ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮಿಡಿಯನ್ ಕಪಿಲ್ ಶರ್ಮ ಮೇಲೆ ಏರ್ ಇಂಡಿಯಾ ಕೆಂಗಣ್ಣು

ಶಿವಸೇನಾ ಶಾಸಕ ಗಾಯಕ್ವಾಡ್ ಅವರ ವಿಮಾನಯಾನ ವಿವಾದ ಸುದ್ದಿಯಲ್ಲಿರುವ ಹೊತ್ತಿನಲ್ಲೇ ಕಾಮಿಡಿಯನ್ ಕಪಿಲ್ ಶರ್ಮ ಅವರು ವಿಮಾನದಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.

By Mahesh
|
Google Oneindia Kannada News

ಮುಂಬೈ, ಮಾರ್ಚ್ 27: ಶಿವಸೇನಾ ಶಾಸಕ ರವೀಂದ್ರ ಗಾಯಕ್ವಾಡ್ ಅವರ ವಿಮಾನಯಾನ ವಿವಾದ ಸುದ್ದಿಯಲ್ಲಿರುವ ಹೊತ್ತಿನಲ್ಲೇ ಕಾಮಿಡಿಯನ್ ಕಪಿಲ್ ಶರ್ಮ ಅವರು ವಿಮಾನದಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ಕಪಿಲ್ ಶರ್ಮ ವಿರುದ್ಧ ದೂರು ನೀಡಲು ಏರ್ ಇಂಡಿಯಾ ಸಿದ್ಧವಾಗುತ್ತಿದೆ. ಇಷ್ಟಕ್ಕೂ ಕಪಿಲ್ ಶರ್ಮ ಮಾಡಿದ್ದೇನು? ಮುಂದೆ ಓದಿ...

ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಅವರಿಗೆ ಭಾರತದ ವಿಮಾನಗಳನ್ನೇರದಂತೆ ದಿಗ್ಭಂಧನ ವಿಧಿಸಿದ ಬಳಿಕ ಈಗ ಕಾಮಿಡಿಯನ್, ನಟ ಕಪಿಲ್ ಶರ್ಮ ಅವರ ಮೇಲೆ ಏರ್ ಇಂಡಿಯಾ ಕಣ್ಣು ಬಿದ್ದಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಮಾನದಲ್ಲಿ ಕಪಿಲ್ ಶರ್ಮ ಅವರು ನಡೆದುಕೊಂಡ ರೀತಿ ಆಕ್ಷೇಪಾರ್ಹವಾಗಿತ್ತು ಎಂದು ಏರ್ ಇಂಡಿಯಾ ಅಭಿಪ್ರಾಯಪಟ್ಟಿದೆ.

AI to warn Kapil Sharma for misbehaving on flight

ಮಾರ್ಚ್ 16ರಂದು ಈ ಘಟನೆ ನಡೆದಿದ್ದು, ದೆಹಲಿ ಹಾಗೂ ಮೇಲ್ಬೋರ್ನ್ ನಡುವಿನ ವಿಮಾನದಲ್ಲಿ ಕಪಿಲ್ ಶರ್ಮ ಅವರು ಕೆಟ್ಟದಾಗಿ ನಡೆದುಕೊಂಡಿದ್ದಾರೆ ಎಂಬ ವರದಿ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಪೂರ್ತಿ ವರದಿ ತರೆಸಿಕೊಳ್ಳಲಾಗುವುದು ನಂತರ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಏರ್ ಇಂಡಿಯಾ ಮುಖ್ಯಸ್ಥ ಅಶ್ವನಿ ಲೋಹಾನಿ ಹೇಳಿದ್ದಾರೆ.

ಮೊದಲಿಗೆ ಈ ಬಗ್ಗೆ ವಿವರಣೆ ನೀಡುವಂತೆ ಕಪಿಲ್ ಶರ್ಮ ಅವರಿಗೂ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಿದರು.

ಮಾರ್ಚ್ 16ರಂದು ವಿಮಾನಯಾನದ ಸಂದರ್ಭದಲ್ಲಿ ಹೆಚ್ಚು ಮದ್ಯ ಸೇವಿಸಿ, ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದರು ಹಾಗು ಅವಾಚ್ಯ ಶಬ್ದ ಪ್ರಯೋಗಿಸಿದರು ಎಂಬ ಆರೋಪ ಕೇಳಿ ಬಂದಿದೆ. ಸಿಬ್ಬಂದಿಗಳ ಮಾತು ಕೇಳದ ಕಪಿಲ್ ಅವರನ್ನು ತಹಬಂದಿಗೆ ತರಲು ಒಬ್ಬ ಪೈಲಟ್ ಬರಬೇಕಾಯಿತು ಎಂಬ ಮಾಹಿತಿ ಸಿಕ್ಕಿದೆ.

English summary
After telling Shiv Sena Member of Parliament Ravindra Gaikwad that he is no longer welcome on Indian flights, Air India is set to warn popular TV comedian, Kapil Sharma.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X