ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪಲಿ ಹೊಡೆತ ಪ್ರಕರಣ: ಸಂಸದ ರವೀಂದ್ರ ಮೇಲೆ ಏರ್ ಲೈನ್ ಗಳ ನಿಷೇಧ

ಏರ್ ಇಂಡಿಯಾ ಸಿಬ್ಬಂದಿ ಮೇಲೆ ಚಪ್ಪಲಿಯಿಂದ ಪ್ರಹಾರ ನಡೆಸಿದ ರವೀಂದ್ರ ಅವರನ್ನು ಖಾಸಗಿ ವಿಮಾನ ಸಂಸ್ಥೆಯಾದ ಇಂಡಿಗೋ ಸಂಸ್ಥೆ ಕೂಡಾ ನಿಷೇಧಿಸಿದೆ.

|
Google Oneindia Kannada News

ನವದಹೆಲಿ, ಮಾರ್ಚ್ 24: ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದು ದೊಡ್ಡ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಮಹಾರಾಷ್ಟ್ರದ ಒಸ್ಮಾನಾಬಾದ್ ಸಂಸತ್ ಕ್ಷೇತ್ರದ ಸಂಸದ, ಶಿವಸೇನೆಯ ನಾಯಕ ರವೀಂದ್ರ ಗಾಯಕ್ವಾಡ್ ಅವರ ಮೇಲೆ ಏರ್ ಲೈನ್ಸ್ ಸಂಸ್ಥೆಗಳ ಸಂಘಟನೆಯು ನಿಷೇಧ ಹೇರಿದೆ.

ಇದರ ಫಲವಾಗಿ, ಏರ್ ಇಂಡಿಯಾ ಸೌಲಭ್ಯದಿಂದ ವಂಚಿತರಾಗಿದ್ದ ರವೀಂದ್ರ ಗಾಯಕ್ವಾಡ್ ಅವರನ್ನು ಖಾಸಗಿ ವಿಮಾನ ಸಂಸ್ಥೆಯಾದ ಇಂಡಿಗೋ ಸಂಸ್ಥೆ ಕೂಡಾ ನಿಷೇಧಿಸಿದೆ. ಸಂಘಟನೆಯ ನಿಷೇಧದ ಪರಿಣಾಮ ಮತ್ತಷ್ಟು ಗಾಢವಾಗಿರಲಿದ್ದು, ಮತ್ತಷ್ಟು ಖಾಸಗಿ ವಿಮಾನ ಸೇವಾ ಸಂಸ್ಥೆಗಳು ರವೀಂದ್ರ ಅವರನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಮೇಯ ಉದ್ಭವವಾಗಿದೆ.

Airlines Association Bans Shiv Sena MP Ravindra Gaikwad

ಏರ್ ಇಂಡಿಯಾ ವಿಮಾನದಲ್ಲಿ ತಮಗೆ ಅತಿ ಗಣ್ಯರಿಗೆ ನೀಡಲಾಗುವ ಸೇವೆಯನ್ನು ನೀಡಲಿಲ್ಲ ಎಂಬ ಕಾರಣಕ್ಕೆ ಗುರುವಾರ, ನವದಹೆಲಿಯ ವಿಮಾನ ನಿಲ್ದಾಣದಲ್ಲಿ ಪುಣೆಯಿಂದ ಬಂದಿಳಿದ ವಿಮಾನದಲ್ಲೇ ಪ್ರತಿಭಟನೆ ಮಾಡಿದ್ದ ರವೀಂದ್ರ, ತಮ್ಮನ್ನು ಸಮಾಧಾನಪಡಿಸಲು ಬಂದ ಏರ್ ಇಂಡಿಯಾ ಸಿಬ್ಬಂದಿ ಮೇಲೆ ಚಪ್ಪಲಿಯಿಂದ ಪ್ರಹಾರ ಮಾಡಿದ್ದರು.

English summary
An association of airlines has decided that Ravindra Gaikwad, a Shiv Sena MP who assaulted a staff member of Air India, will not be allowed on flights "with immediate effect," a statement said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X