ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಹಮದಾಬಾದ್‌ನ ಅಂಡರ್ ವಾಟರ್ ರೆಸ್ಟೋರೆಂಟ್‌ಗೆ ಬಿತ್ತು ಬೀಗ!

By ರಮೇಶ್.ಬಿ
|
Google Oneindia Kannada News

ಅಹಮಾದಬಾದ್, ಫೆಬ್ರವರಿ 06 : ಗುಜರಾತ್ ರಾಜಧಾನಿ ಅಹಮದಾಬಾದ್‌ನಲ್ಲಿ ಆರಂಭವಾಗಿದ್ದ ದೇಶದ ಪ್ರಥಮ ಅಂಡರ್ ವಾಟರ್ ರೆಸ್ಟೋರೆಂಟ್‌ಗೆ ಬೀಗ ಬಿದ್ದಿದೆ. ನಗರಸಭೆ ಅಧಿಕಾರಿಗಳು ರೆಸ್ಟೋರೆಂಟ್‌ಗೆ ಬೀಗ ಜಡಿದಿದ್ದಾರೆ.

ಭೂಮಿಯಿಂದ 20 ಅಡಿ ಆಳದಲ್ಲಿ ಆರಾಮವಾಗಿ ಕುಳಿತು ನೀರಿನೊಂದಿಗೆ ಆಟವಾಡುತ್ತ ರೆಸ್ಟೋರೆಂಟ್‌ನಲ್ಲಿ ಆಹಾರ ಸವಿಯಬಹುದಾಗಿತ್ತು. ಅಹಮದಾಬಾದ್‌ನ ಎಸ್‌ಪಿ ರಿಂಗ್‌ ರಸ್ತೆಯಲ್ಲಿ ಉದ್ಯಮಿ ಭರತ್ ಭಟ್ ಅವರು ಅಂಡರ್ ವಾಟರ್ ರೆಸ್ಟೋರೆಂಟ್ 'ರೀಯಲ್ ಪೊಸಿಡಾನ್' ಆರಂಭಿಸಿದ್ದರು. [ನೀರಿನ ಅಡಿ ಕುಳಿತು ನಿಮ್ಮಿಷ್ಟದ ಆಹಾರ ಸೇವಿಸುತ್ತಿದ್ದರೆ]

hotel

ಫೆಬ್ರವರಿ 1 ರಂದು ಉದ್ಘಾಟನೆಗೊಂಡ ಈ ರೆಸ್ಟೋರೆಂಟ್ ಆರಂಭಿಸಲು ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಅನುಮತಿ ಪಡೆದಿರಲಿಲ್ಲ. ಆದ್ದರಿಂದ, ರೆಸ್ಟೋರೆಂಟ್‌ಗೆ ಸ್ಥಳೀಯ ನಗರಸಭೆ ಅಧಿಕಾರಿಗಳು ಗುರುವಾರ ಬೀಗ ಜಡಿದಿದ್ದಾರೆ. [ದಾವೂದ್ 2.5 ಸಾವಿರ ಕೋಟಿ ಹಣ ಹೂಡಿಕೆ ಮಾಡಿದ್ದೆಲ್ಲಿ?]

'ರೀಯಲ್ ಪೊಸಿಡಾನ್' ಹೆಸರಿನ ರೆಸ್ಟೋರೆಂಟ್‌ನಲ್ಲಿ ಚೈನೀಸ್, ಥಾಯ್, ಮೆಕ್ಸಿಕನ್ ಮತ್ತು ಭಾರತದ ಸಾಂಪ್ರದಾಯಿಕ ಆಹಾರವನ್ನು ಸವಿಯಬಹುದಾಗಿತ್ತು. ಸದ್ಯ, ರೆಸ್ಟೋರೆಂಟ್ ಆರಂಭಿಸಲು ಅನುಮತಿ ಪಡೆಯುವ ತನಕ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸುವಂತೆ ನಗರಸಭೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. [ಕಳೆದ 59 ವರ್ಷಗಳಿಂದ ಇಲ್ಲಿ 'ಕಾಂಗ್ರೆಸ್' ನದ್ದೇ ಆಡಳಿತ!]

ರೆಸ್ಟೋರೆಂಟ್‌ಗೆ ಬೀಗ ಬಿದ್ದಿರುವುದರಿಂದ ಅಂಡರ್ ವಾಟರ್‌ ರೆಸ್ಟೋರೆಂಟ್‌ನಲ್ಲಿ ಕುಳಿತು ಉಪಹಾರ ಸೇವಿಸುವ ಜನರ ಕನಸಿಗೆ ಹಿನ್ನಡೆ ಉಂಟಾಗಿದೆ. 'ರೀಯಲ್ ಪೊಸಿಡಾನ್'ಗೆ ಬಿದ್ದಿರುವ ಬೀಗ ಬೇಗ ತೆರೆಯಲಿ.

English summary
Ahmedabad Municipal Corporation (AMC) has officially sealed the Real Poseidon, Ahmedabad’s first underwater restaurant. According to reports the restaurant sealed after officials discovered that certain development permissions had not been approved for set up restaurant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X