ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುನೆಸ್ಕೋ ಪಾರಂಪರಿಕ ನಗರವಾದ ಅಹಮದಾಬಾದ್!

By Mahesh
|
Google Oneindia Kannada News

ಅಹಮದಾಬಾದ್, ಜುಲೈ 09: ಗುಜರಾತ್ ರಾಜಧಾನಿ ಐತಿಹಾಸಿಕ ನಗರಿ ಅಹಮದಾಬಾದ್ ಈಗ ವಿಶ್ವ ಪಾರಂಪರಿಕ ನಗರಗಳ ಪಟ್ಟಿಗೆ ಸೇರ್ಪಡೆಗೊಂಡಿದೆ ಹಾಗೂ ಈ ಮಾನ್ಯತೆ ಪಡೆದ ಭಾರತದ ಮೊದಲ ನಗರ ಎಂಬ ಕೀರ್ತಿಗೆ ಭಾಜನವಾಗಿದೆ.

ಯುನೆಸ್ಕೋದ ಪಾರಂಪಾರಿಕ ತಾಣಗಳ ಸಮಿತಿ ಕಾಂಬೋಡಿಯಾ, ಚೀನಾ ಮತ್ತು ಭಾರತದಲ್ಲಿನ ತಾಣಗಳನ್ನು ವಿಶ್ವ ಪಾರಂಪಾರಿಕ ತಾಣಗಳ ಪಟ್ಟಿಗೆ ಸೇರಿಸಿದೆ.

Ahmedabad declared India’s first heritage city by UNESCO

2010ರಲ್ಲಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ, ಅಹಮದಾಬಾದ್ ನಗರವನ್ನು ವಿಶ್ವ ಪಾರಂಪರಿಕ ನಗರಗಳ ಪಟ್ಟಿಗೆ ಸೇರ್ಪಡೆಗೊಳಿಸಲು ಪ್ರಸ್ತಾವನೆ ಕಳುಹಿಸಿದ್ದರು.

ಪೋಲೆಂಡಿನ ಕಾರ್ಲೋದಲ್ಲಿ ನಡೆದ ಯುನೆಸ್ಕೋದ ವಿಶ್ವ ಪಾರಂಪರಿಕ ಸಮಿತಿ ಸಭೆಯಲ್ಲಿ ಸುದೀರ್ಘ ಸಭೆ ಮತ್ತು ಚರ್ಚೆಗಳ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಸಬರಮತಿ ನದಿಯ ಪೂರ್ವ ದಂಡೆಯ ಮೇಲಿರುವ ಅಹಮದಾಬಾದ್ ನಗರವನ್ನು 15ನೇ ಶತಮಾನದಲ್ಲಿ ಸುಲ್ತಾನ್‌ ಅಹ್ಮದ್‌ ಷಾ ಸ್ಥಾಪಿಸಿದ. ಶ್ರೀಮಂತ ವಾಸ್ತುಶಿಲ್ಪ ಪರಂಪರೆ ಹಾಗೂ ಸಾಂಪ್ರದಾಯಿಕ ಮನೆ, ಬೀದಿ, ಸಾರ್ವಜನಿಕ ಬಾವಿ ಮುಂತಾದವು ಸುಲ್ತಾನರ ಆಡಳಿತ ಅವಧಿಯಲ್ಲಿ ನಿರ್ಮಾಣಗೊಂಡಿದ್ದು ವಿಶೇಷ.

English summary
More than 600 year old Walled City of Ahmedabad founded by Ahmed Shah has been declared India’s first World Heritage City, recognising heritage value of the walled city’s unique heritage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X