು. ಪೊಲೀಸರ ಬಳಿ ಆತ ಬೆಂಗಳೂರು ಮತ್ತು ಚೆನ್ನೈ ದಾಳಿಗೆ ರೂಪಿಸಿದ್ದ ಸಂಚಿನ ಕುರಿತಾಗಿ ವಿವರ ನೀಡಿದ್ದ. ಇನ್ನು ರಾಜಸ್ಥಾನದ ಮೇಲೆ ಕಣ್ಣಿಟ್ಟಿರುವುದು ಇಂಡಿಯನ್ ಮುಜಾಹಿದ್ದೀನ್. ಇತ್ತಿಚೇಗೆ ಪೊಲೀಸರಿಂದ ಬಂಧಿತನಾಗಿದ್ದ ತೆಹಸೀನ್ ಅಕ್ತರ್ ಅನೇಕ ರಹಸ್ಯಗಳನ್ನು ಬಾಯಿ ಬಿಟ್ಟಿದ್ದ. ಅಮೆರಿಕದ ಪ್ರವಾಸಿಗರು ಭಾರತದಲ್ಲಿ ಉಳಿದುಕೊಂಡಿದ್ದ ಹೋಟೆಲ್ ಮೇಲೆ ದಾಳಿ ಮಾಡುವ ಉದ್ದೇಶ ಇಟ್ಟುಕೊಂಡಿದ್ದೆವು ಎಂದು ಹೇಳಿದ್ದ.

ಒಟ್ಟಿನಲ್ಲಿ ಉಗ್ರರು, ಭಾರತದ ಪ್ರಮುಖ ನಗರಗಳ, ಪ್ರವಾಸಿ ತಾಣಗಳ, ಐಷರಾಮಿ ಹೋಟೆಲ್‌ಗಳ ಸಂಪೂರ್ಣ ಮಾಹಿತಿಯನ್ನು ಇಟ್ಟುಕೊಂಡಿದ್ದು ಯಾವ ಕ್ಷಣದಲ್ಲಿ ಬೇಕಾದರೂ ದಾಳಿ ನಡೆಸಬಹುದು ಎಂದು ಹೇಳಲಾಗಿದೆ.

English summary
Since Sept 4 there have been three alerts regarding a possible al-Qaeda strike in India. However the latest one has been termed Grade A by the intelligence agencies who also do not rule out the possibility of the al-Qaeda and the ISIS coming together and striking India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X