ಸ್ವದೇಶಿ ನಿರ್ವಿುತ ಅಗ್ನಿ 5 ಕ್ಷಿಪಣಿ ಯಶಸ್ವಿ ಪರೀಕ್ಷೆ

Posted By:
Subscribe to Oneindia Kannada

ಬಾಲಸೂರ್(ಒರಿಸ್ಸಾ), ಡಿಸೆಂಬರ್ 26: ಸ್ವದೇಶಿ ನಿರ್ವಿುತ ಖಡಾಂತರ ಅಣ್ವಸ್ತ್ರ ಸಹಿತ ದೂರಗಾಮಿ ಕ್ಷಿಪಣಿ 'ಅಗ್ನಿ-5' ಪ್ರಾಯೋಗಿಕ ಪರೀಕ್ಷೆ ಇಲ್ಲಿನ ಕಡಲ ತೀರದಲ್ಲಿ ಯಶಸ್ವಿಯಾಗಿ ಪರೀಕ್ಷೆಗೊಳಪಟ್ಟಿದೆ. ಅಗ್ನಿ-5 ಬರೋಬ್ಬರಿ 5000 ಕಿ.ಮೀ.ಗಿಂತ ಹೆಚ್ಚು ದೂರದ ಗುರಿ ಮೇಲೆ ದಾಳಿ ನಡೆಸಬಹುದಾಗಿದೆ. ಚೀನಾದ ಉತ್ತರ ಭಾಗದ ಮೇಲೆ ನಿಖರವಾಗಿ ದಾಳಿ ನಡೆಸುವಷ್ಟು ಪ್ರಬಲವಾಗಿದೆ.

ಕ್ಷಿಪಣಿ 17 ಮೀಟರ್ ಉದ್ದವಿದ್ದು, 2 ಮೀಟರ್ ಅಗಲವಾಗಿದೆ. ಒಂದು ಟನ್ ಅಣ್ವಸ್ತ್ರ ಸಾಗಿಸುವಷ್ಟು ಸಾಮರ್ಥ್ಯ ಹೊಂದಿದೆ. 5,000 ಕಿ.ಮೀ ವ್ಯಾಪ್ತಿಯ ತನಕ ತನ್ನ ಟಾರ್ಗೆಟ್ ಹೊಂದಬಹುದಾಗಿದೆ. ಏಷ್ಯಾದ ಯಾವುದೇ ಭಾಗ , ಆಫ್ರಿಕಾ ಹಾಗೂ ಯುರೋಪಿನ ಕೆಲ ಭಾಗಕ್ಕೆ ಗುರಿ ಇಡಬಹುದಾಗಿದೆ.

Agni-V, India's longest range nuclear missile, test launched off Odisha coast

ಈ ಯಶಸ್ವಿ ಪರೀಕ್ಷೆ ಮೂಲಕ ಯುಎಸ್, ರಷ್ಯಾ, ಚೀನಾ, ಫ್ರಾನ್ಸ್ ಹಾಗೂ ಬ್ರಿಟನ್ ದೇಶಗಳ ಸಾಲಿಗೆ ಭಾರತ ಸೇರ್ಪಡೆಗೊಂಡಿದೆ. ಏಪ್ರಿಲ್ 19,2012ರಂದು ಮೊದಲ ಬಾರಿಗೆ ಹಾಗೂ ಸೆಪ್ಟೆಂಬರ್ 15,2013 ಹಾಗೂ ಜನವರಿ 31,2015ರಲ್ಲಿ ಮತ್ತೊಮ್ಮೆ ಯಶಸ್ವಿಯಾಗಿ ಪರೀಕ್ಷೆ ಮಾಡಲಾಗಿದೆ.

English summary
India on Monday successfully test-fired its indigenously developed intercontinental surface-to-surface nuclear capable ballistic missile Agni-V from the Abdul Kalam Island off the Odisha
Please Wait while comments are loading...