ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟಾ ಹಗರಣ: ಸೋನಿಯಾ VS ಸುಬ್ರಮಣಿಯನ್ ಸ್ವಾಮಿ

|
Google Oneindia Kannada News

ನವದೆಹಲಿ, ಏಪ್ರಿಲ್, 28: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇದೀಗ 'ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣ'ದ ಮಸಿ ಅಂಟಿಕೊಂಡಿದೆ. ಒಂದೆಡೆ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಒಂದಕ್ಕೊಂದು ಸಂಬಂಧವಿಲ್ಲದ ಸುದ್ದಿ ಅಂದುಕೊಳ್ಳಬೇಡಿ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇದ್ದ ವಾಕ್ಸಮರ, ಇದೀಗ ಸೋನಿಯಾ ಗಾಂಧಿ ಮತ್ತು ಸುಬ್ರಮಣಿಯನ್ ಸ್ವಾಮಿ ನಡುವೆ ವರ್ಗಾವಣೆಯಾಗಿದೆ.[ಕೇಜ್ರಿವಾಲ್ ಓರ್ವ ನಕ್ಸಲೈಟ್‌: ಸುಬ್ರಮಣಿಯನ್ ಸ್ವಾಮಿ]

'ನನ್ನ ವಿರುದ್ಧ ಮಾಡುತ್ತಿರುವ ಆರೋಪಗಳೆಲ್ಲಾ ಆಧಾರ ರಹಿತ. ಈ ಆರೋಪಗಳಿಗೆಲ್ಲಾ ನಾನು ಹೆದರುವುದಿಲ್ಲ' ತೇಜೋವಧೆ ಮಾಡುವ ಉದ್ದೇಶದಿಂದಲೇ ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಲಾಗುತ್ತಿದೆ. ನಾನು ತಪ್ಪು ಮಾಡಿದ್ದೇನೆ ಎಂಬುದಕ್ಕೆ ಏನು ಆಧಾರವಿದೆ? ಎಂದು ಸೋನಿಯಾ ಪ್ರಶ್ನೆ ಮಾಡಿದ್ದಾರೆ.[ಕಾಂಗ್ರೆಸ್ ಬುಡ ಅಲ್ಲಾಡಿಸುತ್ತಿರುವ ನ್ಯಾಶನಲ್ ಹೆರಾಲ್ಡ್ ಹಗರಣ ಕಂಪ್ಲೀಟ್ ವಿವರ]

ಇನ್ನೊಂದೆಡೆ ಪ್ರಮಾಣ ವಚನ ತೆಗೆದುಕೊಂಡ ತಕ್ಷಣವೇ ಸ್ವಾಮಿ ಸೋನಿಯಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು 'ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣ'ದಲ್ಲಿ ಸೋನಿಯಾ ಪಾತ್ರವಿದೆ ಎಂದು ಹೇಳಿದ್ದಾರೆ.

ಇಟಲಿ ನ್ಯಾಯಾಲಯದ ತೀರ್ಪು

ಇಟಲಿ ನ್ಯಾಯಾಲಯದ ತೀರ್ಪು

ಷಅಗಸ್ಟಾ ವೆಸ್ಟ್​ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿ ಕೋರ್ಟ್ ನೀಡಿದ ತೀರ್ಪು ಭಾರತದಲ್ಲಿ ಅಲ್ಲೋಲ ಕಲ್ಲೋಲ ಮಾಡಿತು. ತೀರ್ಪಿನಲ್ಲಿ ಸೋನಿಯಾ ಹೆಸರು ಉಲ್ಲೇಖಗೊಂಡಿರುವುದನ್ನು ಸ್ವಾಮಿ ಗಮನಕ್ಕೆ ತಂದ ನಂತರ ಗಲಾಟೆ ಆರಂಭವಾಯಿತು.

ಕಪ್ಪುಪಟ್ಟಿಗೆ ಕಂಪನಿ

ಕಪ್ಪುಪಟ್ಟಿಗೆ ಕಂಪನಿ

ಇಟಲಿ ಕೋರ್ಟ್ ಹೆಲಿಕಾಪ್ಟರ್ ಹಗರಣದ ತೀರ್ಪಿನ ಬಗ್ಗೆ ಹೇಳುಇತ್ತಲೇ ಎನ್ ಡಿಎ ಸರ್ಕಾರ ಅಗಸ್ಟಾ ವೆಸ್ಟ್​ಲ್ಯಾಂಡ್ ಮತ್ತು ಅದರ ಮಾತೃ ಕಂಪನಿ ಫಿನ್​ವೆುಕ್ಯಾನಿಕಾವನ್ನು ಕಪ್ಪುಪಟ್ಟಿಗೆ ಸೇರುಸುವ ಬಗ್ಗೆಯೂ ಚಿಂತನೆ ಆರಂಭಿಸಿ ವರದಿ ನೀಡಲು ಸಿಬಿಐಗೆ ಸೂಚಿಸಿದೆ.

 ಸುಳ್ಳು ಆರೋಪಕ್ಕೆ ಹೆದರಲ್ಲ

ಸುಳ್ಳು ಆರೋಪಕ್ಕೆ ಹೆದರಲ್ಲ

ಕಳೆದ ಎರಡು ವರ್ಷಗಳಲ್ಲಿ ಇಲ್ಲದ ಆರೋಪ ಈಗ ಹೇಗೆ ಬರಲು ಸಾಧ್ಯ? ಎಂದು ಪ್ರಶ್ನೆ ಮಾಡಿದ ಸೋನಿಯಾ ಗಾಂಧಿ ತಾವು ಯಾವುದೇ ಬಗೆಯ ತನಿಖೆಗೆ ಸಿದ್ಧ ಎಂದು ಹೇಳಿದರು.

ಕಲಾಪ ಬಲಿ

ಕಲಾಪ ಬಲಿ

ಸಂಸತ್ ನ ಉಭಯ ಸದನಗಳ ಕಲಾಪ ಮತ್ತೆ ಹಗರಣದ ಗಲಾಟೆಗೆ ಬಲಿಯಾಗುತ್ತಿದೆ. ಗುರುವಾರ ಸಹ ಅಲ್ಲೋಲ-ಕಲ್ಲೋಲ ಎದ್ದಿದ್ದು ಕಾಂಗ್ರೆಸ್ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ.

English summary
Angry exchanges between opposition Congress and ruling BJP members over Subramaniam Swamy seeking to drag Sonia Gandhi's name in the controversial AgustaWestland chopper contract bribery case led to adjournments of the Rajya Sabha.The naming of Sonia Gandhi led the Congress members to angrily storm into the Well, with a handful even moving closer to the treasury benches menacingly. Members of the treasury benches too got up on their seats to counter the opposition.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X