ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶ: ಕೊನೆಗೂ ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ ಅಖಿಲೇಶ್

By ವಿಕಾಸ್ ನಂಜಪ್ಪ
|
Google Oneindia Kannada News

ಲಕ್ನೋ, ಜನವರಿ 24: ಸುಲ್ತಾನ್ ಪುರದಿಂದ ಅಖಿಲೇಶ್ ಯಾದವ್ ತಮ್ಮ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಇಲ್ಲಿವರೆಗೆ ಕೌಟುಂಬಿಕ ಜಗಳದಲ್ಲೇ ಮುಳುಗೇಳುತ್ತಿದ್ದ ಅಖಿಲೇಶ್ ಯಾದವ್ ಕೊನೆಗೂ ನಿಧಾನವಾಗಿ ಪ್ರಚಾರಕ್ಕೆ ಧುಮುಕಿದ್ದು ಇನ್ನು ಮುಂದೆ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ.

ಉತ್ತರ ಪ್ರದೇಶ ಚುನಾವಣೆಗೆ ಕಲವೇ ದಿನಗಳಿದ್ದು, ಈಗಾಗಲೇ ಬಿಜೆಪಿ ಮತ್ತು ಬಹುಜನ ಸಮಾಜವಾದಿ ಪಕ್ಷ ಒಂದು ಹಂತದ ಪ್ರಚಾರ ಮುಗಿಸಿ ಕುಳಿತಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ತಳಮಟ್ಟದ ಪ್ರಚಾರ ನಡೆಸಲೇಬೇಕಾದ ಒತ್ತಡ ಯುವ ನಾಯಕ ಅಖಿಲೇಶ್ ಮೇಲಿದೆ.[ಪಂಜಾಬ್: ಕಾಂಗ್ರೆಸಿನಲ್ಲಿ ಸಿದ್ದು-ಅಮರಿಂದರ್ ಜಟಾಪಟಿ]

 Akhilesh Yadav to kick start UP election campaign

ಅಖಿಲೇಶ್ ಯಾದವ್ ಜತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯೂ ಮುಂದಿನ ದಿನಗಳಲ್ಲಿ ಕೈ ಜೋಡಿಸುವ ಸಾದ್ಯತೆ ಇದೆ. ಸದ್ಯ ರಾಹುಲ್ ಗಾಂಧಿ ಪಂಜಾಬ್ ಮತ್ತು ಗೋವಾ ಪ್ರಚಾರದಲ್ಲಿ ನಿರತರಾಗಿದ್ದು ಅಲ್ಲಿಂದ ಬಂದ ನಂತರ ಅಖಿಲೇಶ್ ಜತೆ ಕೈ ಜೋಡಿಸಲಿದ್ದಾರೆ.[ಉತ್ತರ ಪ್ರದೇಶ: ಕಾಂಗ್ರೆಸ್-ಎಸ್ಪಿ ಗೆಲುವಿಗೆ 35-37% ಮತಗಳು ಸಾಕಂತೆ!]

ಎರಡೂ ಪಕ್ಷಗಳು ಒಟ್ಟಾಗಿ ಚುನಾವಣಾ ಪ್ರಚಾರ ನಡೆಸಲಿದ್ದು ಈ ಮೂಲಕ ಮತದಾರರಿಗೆ ತಮ್ಮ ಮೈತ್ರಿ ಗಟ್ಟಿಯಾಗಿದೆ ಎಂಬ ಸಂದೇಶ ನೀಡಲು ಚಿಂತನೆ ನಡೆಸಿವೆ. ಮುಖ್ಯವಾಗಿ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಒಟ್ಟಾಗಿ ವೇದಿಕೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ಇವರಿಬ್ಬರ ಜಂಟಿ ಪ್ರಚಾರದ ವೇಳಾಪಟ್ಟಿ ಒಂದೆರಡು ದಿನದಲ್ಲಿ ಹೊರ ಬೀಳಲಿದೆ.

ಬುಧವಾರ ಲಖಂಪುರದಲ್ಲಿ ರ್ಯಾಲಿ ನಡೆಯಲಿದ್ದು ಅಖಿಲೇಶ್ ಯಾದವ್ ಒಬ್ಬರೇ ಭಾಗವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಕೂಡಾ ಸಮಾಜವಾದಿ ಪಕ್ಷದ ಪರವಾಗಿ ಪ್ರಚಾರಕ್ಕೆ ಇಳಿಯಲಿದ್ದಾರೆ.

English summary
Akhilesh Yadav is all set to launch his campaign for the Uttar Pradesh Assembly Elections 2017 from Sultanpur on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X